ಚೈತನ್ಯದಾಯಕವಾದ ಕೆಲಸ
1 ಬೈಬಲಿನ ಸಂದೇಶವನ್ನು ಸ್ವೀಕರಿಸಿ, ಅದನ್ನು ತಮ್ಮ ಜೀವನದಲ್ಲಿ ಅನ್ವಯಿಸುವ ಪ್ರತಿಯೊಬ್ಬರಿಗೂ ಅದು ನವಚೈತನ್ಯವನ್ನು ಒದಗಿಸುತ್ತದೆ. (ಕೀರ್ತ. 19:7, 8) ಅಷ್ಟುಮಾತ್ರವಲ್ಲದೆ, ಅದು ಸುಳ್ಳು ಬೋಧನೆಗಳ ಮತ್ತು ಹಾನಿಕಾರಕ ಆಚಾರಗಳ ಬಂಧನದಿಂದ ತಮ್ಮನ್ನು ಬಿಡಿಸಿಕೊಳ್ಳಲು ಅವರಿಗೆ ಸಹಾಯಮಾಡುತ್ತದೆ ಹಾಗೂ ಭವಿಷ್ಯತ್ತಿಗಾಗಿ ಭರವಸಾರ್ಹವಾದ ನಿರೀಕ್ಷೆಯನ್ನೂ ನೀಡುತ್ತದೆ. ಹಾಗಿದ್ದರೂ, ಕೇವಲ ಸುವಾರ್ತೆಯನ್ನು ಸ್ವೀಕರಿಸುವವರು ಮಾತ್ರವೇ ಪ್ರಯೋಜನವನ್ನು ಪಡೆದುಕೊಳ್ಳುವುದಿಲ್ಲ. ಬದಲಾಗಿ, ಬೈಬಲಿನ ಚೈತನ್ಯದಾಯಕ ಸತ್ಯತೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವವರು ಸಹ ಸ್ವತಃ ಚೈತನ್ಯವನ್ನು ಪಡೆದುಕೊಳ್ಳುತ್ತಾರೆ.—ಜ್ಞಾನೋ. 11:25.
2 ಶುಶ್ರೂಷೆಯಿಂದ ಚೇತನಗೊಳಿಸಲ್ಪಡುವುದು: ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಒಳಗೊಂಡಿರುವ ಕ್ರೈಸ್ತ ಶಿಷ್ಯತನದ ನೊಗವನ್ನು ಸ್ವೀಕರಿಸುವವರು, “[ತಮ್ಮ] ಆತ್ಮಗಳಿಗೆ ಚೈತನ್ಯವನ್ನು” ಪಡೆದುಕೊಳ್ಳುವರು ಎಂಬುದಾಗಿ ಯೇಸು ತಿಳಿಸಿದನು. (ಮತ್ತಾ. 11:29, NW) ಅವನು ಸ್ವತಃ, ಸಾಕ್ಷಿಕೊಡುವ ಕೆಲಸದಲ್ಲಿ ಚೈತನ್ಯವನ್ನು ಪಡೆದುಕೊಂಡನು. ಅದು ಅವನಿಗೆ ಆಹಾರದಂತಿತ್ತು. (ಯೋಹಾ. 4:34) ಅವನು 70 ಮಂದಿ ಶಿಷ್ಯರನ್ನು ಸಾರುವ ಕೆಲಸಕ್ಕಾಗಿ ಕಳುಹಿಸಿದಾಗ, ತಮ್ಮ ಪ್ರಯತ್ನಗಳ ಮೇಲೆ ಯೆಹೋವನ ಬೆಂಬಲವನ್ನು ನೋಡಿ ಅವರು ಸಂತೋಷಿಸಿದರು.—ಲೂಕ 10:17.
3 ತದ್ರೀತಿಯಲ್ಲಿ ಇಂದು ಸಹ ಅನೇಕ ಕ್ರೈಸ್ತರು ಸಾರುವ ಕೆಲಸದಲ್ಲಿ ತಮ್ಮ ಭಾಗವಹಿಸುವಿಕೆಯ ಕಾರಣ ಚೇತನಗೊಳಿಸಲ್ಪಡುತ್ತಾರೆ. ಒಬ್ಬಾಕೆ ಸಹೋದರಿಯು ತಿಳಿಸಿದ್ದು: “ಶುಶ್ರೂಷೆಯು ಚೈತನ್ಯದಾಯಕವಾಗಿರಲು ಕಾರಣವೇನೆಂದರೆ, ಇದು ನನ್ನ ಜೀವಿತಕ್ಕೆ ಮಾರ್ಗದರ್ಶನ ಹಾಗೂ ಉದ್ದೇಶವನ್ನು ನೀಡುತ್ತದೆ. ಸೇವೆಯಲ್ಲಿ ಪಾಲ್ಗೊಳ್ಳುವಾಗ, ವೈಯಕ್ತಿಕ ಸಮಸ್ಯೆಗಳು ಹಾಗೂ ದೈನಂದಿನ ಒತ್ತಡಗಳು ತೀರ ಕ್ಷುಲ್ಲಕ ವಿಷಯಗಳಾಗಿ ಕಂಡುಬರುತ್ತವೆ.” ಇನ್ನೊಬ್ಬ ಹುರುಪಿನ ಶುಶ್ರೂಷಕಿಯು ತಿಳಿಸಿದ್ದು: “ಶುಶ್ರೂಷೆಯು . . . ಯೆಹೋವನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಪ್ರತಿದಿನವೂ ನನ್ನ ಜ್ಞಾಪಕಕ್ಕೆ ತರುತ್ತದೆ ಮತ್ತು ಬೇರಾವುದೇ ಮೂಲದಿಂದ ಗಳಿಸಲಾಗದಂಥ ಶಾಂತಿ ಹಾಗೂ ಆಂತರಿಕ ಸಂತೋಷವನ್ನು ಒದಗಿಸುತ್ತದೆ.” “ದೇವರ ಜೊತೆಕೆಲಸದವ”ರಾಗಿರುವ ಎಂಥ ಒಂದು ಸುಯೋಗವು ನಮಗಿದೆ!—1 ಕೊರಿಂ. 3:9.
4 ಕ್ರಿಸ್ತನ ನೊಗವು ಮೃದುವಾದದ್ದು: “ಹೆಣಗಾಡಿರಿ” ಎಂಬುದಾಗಿ ಕ್ರೈಸ್ತರಿಗೆ ಬುದ್ಧಿವಾದವು ಕೊಡಲ್ಪಟ್ಟಿದೆಯಾದರೂ, ನಮ್ಮಿಂದ ಮಾಡಸಾಧ್ಯವಿರುವುದಕ್ಕಿಂತಲೂ ಹೆಚ್ಚನ್ನು ಯೇಸು ನಮ್ಮಿಂದ ತಗಾದೆಮಾಡುವುದಿಲ್ಲ. (ಲೂಕ 13:24) ವಾಸ್ತವದಲ್ಲಿ, ನಾವು ‘ಅವನ ನೊಗದಡಿ ಅವನೊಂದಿಗೆ ಸೇರಲು’ ಅವನು ಪ್ರೀತಿಪೂರ್ವಕವಾಗಿ ಆಮಂತ್ರಿಸುತ್ತಾನೆ. (ಮತ್ತಾ. 11:29) ಕಷ್ಟಕರವಾದ ಸನ್ನಿವೇಶಗಳೊಂದಿಗೆ ಹೋರಾಡಬೇಕಾದವರು, ತಮ್ಮ ಪೂರ್ಣಪ್ರಾಣದ ಸೇವೆಯು ಅದೆಷ್ಟೇ ಸೀಮಿತವಾಗಿದ್ದರೂ ದೇವರಿಗೆ ಮೆಚ್ಚಿಕೆಯಾಗಿದೆ ಎಂಬ ಭರವಸೆಯಿಂದಿರಸಾಧ್ಯವಿದೆ.—ಮಾರ್ಕ 14:6-8; ಕೊಲೊ. 3:23.
5 ಆತನ ಹೆಸರಿಗಾಗಿ ನಾವು ಏನೇ ಮಾಡಿದರೂ ಅದನ್ನು ಬಹಳವಾಗಿ ಗಣ್ಯಮಾಡುವ ದೇವರನ್ನು ಸೇವಿಸುವುದು ಎಂಥ ಒಂದು ಚೈತನ್ಯದಾಯಕ ವಿಷಯವಾಗಿದೆ! (ಇಬ್ರಿ. 6:10) ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾದದ್ದನ್ನು ಆತನಿಗೆ ನೀಡಲು ನಾವು ಯಾವಾಗಲೂ ಪ್ರಯತ್ನಿಸೋಣ.