ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಒಂದಲ್ಲ ಒಂದು ದಿನ ವೈದ್ಯಕೀಯ ವಿಜ್ಞಾನವು ಏಡ್ಸ್ ರೋಗವನ್ನೂ ಒಳಗೊಂಡು ಎಲ್ಲಾ ಅಸ್ವಸ್ಥಗೆ ಅಂತ್ಯವನ್ನು ತರುವುದು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ‘ತಾನು ಅಸ್ವಸ್ಥನು’ ಎಂದು ಯಾರೂ ಹೇಳದಿರುವಂಥ ಒಂದು ಸಮಯವು ಬರುತ್ತದೆ ಎಂದು ನಮ್ಮ ಸೃಷ್ಟಿಕರ್ತನು ವಾಗ್ದಾನಿಸಿದ್ದಾನೆ. [ಯೆಶಾಯ 33:24ನ್ನು ಓದಿ.] ಎಚ್ಚರ!ದ ಈ ಸಂಚಿಕೆಯು, ಏಡ್ಸ್ ರೋಗವನ್ನು ಎಂದಾದರೂ ನಿಲ್ಲಿಸಸಾಧ್ಯವಿದೆಯೋ? ಎಂಬ ಪ್ರಶ್ನೆಯನ್ನು ಉತ್ತರಿಸುತ್ತದೆ.”
ಕಾವಲಿನಬುರುಜು ಫೆಬ್ರ.15
“ವ್ಯಕ್ತಿತ್ವವಿರುವ ಒಬ್ಬ ದೇವರು ಇದ್ದಾನೋ ಎಂದು ಕೆಲವರು ಆಶ್ಚರ್ಯಪಡುತ್ತಾರೆ. ಆತನು ಅಸ್ತಿತ್ವದಲ್ಲಿದ್ದಾನೆ ಎಂದು ಇತರರು ಹೇಳುತ್ತಾರಾದರೂ, ಆತನು ತಮ್ಮಿಂದ ತುಂಬ ದೂರವಿದ್ದಾನೆ ಎಂದು ಅವರು ನೆನಸುತ್ತಾರೆ. ನೀವಿದನ್ನು ಗಮನಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವುದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ ಎಂಬುದನ್ನು ಗಮನಿಸಿರಿ. [ಯೋಹಾನ 17:3ನ್ನು ಓದಿ.] ಈ ವಿಷಯದಲ್ಲಿ, ಈ ಸಂಚಿಕೆಯ ಆರಂಭದ ಲೇಖನಗಳು ಬಹಳ ಆಸಕ್ತಿದಾಯಕವಾಗಿರುವುದನ್ನು ನೀವು ಕಂಡುಕೊಳ್ಳುವಿರಿ.”
ಎಚ್ಚರ! ಜನ. - ಮಾರ್ಚ್
“ಅಧಿಕಾಂಶ ಜನರಲ್ಲಿ ಒಂದಲ್ಲ ಒಂದು ಕೆಟ್ಟ ಹವ್ಯಾಸಗಳಿರುತ್ತವೆ ಅಥವಾ ದುರ್ಗುಣಗಳಿರುತ್ತವೆ. ಹೀಗಿರುವಾಗ, ಇವುಗಳನ್ನು ಹೋಗಲಾಡಿಸಲು ನಾವು ಪ್ರಯತ್ನವನ್ನು ಮಾಡಬೇಕು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮಲ್ಲಿ ಹೆಚ್ಚಿನವರು ಹೀಗೆ ಮಾಡಲು ಬಯಸುತ್ತೇವಾದರೂ, ಇಲ್ಲಿ ಏನು ಹೇಳಲ್ಪಟ್ಟಿದೆಯೋ ಅದನ್ನು ನೀವೂ ಒಪ್ಪಿಕೊಳ್ಳುವ ಸಾಧ್ಯತೆಯಿದೆ. [ರೋಮಾಪುರ 7:18, 19ನ್ನು ಓದಿ.] ಎಚ್ಚರ!ದ ಈ ಸಂಚಿಕೆಯು [26ನೆಯ ಪುಟವನ್ನು ತೋರಿಸಿರಿ] ದೇವರ ದೃಷ್ಟಿಕೋನವನ್ನು ವಿವರಿಸುತ್ತದೆ, ಮತ್ತು ಯಾವುದೇ ಕೆಟ್ಟ ಹವ್ಯಾಸದ ವಿರುದ್ಧ ನಡೆಸುವ ಹೋರಾಟದಲ್ಲಿ ಜಯವನ್ನು ಗಳಿಸಲು ಇದು ಸಹಾಯಮಾಡಬಲ್ಲದು.
ಕಾವಲಿನಬುರುಜು ಮಾರ್ಚ್1
“ಈ ಆಸಕ್ತಿಕರ ಶಾಸ್ತ್ರವಚನದ ಬಗ್ಗೆ ನಾವು ನಿಮ್ಮ ಅಭಿಪ್ರಾಯವನ್ನು ಪಡೆದುಕೊಳ್ಳಲು ಬಯಸುತ್ತೇವೆ. [ಮತ್ತಾಯ 5:10ನ್ನು ಓದಿ.] ಒಬ್ಬ ವ್ಯಕ್ತಿಯು ಹಿಂಸೆಯನ್ನು ಅನುಭವಿಸುತ್ತಿರುವಾಗ ಅವನು ಹೇಗೆ ಸಂತೋಷದಿಂದಿರಸಾಧ್ಯವಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯಲ್ಲಿರುವ ಮೊದಲ ಎರಡು ಲೇಖನಗಳು, ತಮ್ಮ ಕಷ್ಟಾನುಭವಗಳ ಹೊರತಾಗಿಯೂ ಸಂತೋಷವನ್ನು ಕಾಪಾಡಿಕೊಂಡವರ ಕುರಿತು ತಿಳಿಸುತ್ತದೆ. ಅವರು ಹೇಗೆ ಸಂತೋಷವನ್ನು ಕಾಪಾಡಿಕೊಂಡರು ಎಂಬುದನ್ನು ಓದಲು ನೀವು ಆಸಕ್ತರಾಗಿರುವಿರಿ.”