ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಬಳಸುವ ವಿಧ
ನೀವು ಭೇಟಿಯಾಗುವ ಆಸಕ್ತ ವ್ಯಕ್ತಿ ನಿಮ್ಮ ಟೆರಿಟೊರಿಯವನಲ್ಲವಾದರೆ ಅಥವಾ ಬೇರೊಂದು ಭಾಷೆಯವನಾಗಿದ್ದರೆ ಈ ಫಾರ್ಮ್ ಅನ್ನು ಭರ್ತಿಮಾಡತಕ್ಕದ್ದು. ಸಾಮಾನ್ಯವಾಗಿ ನಾವದನ್ನು ವ್ಯಕ್ತಿಗೆ ನಿಜವಾಗಿ ಆಸಕ್ತಿಯಿದ್ದಲ್ಲಿ ಮಾತ್ರ ಬಳಸುತ್ತೇವೆ. ಆದರೆ ಒಬ್ಬ ವ್ಯಕ್ತಿ ಕಿವುಡನಾಗಿದ್ದರೆ ಮತ್ತು ಹತ್ತಿರದ ಸಭೆಯಲ್ಲಿ ಸನ್ನೆಭಾಷೆಯ ಗುಂಪು ಇದ್ದರೆ, ಆ ವ್ಯಕ್ತಿಗೆ ಆಸಕ್ತಿ ಇರಲಿ ಇಲ್ಲದಿರಲಿ ನಾವು S-43 ಫಾರ್ಮ್ ಅನ್ನು ಭರ್ತಿಮಾಡತಕ್ಕದ್ದು.
ಆ ಫಾರ್ಮ್ ಅನ್ನು ಭರ್ತಿಮಾಡಿದ ನಂತರ ಏನು ಮಾಡಬೇಕು? ಅದನ್ನು ಸಭಾ ಸೆಕ್ರಿಟರಿಗೆ ಕೊಡಬೇಕು. ಅದನ್ನು ಯಾವ ಸಭೆಗೆ ಕಳುಹಿಸಬೇಕೆಂದು ಅವನಿಗೆ ಗೊತ್ತಿರುವಲ್ಲಿ ಫಾರ್ಮ್ ಅನ್ನು ಕೂಡಲೇ ಆ ಸಭೆಯ ಹಿರಿಯರಿಗೆ ಕಳುಹಿಸಬಹುದು. ಅವರು ಆಸಕ್ತ ವ್ಯಕ್ತಿಯನ್ನು ಭೇಟಿಯಾಗಲು ಬೇಕಾದ ಏರ್ಪಾಡು ಮಾಡುವರು. ಯಾವ ಸಭೆಗೆ ಕಳುಹಿಸಬೇಕೆಂದು ಸೆಕ್ರಿಟರಿಗೆ ಗೊತ್ತಿರದಿದ್ದರೆ ಅವನದನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವನು.
ಆಸಕ್ತ ವ್ಯಕ್ತಿ ಬೇರೊಂದು ಭಾಷೆಯವನಾಗಿದ್ದು ನಿಮ್ಮ ಟೆರಿಟೊರಿಯಲ್ಲೇ ವಾಸಿಸುವವನಾಗಿದ್ದರೆ ಆ ಭಾಷೆಯನ್ನಾಡುವ ನಿಮ್ಮ ಸಭೆಯ ಪ್ರಚಾರಕರೊ ಹತ್ತಿರದ ಸಭೆಯ ಪ್ರಚಾರಕರೊ ಅವನನ್ನು ಸಂಪರ್ಕ ಮಾಡುವ ವರೆಗೆ ಅವನ ಆಸಕ್ತಿಯನ್ನು ಬೆಳೆಸಲು ನೀವೇ ಪುನರ್ಭೇಟಿ ಮಾಡುತ್ತಿರಿ.—ನವೆಂಬರ್ 2009ರ ನಮ್ಮ ರಾಜ್ಯ ಸೇವೆಯ ಪುಟ 3 ನೋಡಿ.