ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಮಕ್ಕಳನ್ನು ಬೆಳೆಸುವುದರ ಕುರಿತು ಸಿಗುವ ಸಹಾಯಕರ ಮಾಹಿತಿಯನ್ನು ಹೆತ್ತವರು ಗಣ್ಯಮಾಡುತ್ತಾರೆ. ಈ ಪತ್ರಿಕೆಯು, ಹೆತ್ತವರಿಗೆ ಅನೇಕ ಪ್ರಯೋಜನಕರ ಸಲಹೆಗಳನ್ನು ಒದಗಿಸುವಂಥ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿದೆ.” ಪುಟ 7ರಲ್ಲಿರುವ ಲೇಖನಕ್ಕೆ ತಿರುಗಿಸಿರಿ, ಮತ್ತು ಜ್ಞಾನೋಕ್ತಿ 22:6ನ್ನು ಓದಿರಿ.
ಕಾವಲಿನಬುರುಜು ಮಾರ್ಚ್15
“ಲೋಕದ ಸುತ್ತಲೂ ಇರುವ ಜನರು ಯೇಸುವಿನ ಬೋಧನೆಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ. [ಪುಟ 3 ಪ್ಯಾರಗ್ರಾಫ್ 1ರಲ್ಲಿರುವ ಉಲ್ಲೇಖವನ್ನು ಓದಿರಿ.] ಆದರೆ ಆ ಬೋಧನೆಗಳು ಇಂದು ಪ್ರಾಯೋಗಿಕವಾಗಿವೆ ಎಂದು ನಿಮಗನಿಸುತ್ತದೋ? ಉದಾಹರಣೆಗೆ ಈ ವಚನದಲ್ಲಿ ಕಂಡುಬರುವ ವಿಷಯವನ್ನು ತೆಗೆದುಕೊಳ್ಳಿ. [ಮತ್ತಾಯ 5:21, 22ಎ ಓದಿ. ಅನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು ಏನನ್ನು ಬೋಧಿಸಿದನು ಮತ್ತು ನಾವು ಅದರಿಂದ ಹೇಗೆ ಪ್ರಯೋಜನ ಪಡೆಯಬಲ್ಲೆವು ಎಂಬುದನ್ನು ಈ ಪತ್ರಿಕೆಯು ಪರಿಗಣಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಪುರಾತನ ಕಾಲಗಳಲ್ಲಿ, ತಮ್ಮ ತಂದೆಯನ್ನು ಹಾಗೂ ತಾಯಿಯನ್ನು ಸಹ ಸನ್ಮಾನಿಸುವಂತೆ ದೇವರು ಮಕ್ಕಳಿಗೆ ಆಜ್ಞೆಯಿತ್ತನು. [ವಿಮೋಚನಕಾಂಡ 20:12ನ್ನು ಓದಿ.] ಆದರೆ ತಾಯಂದಿರನ್ನು ಇಂದು ಯೋಗ್ಯ ರೀತಿಯಲ್ಲಿ ಸನ್ಮಾನಿಸಲಾಗುತ್ತದೆ ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು, ಅನೇಕ ದೇಶಗಳಲ್ಲಿ ತಾಯಂದಿರು ಎದುರಿಸುತ್ತಿರುವ ಪಂಥಾಹ್ವಾನಗಳನ್ನು ಮತ್ತು ಅವುಗಳನ್ನು ಅವರು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತದೆ.”
ಕಾವಲಿನಬುರುಜು ಏಪ್ರಿ.1
“ವಿಜ್ಞಾನ ಮತ್ತು ಬೈಬಲ್ ಒಂದಕ್ಕೊಂದು ವಿರುದ್ಧವಾಗಿದೆ ಎಂದು ಜನರು ಹೇಳುವುದನ್ನು ನೀವು ಕೇಳಿಸಿಕೊಂಡಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ವಿಜ್ಞಾನ ಮತ್ತು ಧರ್ಮದ ಮಧ್ಯೆ ನಡೆದ ಘರ್ಷಣೆಯ ಇತಿಹಾಸವನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ. ಅದರೊಂದಿಗೆ, ನಿಜ ವಿಜ್ಞಾನವು ಬೈಬಲಿನೊಂದಿಗೆ ಸಹಮತದಲ್ಲಿದೆ ಎಂಬುದನ್ನು ತೋರಿಸಲಿಕ್ಕಾಗಿ ಇದು ಸಾಕ್ಷ್ಯವನ್ನೂ ಒದಗಿಸುತ್ತದೆ.” ಪುಟ 6-7ನ್ನು ತೋರಿಸಿರಿ. ಅನಂತರ ಪ್ರಸಂಗಿ 1:7ನ್ನು ಓದಿರಿ.