ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಇಂದು, ನಮ್ಮ ಸ್ವಸ್ಥತೆಯನ್ನು ಗಂಡಾಂತರಕ್ಕೊಳಪಡಿಸುವ ಅನೇಕ ವಿಷಯಗಳಲ್ಲಿ ಕೀಟರವಾನಿತ ರೋಗವೂ ಒಂದಾಗಿದೆ. ನಾವು ನಮ್ಮನ್ನೇ ಸಂರಕ್ಷಿಸಿಕೊಳ್ಳಲು ಕೆಲವು ಕ್ರಮಗಳನ್ನು ಕೈಕೊಳ್ಳಬಹುದು ಎಂಬುದು ನಿಮಗೆ ತಿಳಿದಿತ್ತೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಆ ಕ್ರಮಗಳ ಕುರಿತು ಹಾಗೂ ಅಸ್ವಸ್ಥತೆಯೇ ಇಲ್ಲದ ಒಂದು ಕಾಲವನ್ನು ದೇವರು ವಾಗ್ದಾನಿಸಿದ್ದಾನೆ ಎಂಬುದರ ಕುರಿತು ತಿಳಿಸುತ್ತದೆ.” ಯೆಶಾಯ 33:24ನ್ನು ಓದುವ ಮೂಲಕ ಕೊನೆಗೊಳಿಸಿ.
ಕಾವಲಿನಬುರುಜು ಜುಲೈ15
“ಜನರು ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳುವ ಪ್ರವೃತ್ತಿಯು ಹೆಚ್ಚಾಗುತ್ತಿರುವುದನ್ನು ಅನೇಕರು ಗಮನಿಸಿದ್ದಾರೆ. ಇದು ಬುದ್ಧಿವಂತಿಕೆಯ ಕಾರ್ಯವೆಂದು ನೀವೆಣಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಒಡನಾಟದ ಮೌಲ್ಯದ ಕುರಿತಾಗಿ ಈ ವಿವೇಕಯುತ ಹೇಳಿಕೆಯು ಏನನ್ನುತ್ತದೆಂಬುದನ್ನು ಗಮನಿಸಿರಿ. [ಪ್ರಸಂಗಿ 4:9, 10ನ್ನು ಓದಿ.] ನಮಗೆಲ್ಲರಿಗೆ ಇತರರ ಅಗತ್ಯ ಏಕಿದೆ ಮತ್ತು ಬೇರೆಯವರಿಂದ ಪ್ರತ್ಯೇಕಿಸಿಕೊಳ್ಳುವ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ಇಂದು ಜನರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯು, ಇತರರೊಂದಿಗೆ ಹೊಂದಿಕೊಂಡು ಹೋಗುವುದೇ ಆಗಿದೆ. ನಾವು ಮಾತನಾಡುವ ವಿಧವು ಇದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ, ಅಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 14ರಲ್ಲಿರುವ ಚಿತ್ರವನ್ನು ತೋರಿಸಿ, ಆ ಲೇಖನದ ಶೀರ್ಷಿಕೆಯನ್ನು ಓದಿರಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ.” ಎಫೆಸ 4:29ನ್ನು ಓದುವ ಮೂಲಕ ಸಮಾಪ್ತಿಗೊಳಿಸಿರಿ.
ಕಾವಲಿನಬುರುಜು ಆಗಸ್ಟ್1
“ಒಂದು ವರದಿಗನುಸಾರ ಲೋಕ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಬಡತನದ ಸ್ಥಿತಿಗತಿಗಳಲ್ಲಿ ಜೀವಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿತ್ತೋ? ಇದಕ್ಕೆ ಪರಿಹಾರವನ್ನು ಒದಗಿಸಲು ಏನಾದರೂ ಮಾಡಸಾಧ್ಯವಿದೆ ಎಂದು ನಿಮಗನಿಸುತ್ತದೆಯೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜುವಿನ ಈ ಸಂಚಿಕೆಯು, ಬೈಬಲಿನಲ್ಲಿ ಸೂಚಿಸಲ್ಪಟ್ಟಿರುವ ಬಡತನದ ಶಾಶ್ವತ ಪರಿಹಾರದ ಕಡೆಗೆ ಕೈತೋರಿಸುತ್ತದೆ.”—ಕೀರ್ತನೆ 72:12, 13, 16ನ್ನು ಓದಿರಿ.