ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ರೋಗದ ವಿರುದ್ಧವಾದ ಹೋರಾಟದಲ್ಲಿ ವೈದ್ಯಕೀಯ ವಿಜ್ಞಾನವು ಗಮನಾರ್ಹ ಪ್ರಗತಿಯನ್ನು ಮಾಡಿದೆ. ಆದರೆ ರೋಗದಿಂದ ಸಂಪೂರ್ಣವಾಗಿ ಮುಕ್ತವಾದ ಒಂದು ಲೋಕವನ್ನು ನೋಡುವೆವೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಒಂದು ದಿನ ಲೋಕದಲ್ಲಿರುವ ಪ್ರತಿಯೊಬ್ಬರೂ ಈ ವಾಗ್ದಾನದ ನೆರವೇರಿಕೆಯಲ್ಲಿ, ಪರಿಪೂರ್ಣ ಆರೋಗ್ಯದಲ್ಲಿ ಆನಂದಿಸುವರೆಂದು ಈ ಪತ್ರಿಕೆಯು ತಿಳಿಸುತ್ತದೆ.” ಯೆಶಾಯ 33:24ನ್ನು ಓದಿರಿ.
ಕಾವಲಿನಬುರುಜು ಜುಲೈ15
“ಈಗಿನ ದಿನಗಳಲ್ಲಿ [ಮುಖಪುಟದಲ್ಲಿ ಚಿತ್ರಿಸಲಾಗಿರುವಂಥ] ರೀತಿಯ ಘಟನೆಯು ವಾರ್ತಾ ಸುದ್ದಿಯಾಗಿ ವರದಿಸಲ್ಪಡುವಲ್ಲಿ, ಬಹುಶಃ ಹೆಚ್ಚಿನ ಜನರು ಅದನ್ನು ಶಂಕಿಸುವರು. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿ. ನಂತರ ಮಾರ್ಕ 4:39ನ್ನು ಓದಿ.] ಯೇಸು ನಡೆಸಿದ ಅದ್ಭುತಗಳು ವಿಶ್ವಾಸಾರ್ಹವಾಗಿವೆ ಎಂಬದಕ್ಕೆ ಯಾವ ಸಾಕ್ಷ್ಯವಿದೆ? ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ಈ ಪ್ರಶ್ನೆಯನ್ನು ಪರಿಶೀಲಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
ಜನರ ಮನಸ್ಸಿನಲ್ಲಿರುವ ಒಂದು ದುರಂತಕರ ಘಟನೆಯನ್ನು ತಿಳಿಸಿ, ಹೀಗೆ ಕೇಳಿ: “ಇಂಥ ವಿಷಯಗಳು ನಡೆಯುವಂತೆ ದೇವರು ಏಕೆ ಅನುಮತಿಸುತ್ತಾನೆ ಎಂದು ನೀವೆಂದಾದರೂ ಯೋಚಿಸಿದ್ದೀರೊ?” [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯಾಕೋಬ 1:13ನ್ನು ಓದಿರಿ.] ವಿಶೇಷವಾಗಿ ಯುವ ಜನರಿಗಾಗಿ ಬರೆಯಲ್ಪಟ್ಟಿರುವ ಈ ಲೇಖನವು, ನಮ್ಮ ಪ್ರೀತಿಯ ಸೃಷ್ಟಿಕರ್ತನು ಮಧ್ಯೆ ಪ್ರವೇಶಿಸಿ ಮಾನವ ಕಷ್ಟಾನುಭವವನ್ನು ಇನ್ನೂ ಏಕೆ ಅಂತ್ಯಗೊಳಿಸಿಲ್ಲ ಎಂಬುದನ್ನು ವಿವರಿಸುತ್ತದೆ.”
ಕಾವಲಿನಬುರುಜು ಆಗ.1
“ಮಾನವಕುಲವು ಇಷ್ಟೊಂದು ವಿಭಾಜಿಸಲ್ಪಟ್ಟಿರುವುದರಿಂದ, ಲೋಕ ಶಾಂತಿಯನ್ನು ಸಾಧಿಸಲಿಕ್ಕಾಗಿರುವ ಒಂದೇ ಒಂದು ಮಾರ್ಗ, ಒಂದು ಲೋಕ ಸರಕಾರ ಎಂದು ಕೆಲವರಿಗನಿಸುತ್ತದೆ. ಇದು ಸಾಧ್ಯವೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ದಾನಿಯೇಲ 2:44ನ್ನು ಓದಿ.] ದೇವರ ರಾಜ್ಯವು ಈಗ ಏನ್ನನ್ನು ಸಾಧಿಸುತ್ತಿದೆ ಮತ್ತು ಅದು ಬೇಗನೆ ಲೋಕ ಶಾಂತಿಯನ್ನು ಹೇಗೆ ತರುವುದು ಎಂಬದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”