ಕ್ರೈಸ್ತ ಶುಶ್ರೂಷೆ — ನಮ್ಮ ಪ್ರಧಾನ ಕೆಲಸ
1 ನಮಗೆಲ್ಲರಿಗೂ ನಾವು ಮಾಡಬೇಕಾದ ವಿವಿಧ ರೀತಿಯ ಕೆಲಸಗಳಿವೆ. ಒಬ್ಬನು ತನ್ನ ಮನೆಯವರಿಗಾಗಿ ಒದಗಿಸುವುದು ದೈವಿಕ ಆವಶ್ಯಕತೆಯಾಗಿದೆ. (1 ತಿಮೊ. 5:8) ಆದರೂ, ಆ ದೈವಿಕ ಆವಶ್ಯಕತೆಯಲ್ಲಿ ಒಳಗೂಡಿರುವ ಕೆಲಸವು, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಬದಿಗೊತ್ತಬಾರದು.—ಮತ್ತಾ. 24:14; 28:19, 20.
2 ‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವುದರಲ್ಲಿ’ ಅನುಕರಿಸಲಿಕ್ಕಾಗಿರುವ ಮಾದರಿಯನ್ನು ಯೇಸು ಒದಗಿಸಿದನು. (ಮತ್ತಾ. 6:33; 1 ಪೇತ್ರ 2:21) ತನ್ನ ಬಳಿ ಆರ್ಥಿಕವಾಗಿ ಸ್ವಲ್ಪವೇ ಇದ್ದರೂ, ಅವನು ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಪೂರ್ತಿಯಾಗಿ ತಲ್ಲೀನನಾಗಿದ್ದನು. (ಲೂಕ 4:43; 9:58; ಯೋಹಾ. 4:34) ಪ್ರತಿಯೊಂದು ಸಂದರ್ಭದಲ್ಲೂ ಒಂದು ಸಾಕ್ಷಿಯನ್ನು ಕೊಡಲಿಕ್ಕಾಗಿ ಅವನು ಪ್ರಯಾಸಪಟ್ಟನು. (ಲೂಕ 23:43; 1 ತಿಮೊ. 6:13) ಕೊಯ್ಯುವ ಕೆಲಸದಲ್ಲಿ ತನ್ನ ಶಿಷ್ಯರು ಕೂಡ ಇದೇ ರೀತಿಯ ತೀವ್ರಾಸಕ್ತಿಯನ್ನು ಇಟ್ಟುಕೊಳ್ಳುವಂತೆ ಅವನು ಪ್ರೋತ್ಸಾಹಿಸಿದನು.—ಮತ್ತಾ. 9:37, 38.
3 ಇಂದು ಯೇಸುವನ್ನು ಅನುಕರಿಸುವುದು: ಕ್ರೈಸ್ತ ಶುಶ್ರೂಷೆಯ ಮೇಲೆ ಕೇಂದ್ರೀಕರಿಸಿರುವಂಥ ಒಂದು ಸರಳವಾದ ಜೀವನವನ್ನು ನಡೆಸಲು ಪ್ರಯತ್ನಿಸುವುದರ ಮೂಲಕ ನಾವು ಯೇಸುವಿನ ಮಾದರಿಯನ್ನು ಅನುಕರಿಸಬಲ್ಲೆವು. ನಮಗೆ ಜೀವನದ ಅಗತ್ಯಗಳು ಇರುವುದಾದರೆ, ಈ ಲೋಕದ ದಾಸ್ತಾನುಗಳನ್ನು ಹೆಚ್ಚೆಚ್ಚು ಕೂಡಿಸಿಕೊಳ್ಳುತ್ತಾ ಹೋಗದಿರುವ ಮೂಲಕ ಬೈಬಲಿನ ಬುದ್ಧಿವಾದಕ್ಕೆ ನಾವು ಕಿವಿಗೊಡೋಣ. (ಮತ್ತಾ. 6:19, 20; 1 ತಿಮೊ. 6:8) ಸಾರುವ ಕೆಲಸದಲ್ಲಿನ ನಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳಲು ನೋಡುವುದು ಅದೆಷ್ಟು ಉತ್ತಮ! ನಾವು ಕಷ್ಟದ ಪರಿಸ್ಥಿತಿಗಳನ್ನು ಎದುರಿಸುವುದಾದರೆ, ಯೇಸು ಮಾಡಿದಂತೆಯೇ ಜೀವನದ ವ್ಯಾಕುಲತೆಗಳು ರಾಜ್ಯದ ಸುವಾರ್ತೆಯನ್ನು ಪ್ರಕಟಿಸುವ ಪ್ರಧಾನ ಕೆಲಸವನ್ನು ಬದಿಗೊತ್ತುವಂತೆ ಅನುಮತಿಸದಿರಲು ಪ್ರಯತ್ನಿಸೋಣ.—ಲೂಕ 8:14; 9:59-62.
4 ಅನೇಕ ಜವಾಬ್ದಾರಿಗಳನ್ನು ಹೊಂದಿರುವವರು ಕೂಡ ಸಾರುವ ಕೆಲಸಕ್ಕೆ ಆದ್ಯತೆಯನ್ನು ನೀಡುತ್ತಾರೆ. ಒಂದು ದೊಡ್ಡ ಕುಟುಂಬ ಮತ್ತು ಜವಾಬ್ದಾರಿಯುತ ಕೆಲಸವನ್ನು ಹೊಂದಿರುವ ಹಾಗೂ ಕ್ರೈಸ್ತ ಸಭೆಯಲ್ಲಿ ಹಿರಿಯನಾಗಿ ಸೇವೆ ಸಲ್ಲಿಸುವ ಒಬ್ಬ ಸಹೋದರನು ಹೇಳುವುದು: “ನಾನು ನನ್ನ ಶುಶ್ರೂಷೆಯನ್ನು ನನ್ನ ಜೀವಿತದ ಪ್ರಾಮುಖ್ಯ ಕೆಲಸವನ್ನಾಗಿ ವೀಕ್ಷಿಸುತ್ತೇನೆ.” ಒಬ್ಬ ಪಯನೀಯರ್ ಸಹೋದರಿಯು ಹೇಳಿದ್ದು: “ಪಯನೀಯರ್ ಸೇವೆಯು ಒಂದು ಯಶಸ್ವಿದಾಯಕವಾದ ಐಹಿಕ ವೃತ್ತಿಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿದೆ.”
5 ನಮ್ಮ ಪರಿಸ್ಥಿತಿಗಳ ಹೊರತಾಗಿಯೂ ನಾವು ಯೇಸುವಿನ ಮಾದರಿಯನ್ನು ಅನುಕರಿಸೋಣ. ಹೇಗೆ? ಕ್ರೈಸ್ತ ಶುಶ್ರೂಷೆಯನ್ನು ನಮ್ಮ ಪ್ರಧಾನ ಕೆಲಸವಾಗಿ ಮಾಡಿಕೊಳ್ಳುವ ಮೂಲಕವೇ.