ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಈಗ ಲೋಕದಲ್ಲಿರುವ ಸೋಂಕುರೋಗಗಳಲ್ಲಿ ಏಡ್ಸ್ ರೋಗವು ಪ್ರಮುಖ ಹಂತಕವಾಗಿದೆ. ಆದರೆ ಈ ರೋಗಕ್ಕೆ ಬಲಿಯಾಗಿರುವವರಿಗೆ ಏನಾದರೂ ನಿರೀಕ್ಷೆಯಿದೆಯೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ‘ನಾನು ಅಸ್ವಸ್ಥನು’ ಎಂದು ಯಾರೊಬ್ಬರೂ ಹೇಳದಿರುವಂಥ ಸಮಯವೊಂದು ಬರಲಿದೆ ಎಂದು ನಮ್ಮ ಸೃಷ್ಟಿಕರ್ತನು ವಾಗ್ದಾನಿಸಿದ್ದಾನೆ. [ಯೆಶಾಯ 33:24ನ್ನು ಓದಿರಿ.] ಏಡ್ಸ್ ರೋಗವನ್ನು ಎಂದಾದರೂ ನಿಲ್ಲಿಸಲಾದೀತೆ? ಎಂಬ ಪ್ರಶ್ನೆಗೆ ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಉತ್ತರಿಸುವುದು.”
ಕಾವಲಿನಬುರುಜು ಮಾರ್ಚ್15
“ಯೇಸುವಿನ ಬೋಧನೆಗಳು ನಮ್ಮ ಸಮಯಕ್ಕೆ ಪ್ರಾಯೋಗಿಕವಾಗಿವೆ ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ತನ್ನ ಭೂಜೀವಿತದ ಕೊನೇ ದಿನದಂದು ಯೇಸು ಕೊಟ್ಟಂಥ ಈ ಆಜ್ಞೆಯನ್ನು ನೀವು ಸಮ್ಮತಿಸುತ್ತೀರಿ ಎಂಬುದರಲ್ಲಿ ಸಂಶಯವೇ ಇಲ್ಲ. [ಯೋಹಾನ 15:12ನ್ನು ಓದಿರಿ.] ಆ ದಿನದಂದು ಯೇಸು ಇತರ ಅಮೂಲ್ಯ ಪಾಠಗಳನ್ನು ಸಹ ಬೋಧಿಸಿದನು. ನಾವು ಅವುಗಳಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲೆವೆಂಬುದನ್ನು ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ತೋರಿಸುವುದು.”
ಎಚ್ಚರ! ಜನ. - ಮಾರ್ಚ್
“ನಮ್ಮಲ್ಲಿ ಹೆಚ್ಚಿನವರಿಗೆ ಕೆಲವು ದುರಭ್ಯಾಸಗಳಿವೆ. ಇವುಗಳನ್ನು ಜಯಿಸಸಾಧ್ಯವಿದೆ ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ನಂತರ ರೋಮಾಪುರ 7:18, 19ನ್ನು ಓದಿರಿ.] ದುರಭ್ಯಾಸಗಳ ಕುರಿತಾದ ದೇವರ ದೃಷ್ಟಿಕೋನವನ್ನು, ಎಚ್ಚರ! ಪತ್ರಿಕೆಯ ಈ ಸಂಚಿಕೆಯು [26ನೆಯ ಪುಟವನ್ನು ಸೂಚಿಸಿರಿ] ವಿವರಿಸುತ್ತದೆ ಮತ್ತು ಅವುಗಳ ವಿರುದ್ಧ ನಡೆಸುವ ಹೋರಾಟದಲ್ಲಿ ನಾವು ಜಯಗಳಿಸುವಂತೆ ಇದು ನಮಗೆ ಸಹಾಯಮಾಡಸಾಧ್ಯವಿದೆ.”
ಕಾವಲಿನಬುರುಜು ಏಪ್ರಿ.1
“ಕಡೇ ರಾತ್ರಿ ಭೋಜನ ಎಂದು ಸಾಂಪ್ರದಾಯಿಕವಾಗಿ ಕರೆಯಲ್ಪಡುವ ಊಟವನ್ನು ಇಲ್ಲಿ ತೋರಿಸಲಾಗಿದೆ. [ಪತ್ರಿಕೆಯ ಮುಖಪುಟ ಹಾಗೂ ಕೊನೇ ಪುಟವನ್ನು ತೋರಿಸಿರಿ.] ಕ್ರೈಸ್ತರು ಸ್ಮರಿಸುವಂತೆ ಆಜ್ಞಾಪಿಸಲ್ಪಟ್ಟಿರುವ ಏಕಮಾತ್ರ ಘಟನೆಯು ಇದಾಗಿದೆಯೆಂಬುದು ನಿಮಗೆ ಗೊತ್ತಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಲೂಕ 22:19ನ್ನು ಓದಿರಿ.] ಈ ಆಚರಣೆಯು ಏಕೆ ಅಷ್ಟು ಪ್ರಾಮುಖ್ಯವಾಗಿದೆ ಮತ್ತು ಅದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”