ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ಎಚ್ಚರ! ಪತ್ರಿಕೆಯ ಈ ಸಂಚಿಕೆಯು ನಮ್ಮ ಸಮಯಗಳಲ್ಲಿನ ಒಂದು ಭೀಕರ ಸತ್ಯವಾದ ಬಾಲ್ಯ ವೇಶ್ಯಾವೃತ್ತಿಯ ಕುರಿತು ವರದಿಸುತ್ತದೆ. ಈ ವ್ಯಸನಕರ ರೀತಿಯ ಮಕ್ಕಳ ದುರುಪಯೋಗವು ಬೇಗನೆ ಅಂತ್ಯಗೊಳ್ಳುವುದು ಎಂದು ಬೈಬಲ್ ವಾಗ್ದಾನಿಸುತ್ತದೆ. [ಜ್ಞಾನೋಕ್ತಿ 2:21, 22ನ್ನು ಓದಿ.] ಈ ರೀತಿಯ ಮಕ್ಕಳ ಶೋಷಣೆಯ ಹಿನ್ನೆಲೆಯಲ್ಲಿ ಏನಿದೆ ಮತ್ತು ಇದು ಹೇಗೆ ನಿಲ್ಲಿಸಲ್ಪಡುವುದು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಕಾವಲಿನಬುರುಜು ಜೂನ್15
“ಯೇಸು ಇತಿಹಾಸದಲ್ಲೇ ಅತಿ ಮಹಾನ್ ವ್ಯಕ್ತಿಯೆಂದು ಕೆಲವರಿಗನಿಸುತ್ತದೆ. ಆದರೆ ಇತರರು ಅವನ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ನಾವು ಅವನ ಬಗ್ಗೆ ಏನನ್ನು ನಂಬುತ್ತೇವೊ ಅದು ನಿಜವಾಗಿಯೂ ಪ್ರಾಮುಖ್ಯವೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಯ ನಂತರ, ಅಪೊಸ್ತಲರ ಕೃತ್ಯಗಳು 4:12ನ್ನು ಓದಿರಿ.] ಯೇಸು ನಿಜವಾಗಿಯೂ ಈ ಭೂಮಿಯ ಮೇಲೆ ಜೀವಿಸಿದ್ದನು ಎಂಬುದಕ್ಕೆ ಯಾವ ಪುರಾವೆಯಿದೆ? ಈ ಪತ್ರಿಕೆಯು ಆ ಪ್ರಶ್ನೆಯನ್ನು ಚರ್ಚಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಪ್ರಾಮಾಣಿಕತೆಯೇ ಅತ್ಯುತ್ತಮ ನೀತಿ ಎಂಬುದಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಕಲಿಸಲಾಗುತ್ತದೆ. ಹಾಗಿದ್ದರೂ, ಪರೀಕ್ಷೆಯಲ್ಲಿ ಅನೇಕ ಮಕ್ಕಳು ಏಕೆ ವಂಚಿಸುತ್ತಾರೆ? ಮತ್ತು ಹಾಗೆ ಮಾಡುವುದು ಸರಿಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಇಬ್ರಿಯ 13:18ನ್ನು ಓದಿರಿ.] ಎಚ್ಚರ! ಪತ್ರಿಕೆಯ [ಪುಟ 17ನ್ನು ತೋರಿಸಿರಿ] ಈ ಸಂಚಿಕೆಯು, ಪರೀಕ್ಷೆಯಲ್ಲಿ ವಂಚಿಸುವುದು ತಪ್ಪೋ? ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತದೆ.”
ಕಾವಲಿನಬುರುಜು ಜುಲೈ1
“ಮಾನವರೋಪಾದಿ ನಮಗಿರುವ ಅತ್ಯಂತ ಮೂಲಭೂತ ಅಗತ್ಯಗಳಲ್ಲಿ ಒಂದು, ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದೇ ಆಗಿದೆ. [ಪುಟ 4ರಲ್ಲಿ ಶೀರ್ಷಿಕೆಯ ಕೆಳಗಿರುವ ಉಲ್ಲೇಖವನ್ನು ಓದಿ.] ಹೀಗಿದ್ದರೂ, ಆಧುನಿಕ ಸಮಾಜವು ಬೇರೆ ವಿಷಯಗಳಿಗೆ ಆದ್ಯತೆ ಕೊಡುವುದನ್ನು ನೀವು ಗಮನಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಿಜವಾದ ಪ್ರೀತಿ ಎಂದರೇನು ಮತ್ತು ಅದನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಎಂಬದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.” 1 ಕೊರಿಂಥ 13:2ನ್ನು ಓದಿರಿ.