ಹೆಚ್ಚಿನ ಸಾಕ್ಷಿಯನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ
1 ನಾವು ಸುವಾರ್ತೆಯನ್ನು ಸಾರುವಾಗ, ಅನೇಕವೇಳೆ ನಮ್ಮ ಟೆರಿಟೊರಿಯ ಹೊರಗೆ ಜೀವಿಸುವ ಅಥವಾ ಮತ್ತೊಂದು ಭಾಷೆಯನ್ನು ಮಾತಾಡುವ ಜನರನ್ನು ಭೇಟಿಮಾಡುತ್ತೇವೆ ಹಾಗೂ ಇದರಲ್ಲಿ ಸಂಜ್ಞಾ ಭಾಷೆಯೂ ಸೇರಿರಬಹುದು. ನಾವು ಯಾರೊಂದಿಗೆ ಒಳ್ಳೆಯ ಬೈಬಲ್ ಚರ್ಚೆಗಳನ್ನು ನಡೆಸುತ್ತಿದ್ದೇವೋ ಅವರು ನಮ್ಮ ಟೆರಿಟೊರಿಯನ್ನು ಬಿಟ್ಟು ಬೇರೆ ಕಡೆಗೆ ಸ್ಥಳಾಂತರಿಸಬಹುದು. ಇಂಥವರು ಹೆಚ್ಚಿನ ಸಾಕ್ಷಿಯನ್ನು ಪಡೆದುಕೊಳ್ಳುವಂತೆ ನಾವು ಹೇಗೆ ಏರ್ಪಾಡು ಮಾಡಬಲ್ಲೆವು? ಪ್ಲೀಸ್ ಫಾಲೋ ಅಪ್ (S-43) (ದಯವಿಟ್ಟು ಸಂಪರ್ಕಿಸಿ) ಫಾರ್ಮನ್ನು ಉಪಯೋಗಿಸುವ ಮೂಲಕವೇ.
2 ಸುವಾರ್ತೆಯನ್ನು ಜನರ ಮಾತೃಭಾಷೆಯಲ್ಲಿ ಪ್ರಸ್ತುತಪಡಿಸುವಾಗ ಅವರು ಹೆಚ್ಚಿನ ಗಮನವನ್ನು ಕೊಡುವದುಂಟು. (ಅ. ಕೃ. 22:1, 2) ಆದುದರಿಂದ, ಹೆಚ್ಚಿನ ವಿದ್ಯಮಾನಗಳಲ್ಲಿ ಮತ್ತೊಂದು ಭಾಷೆಯನ್ನಾಡುವ ವ್ಯಕ್ತಿಯೊಬ್ಬನನ್ನು ನಾವು ಭೇಟಿಮಾಡುವುದಾದರೆ, ಆ ವ್ಯಕ್ತಿಯು ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸದಿದ್ದರೂ S-43 ಫಾರ್ಮನ್ನು ತುಂಬಿಸಬೇಕು. ಆದರೆ ಒಂದುವೇಳೆ ಒಂದು ಕ್ಷೇತ್ರದಲ್ಲಿ ಪರಭಾಷಾ ಜನರ ಸಂಖ್ಯೆಯು ಸಾಕಷ್ಟು ದೊಡ್ಡದ್ದಾಗಿದ್ದು ಅವರೆಲ್ಲರಿಗೆ ಅವರ ಸ್ವಂತ ಭಾಷೆಯಲ್ಲಿ ಕ್ರಮವಾಗಿ ಸಾಕ್ಷಿಕೊಡಲ್ಪಡುತ್ತಿರುವುದಾದರೆ, ಆಗ ಕೇವಲ ಆಸಕ್ತಿ ತೋರಿಸುವವರಿಗಾಗಿ ಮಾತ್ರ ಈ ಫಾರ್ಮನ್ನು ತುಂಬಿಸುವ ಆವಶ್ಯಕತೆ ಇರುವುದು.
3 ಫಾರ್ಮನ್ನು ತುಂಬಿಸುವುದು: ವಿವೇಚನಾಪೂರ್ವಕವಾಗಿ ಆ ವ್ಯಕ್ತಿಯ ಹೆಸರು, ಅವನ ವಿಳಾಸ ಮತ್ತು ಟೆಲಿಫೋನ್ ನಂಬರನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಆ ವ್ಯಕ್ತಿಯು ಎಷ್ಟು ಆಸಕ್ತಿಯನ್ನು ತೋರಿಸಿದ್ದಾನೆ, ಯಾವ ಸಮಯಕ್ಕೆ ಆ ವ್ಯಕ್ತಿಯನ್ನು ಭೇಟಿಮಾಡಬಹುದು, ನೀಡಲ್ಪಟ್ಟ ಅಥವಾ ವಿನಂತಿಸಿಕೊಂಡಿರುವ ಸಾಹಿತ್ಯ ಮತ್ತು ಆ ವ್ಯಕ್ತಿಯು ಚೆನ್ನಾಗಿ ಅರ್ಥಮಾಡಿಕೊಳ್ಳುವ ಭಾಷೆ ಯಾವುದು ಎಂಬಂಥ ವಿವರಗಳನ್ನು ಕೊಡಿರಿ. ಫಾರ್ಮನ್ನು ತುಂಬಿಸಿದ ಬಳಿಕ, ತಡಮಾಡದೆ ಅದನ್ನು ಸಭೆಯ ಕಾರ್ಯದರ್ಶಿಗೆ ಕೊಡಿರಿ. ಅವರು ತಕ್ಕದಾದ ಸಭೆ ಅಥವಾ ಗುಂಪಿಗೆ ಇದನ್ನು ಕಳುಹಿಸಿಕೊಡುವರು.
4 ಫಾರ್ಮನ್ನು ಕಳುಹಿಸುವುದು: ಫಾರ್ಮನ್ನು ಯಾವ ಸಭೆ ಅಥವಾ ಗುಂಪಿಗೆ ಕಳುಹಿಸುವುದು ಎಂಬುದು ಕಾರ್ಯದರ್ಶಿಗೆ ತಿಳಿದಿಲ್ಲವಾದರೆ, ಅವನು ಬ್ರಾಂಚ್ ಆಫೀಸ್ನಲ್ಲಿರುವ ಟೆರಿಟೊರಿ ಡೆಸ್ಕ್ಗೆ ಕರೆಮಾಡಿ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಫಾರ್ಮನ್ನು ಕಳುಹಿಸುವಾಗ ಇನ್ನು ಮುಂದೆ ಇದರ ಕುರಿತು ನಗರ ಮೇಲ್ವಿಚಾರಕನಿಗೆ ತಿಳಿಸುವ ಅಗತ್ಯವಿರುವುದಿಲ್ಲ.
5 ಒಂದು ಸಭೆ ಅಥವಾ ಒಂದು ಗುಂಪು, ಭರ್ತಿಮಾಡಲ್ಪಟ್ಟ ಪ್ಲೀಸ್ ಫಾಲೋ ಅಪ್ ಫಾರ್ಮನ್ನು ಪಡೆದುಕೊಳ್ಳುವಾಗೆಲ್ಲಾ, ಆ ವ್ಯಕ್ತಿಯನ್ನು ಸಂಪರ್ಕಿಸಲು ತಡಮಾಡದೆ ಏರ್ಪಾಡುಗಳನ್ನು ಮಾಡಬೇಕು. ನಾವು ಶ್ರದ್ಧೆಯಿಂದ ನಮ್ಮ ಭಾಗವನ್ನು ನಿರ್ವಹಿಸುವಾಗ, ಯೆಹೋವನು ‘ನಿತ್ಯಜೀವಕ್ಕೆ ಯೋಗ್ಯವಾದ ಪ್ರವೃತ್ತಿಯುಳ್ಳ’ ಜನರ ಹೃದಯಗಳನ್ನು ತೆರೆಯುವನು ಎಂಬ ವಿಷಯದಲ್ಲಿ ದೃಢಭರವಸೆಯಿಂದಿರಬಲ್ಲೆವು.—ಅ. ಕೃ. 13:48, NW.