ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ.-ಜೂನ್
“ಇಂದಿನ ಶಿಕ್ಷಕರಿಗೆ ಯುವ ಜನರ ಮನಸ್ಸುಗಳನ್ನು ಒಪ್ಪಿಸಲಾಗಿದೆ ಮತ್ತು ಬರಲಿರುವ ವರ್ಷಗಳಲ್ಲಿಯೂ ಅವರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಬಲ್ಲರು. ನಮ್ಮ ಶಿಕ್ಷಕರು ಒಳ್ಳೆಯ ಪ್ರಭಾವವನ್ನು ಬೀರುತ್ತಿದ್ದಾರೆಂದು ನೀವು ನೆನಸುತ್ತೀರೊ? [ಜ್ಞಾನೋಕ್ತಿ 2:10, 11ನ್ನು ಓದಿ.] ಶಿಕ್ಷಕರ ಅತಿ ಮುಖ್ಯ ಪಾತ್ರವನ್ನು ಮತ್ತು ಅವರ ಕಷ್ಟಕರವಾದ ಪಂಥಾಹ್ವಾನದಲ್ಲಿ ಸಹಾಯಮಾಡಲು ಹೆತ್ತವರು ಏನು ಮಾಡಸಾಧ್ಯವಿದೆ ಎಂಬುದನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಎತ್ತಿತೋರಿಸುತ್ತದೆ.”
ಕಾವಲಿನಬುರುಜು ಜೂನ್15
“ಇಂಥ ಸಮಸ್ಯೆಗಳು ಕೊನೆಗೊಳ್ಳುವುದನ್ನು ನಾವು ಎಂದಾದರೂ ನೋಡುವೆವು ಎಂದು ನೀವು ನೆನಸುತ್ತೀರೋ? [ಮೊದಲನೆಯ ಲೇಖನದ ಆರಂಭದ ಉಲ್ಲೇಖವನ್ನು ಓದಿರಿ, ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಂಥ ಸಮಸ್ಯೆಗಳು ಬೇಗನೆ ಕೊನೆಗೊಳ್ಳಲಿವೆ ಎಂದು ದೇವರ ಪ್ರೇರಿತ ವಾಕ್ಯವು ನಮಗೆ ಪುನರಾಶ್ವಾಸನೆಯನ್ನು ಕೊಡುತ್ತದೆ. [ಕೀರ್ತನೆ 72:12-14ನ್ನು ಓದಿರಿ.] ಇದನ್ನು ಹೇಗೆ ಸಾಧಿಸಲಾಗುವುದು ಎಂಬುದನ್ನು ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ವಿವರಿಸುತ್ತದೆ.”
ಎಚ್ಚರ! ಏಪ್ರಿ.-ಜೂನ್
“ಅನೇಕ ಜನರು ಅಪರಾಧಿ ಮನೋಭಾವವನ್ನು ಅನಪೇಕ್ಷಣೀಯವಾಗಿ ಪರಿಗಣಿಸುತ್ತಾರೆ. ಅಂಥ ಮನೋಭಾವವು ನಮಗೆ ಯಾವುದೇ ಒಳಿತನ್ನು ಮಾಡಸಾಧ್ಯವಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಮೇಲೆ ಕೀರ್ತನೆ 32:3, 5ನ್ನು ಓದಿರಿ.] ನಾವು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಈ ಮನೋಭಾವವು ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ತೋರಿಸುತ್ತದೆ.”
ಕಾವಲಿನಬುರುಜು ಜುಲೈ1
“ಲಕ್ಷಾಂತರ ಜನರು ತಮ್ಮ ಆರಾಧನೆಯಲ್ಲಿ ಧಾರ್ಮಿಕ ವರ್ಣಚಿತ್ರಗಳು ಅಥವಾ ವಿಗ್ರಹಗಳನ್ನು ಉಪಯೋಗಿಸುತ್ತಾರೆ. ಆದರೆ ಅದೇ ಸಮಯದಲ್ಲಿ, ಇತರ ಲಕ್ಷಾಂತರ ಜನರು ಹಾಗೆ ಮಾಡುವುದು ತಪ್ಪೆಂದು ಭಾವಿಸುತ್ತಾರೆ. ಇದರ ಕುರಿತು ದೇವರು ಏನು ನೆನಸುತ್ತಾನೆಂದು ನೀವು ಎಂದಾದರೂ ಆಲೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಮೇಲೆ ಯೋಹಾನ 4:24ನ್ನು ಓದಿರಿ.] ಈ ಲೇಖನಗಳು, ಧಾರ್ಮಿಕ ವರ್ಣಚಿತ್ರಗಳ ಉಪಯೋಗವು ಹೇಗೆ ಆರಂಭಗೊಂಡಿತು ಮತ್ತು ವಿಗ್ರಹಾರಾಧನೆಯ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ತೋರಿಸುತ್ತವೆ.”