ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಮೇ.15
“ಬಡತನವಿಲ್ಲದ ಲೋಕವನ್ನು ನಾವು ಎಂದಾದರೂ ನೋಡುವೆವು ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ಏನನ್ನು ವಾಗ್ದಾನಿಸಿದ್ದಾನೆ ಎಂಬುದನ್ನು ನೋಡಿರಿ. [ಯೆಶಾಯ 65:21ನ್ನು ಓದಿ.] ಈ ವಾಗ್ದಾನವು ಹೇಗೆ ನೆರವೇರಲಿದೆ ಎಂಬುದನ್ನು ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ಚರ್ಚಿಸುತ್ತದೆ.” ವಾಗ್ದಾನಿಸಲ್ಪಟ್ಟಿರುವ ಈ ಬದಲಾವಣೆಯು ಯಾವಾಗ ಸಂಭವಿಸುತ್ತದೆ? ಎಂಬ ಪ್ರಶ್ನೆಗೆ ಉತ್ತರ ನೀಡಲಿಕ್ಕಾಗಿ ಹಿಂದಿರುಗಿ ಹೋಗಲು ಏರ್ಪಾಡನ್ನು ಮಾಡಿರಿ.
ಎಚ್ಚರ! ಏಪ್ರಿ. - ಜೂನ್
“ಪತ್ನಿಯರು ಮತ್ತು ತಾಯಂದಿರಿಗೆ ಸಲ್ಲತಕ್ಕ ಗೌರವ ಹಾಗೂ ಮರ್ಯಾದೆಯು ಸಲ್ಲಿಸಲ್ಪಡುತ್ತಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ, ಎಫೆಸ 6:2ನ್ನು ಓದಿ.] ಅವರೇಕೆ ನಮ್ಮ ಗೌರವ ಮತ್ತು ಮರ್ಯಾದೆಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬುದನ್ನು ಈ ಲೇಖನಗಳು ವಿವರಿಸುತ್ತವೆ.”
ಕಾವಲಿನಬುರುಜು ಜೂನ್1
“ಹೆಚ್ಚುಕಡಿಮೆ ಎಲ್ಲರೂ ಶಾಂತಿಯ ಕುರಿತು ಮಾತಾಡುತ್ತಾರಾದರೂ, ಜಾಗತಿಕ ಏಕತೆಯು ಮಾನವಕುಲಕ್ಕೆ ಎಟುಕಲಾರದ ಸಂಗತಿಯಾಗಿ ಪರಿಣಮಿಸಿದೆ. ಈ ಏಕತೆಯನ್ನು ಸಾಧಿಸುವುದು ಬರೀ ಒಂದು ಕನಸೆಂದು ನೀವು ಭಾವಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಲೋಕವನ್ನು ಐಕ್ಯಗೊಳಿಸಬಲ್ಲ ಒಂದು ಸರಕಾರದ ಕಡೆಗೆ ಈ ಪತ್ರಿಕೆಯು ಗಮನವನ್ನು ಸೆಳೆಯುತ್ತದೆ.” ಕೀರ್ತನೆ 72:7, 8ನ್ನು ಓದಿ, ಮತ್ತು ಇದು ಹೇಗೆ ಸಂಭವಿಸುವುದು ಎಂಬುದನ್ನು ಚರ್ಚಿಸುವ ಸಲುವಾಗಿ ಹಿಂದಿರುಗಿ ಹೋಗುವ ಏರ್ಪಾಡನ್ನು ಮಾಡಿರಿ.
ಎಚ್ಚರ! ಏಪ್ರಿ. - ಜೂನ್
“ಪುರಾತನ ಕಾಲಗಳಲ್ಲಿ, ತಂದೆತಾಯಿಗಳನ್ನು ಸನ್ಮಾನಿಸಬೇಕೆಂದು ದೇವರು ಮಕ್ಕಳಿಗೆ ಆಜ್ಞಾಪಿಸಿದನು. [ವಿಮೋಚನಕಾಂಡ 20:12ನ್ನು ಓದಿರಿ.] ಆದರೆ ಇಂದು ತಾಯಂದಿರಿಗೆ ಯೋಗ್ಯ ಗೌರವ ಕೊಡಲಾಗುತ್ತಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ವಿವಿಧ ದೇಶಗಳಲ್ಲಿ ತಾಯಂದಿರು ಎದುರಿಸುತ್ತಿರುವ ಪಂಥಾಹ್ವಾನಗಳನ್ನು ಮತ್ತು ಅವುಗಳನ್ನು ಅವರು ಹೇಗೆ ಜಯಿಸುತ್ತಿದ್ದಾರೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ.”