ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/07 ಪು. 6
  • “ನಿಮ್ಮ ಉತ್ತರವೇನು?”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿಮ್ಮ ಉತ್ತರವೇನು?”
  • 2007 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಗೆ
    ಎಚ್ಚರ!—2006
  • (1) ಪ್ರಶ್ನೆ, (2) ಶಾಸ್ತ್ರವಚನ, ಮತ್ತು (3) ಅಧ್ಯಾಯ
    2006 ನಮ್ಮ ರಾಜ್ಯದ ಸೇವೆ
  • ಕರಪತ್ರ ಉಪಯೋಗಿಸಿ ಸಂಭಾಷಣೆ ಆರಂಭಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಪ್ರಿಯ ಓದುಗರೇ,
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
2007 ನಮ್ಮ ರಾಜ್ಯದ ಸೇವೆ
km 3/07 ಪು. 6

“ನಿಮ್ಮ ಉತ್ತರವೇನು?”

1. ನಮ್ಮಲ್ಲಿ ಹೆಚ್ಚಿನವರು ಯಾವ ಕಷ್ಟಗಳನ್ನು ಎದುರಿಸುತ್ತೇವೆ?

1 ದೇವರ ವಾಕ್ಯವನ್ನು ನೀವು ಪ್ರೀತಿಸುತ್ತೀರಾದರೂ ಬೈಬಲ್‌ ವೃತ್ತಾಂತಗಳ ಕುರಿತ ವಿವರಗಳನ್ನು ನೆನಪಿಸಿಕೊಳ್ಳಲು ಅಥವಾ ಶಾಸ್ತ್ರವಚನಗಳಲ್ಲಿ ನಿರ್ದಿಷ್ಟ ಹೇಳಿಕೆಗಳು ಎಲ್ಲಿ ದಾಖಲೆಯಾಗಿವೆ ಎಂದು ಜ್ಞಾಪಕಕ್ಕೆ ತರಲು ನಿಮಗೆ ಕಷ್ಟವಾಗುತ್ತದೋ? ನಿಮ್ಮ ಮಕ್ಕಳು ಬೈಬಲಿನ ನಿಜಸಂಗತಿಗಳ ಮತ್ತು ಬೋಧನೆಗಳ ನಿಷ್ಕೃಷ್ಟ ತಿಳಿವಳಿಕೆಯನ್ನು ಪಡೆದುಕೊಳ್ಳುವಂತೆ ನೀವು ಬಯಸುತ್ತೀರೋ? ಎಚ್ಚರ! ಪತ್ರಿಕೆಯ ಪುಟ 31ರಲ್ಲಿ ಕ್ರಮವಾಗಿ ಪ್ರಕಟವಾಗುತ್ತಿರುವ “ನಿಮ್ಮ ಉತ್ತರವೇನು?” ಎಂಬ ಹೊಸ ವೈಶಿಷ್ಟ್ಯವು ದೇವರ ವಾಕ್ಯದ ಒಳ್ಳೆಯ ಜ್ಞಾನವನ್ನು ಪಡೆಯಲು ಎಳೆಯರಿಗೂ ಪ್ರೌಢರಿಗೂ ಸಹಾಯಮಾಡಬಲ್ಲದು.​—⁠ಅ. ಕೃ. 17:11.

2. “ನಿಮ್ಮ ಉತ್ತರವೇನು?” ಎಂಬ ಹೊಸ ವೈಶಿಷ್ಟ್ಯದ ವಿವಿಧ ಭಾಗಗಳನ್ನು ಹೇಗೆ ಉಪಯೋಗಿಸ ಸಾಧ್ಯವಿದೆ?

2 ಈ ಹೊಸ ವೈಶಿಷ್ಟ್ಯದ ಸದುಪಯೋಗವನ್ನು ನಾವು ಹೇಗೆ ಮಾಡಬಲ್ಲೆವು? ಎಚ್ಚರ! 2006, ಏಪ್ರಿಲ್‌-ಜೂನ್‌ ಸಂಚಿಕೆಯು ಈ ಕೆಳಗಿನ ಸಲಹೆಗಳನ್ನು ಕೊಟ್ಟಿತ್ತು: “ಈ [ವೈಶಿಷ್ಟ್ಯದ] ಕೆಲವು ಭಾಗಗಳು ಚಿಕ್ಕ ಮಕ್ಕಳಿಗೆ ಇಷ್ಟವಾಗುವವು; ಇತರ ಭಾಗಗಳು ಹೆಚ್ಚು ಪ್ರಗತಿಮಾಡಿರುವ ಬೈಬಲ್‌ ವಿದ್ಯಾರ್ಥಿಗಳ ಜ್ಞಾಪಕಶಕ್ತಿಯನ್ನು ಪರೀಕ್ಷಿಸುವವು. ‘ಇತಿಹಾಸದಲ್ಲಿ ಯಾವಾಗ ಸಂಭವಿಸಿತು?’ ಎಂಬ ಭಾಗವು, ನಿರ್ದಿಷ್ಟ ಬೈಬಲ್‌ ವ್ಯಕ್ತಿಗಳು ಯಾವಾಗ ಜೀವಿಸಿದರು ಮತ್ತು ಪ್ರಾಮುಖ್ಯ ಘಟನೆಗಳು ಯಾವಾಗ ಸಂಭವಿಸಿದವು ಎಂಬುದನ್ನು ಸಮಯ-ರೇಖೆಯೊಂದಿಗೆ ಹೊಂದಿಸಲು ನಿಮಗೆ ಸಹಾಯಕಾರಿಯಾಗಿರುವುದು. ‘ಈ ಸಂಚಿಕೆಯಿಂದ’ ಎಂಬ ಭಾಗದಲ್ಲಿನ ಪ್ರಶ್ನೆಗಳಿಗೆ ಪತ್ರಿಕೆಯಾದ್ಯಂತ ಉತ್ತರಗಳನ್ನು ಕಂಡುಕೊಳ್ಳಬಹುದು. ಆದರೆ ಇತರ ಪ್ರಶ್ನೆಗಳಿಗೆ ಉತ್ತರಗಳನ್ನು ಅದೇ ಪುಟದಲ್ಲಿ ಕಂಡುಕೊಳ್ಳಸಾಧ್ಯವಿದೆ. ಆ ಉತ್ತರಗಳನ್ನು ತಲೆಕೆಳಗಾಗಿ ಮುದ್ರಿಸಲಾಗಿರುವುದು. ಆ ಉತ್ತರಗಳನ್ನು ನೋಡುವ ಮೊದಲು ನೀವಾಗಿಯೆ ಸ್ವಲ್ಪ ಸಂಶೋಧನೆಯನ್ನು ಮಾಡಿ, ನೀವೇನನ್ನು ಕಲಿತುಕೊಂಡಿರೊ ಅದನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬಾರದು? ‘ನೀವು ಹೇಗೆ ಉತ್ತರಿಸುವಿರಿ?’ ಎಂಬ ಈ ಹೊಸ ವೈಶಿಷ್ಟ್ಯವನ್ನು ನಿಮ್ಮ ಕುಟುಂಬ ಬೈಬಲ್‌ ಚರ್ಚೆಗಳಲ್ಲಿ ಇಲ್ಲವೆ ಬೈಬಲಿನ ಗುಂಪು ಚರ್ಚೆಗಳಲ್ಲಿಯೂ ಉಪಯೋಗಿಸಬಹುದು.”

3. ಕೆಲವು ಕುಟುಂಬಗಳು ಈ ಹೊಸ ವೈಶಿಷ್ಟ್ಯದಿಂದ ಹೇಗೆ ಪ್ರಯೋಜನ ಪಡೆದಿವೆ ಮತ್ತು ಯಾವ ಭಾಗಗಳನ್ನು ನೀವು ಹೆಚ್ಚು ಇಷ್ಟಪಡುತ್ತೀರಿ?

3 ನಿಶ್ಚಯವಾಗಿಯೂ ಅನೇಕ ಕುಟುಂಬಗಳು ಈ ಹೊಸ ವೈಶಿಷ್ಟ್ಯವನ್ನು ತಮ್ಮ ಕುಟುಂಬ ಅಧ್ಯಯನಕ್ಕೆ ಆಧಾರವಾಗಿ ಉಪಯೋಗಿಸಲು ಇಷ್ಟಪಡುತ್ತವೆ. ಬ್ರಸಿಲ್‌ ದೇಶದ ತಂದೆಯೊಬ್ಬನು ಹೇಳಿದ್ದು: “ನನಗೂ ನನ್ನ ಏಳು ವರ್ಷದ ಮಗ ಮೊಯಿಜೆಸ್‌ಗೂ ಅವೇಕ್‌! ಪತ್ರಿಕೆಯ ಈ ಹೊಸ ವೈಶಿಷ್ಟ್ಯ ಬಹಳ ಇಷ್ಟ. ಅದು ಗಮನ ಕೊಡಲು, ಬೈಬಲ್‌ ವಚನಗಳನ್ನು ತೆರೆದುನೋಡಲು, ಚಿತ್ರಗಳ ಅರ್ಥವನ್ನು ತಿಳಿಯಲು, ತಾರೀಖುಗಳನ್ನು ಅರ್ಥಮಾಡಿಕೊಳ್ಳಲು ಮೊಯಿಜೆಸ್‌ಗೆ ಸಹಾಯಮಾಡಿದೆ.” ಎಂಟು ವರ್ಷದ ಆ್ಯಶ್ಲೀ ಬರೆದುದು: “ಅವೇಕ್‌! ಪತ್ರಿಕೆಯ ಕಡೇ ಪುಟದಲ್ಲಿರುವ ‘ನಿಮ್ಮ ಉತ್ತರವೇನು?’ ಎಂಬ ಲೇಖನಕ್ಕಾಗಿ ಉಪಕಾರ. ಅದರಿಂದ ನಾನು ಬೈಬಲಿನ ಕುರಿತು ಹೆಚ್ಚನ್ನು ಕಲಿತಿರುವೆ.”

4. ಈ ಹೊಸ ವೈಶಿಷ್ಟ್ಯವನ್ನು ಕುಟುಂಬವು ತಮ್ಮ ಬೈಬಲ್‌ ಅಧ್ಯಯನದ ಭಾಗವಾಗಿ ಹೇಗೆ ಉಪಯೋಗಿಸಬಲ್ಲದು?

4 “ನಿಮ್ಮ ಉತ್ತರವೇನು?” ಎಂಬ ಲೇಖನವನ್ನು ನಿಮ್ಮ ಕುಟುಂಬ ಅಧ್ಯಯನದ ಭಾಗವಾಗಿ ಯಾಕೆ ಮಾಡಬಾರದು? ಹೆಚ್ಚು ಕಷ್ಟಕರವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಇಂಡೆಕ್ಸ್‌ ಅಥವಾ ಸಿಡಿ-ರಾಮ್‌ ವಾಚ್‌ಟವರ್‌ ಲೈಬ್ರೆರಿಯನ್ನು ನೀವು ಉಪಯೋಗಿಸಬಹುದು. ಹಾಗೆ ಮಾಡುವ ಮೂಲಕ ನೀವು ನಿಮ್ಮ ಮಕ್ಕಳಿಗೆ ರಿಸರ್ಚ್‌ ಮಾಡುವುದು ಹೇಗೆಂಬುದನ್ನೂ ಕಲಿಸಿಕೊಡುವಿರಿ. ಪ್ರೌಢ ಮಕ್ಕಳು ನಿಮಗಿರುವುದಾದರೆ, ಹೆಚ್ಚು ಜಟಿಲವಾದ ಪ್ರಶ್ನೆಗಳಾದ “ನಾನ್ಯಾರು?” ಅಥವಾ “ಇತಿಹಾಸದಲ್ಲಿ ಎಂದು?” ಎಂಬುದಕ್ಕೆ ಉತ್ತರಗಳನ್ನು ರಿಸರ್ಚ್‌ ಮಾಡುವಂತೆ ಯಾಕೆ ನೇಮಿಸಬಾರದು? ಕುಟುಂಬ ಅಧ್ಯಯನಕ್ಕೆ ಮುಂಚಿತವಾಗಿ ಇದನ್ನು ನೇಮಿಸಿರಿ. ಆಗ ಅವರು ತಮ್ಮ ರಿಸರ್ಚ್‌ನ ಉತ್ತಮ ಫಲವನ್ನು ಅಧ್ಯಯನದ ಸಮಯದಲ್ಲಿ ಹಂಚಿಕೊಳ್ಳಬಲ್ಲರು. ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ “ಪರಿಶುದ್ಧ ಗ್ರಂಥಗಳ” ಪರಿಚಯ ಮಾಡಲು ಸಹಾಯಿಸುತ್ತಾ, ಅವರಲ್ಲಿ ದೇವರ ವಾಕ್ಯವನ್ನು ಬೇರೂರಿಸಬಲ್ಲ ಒಂದು ವಿಧಾನವು ಈ ಪುಟವನ್ನು ಫಲಕಾರಿಯಾಗಿ ಉಪಯೋಗಿಸುವುದೇ ಆಗಿದೆ.​—⁠2 ತಿಮೋ. 3:15; ಧರ್ಮೋ. 6:⁠7.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ