ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
ಯೆಹೋವನು ಘನಮಾನಗಳನ್ನು ಹೊಂದಲು ಯೋಗ್ಯನಾಗಿದ್ದಾನೆ. ಹೀಗಿರುವುದರಿಂದ, ನಾವು ಹೇಗೆ ಯೆಹೋವನನ್ನು ಘನಪಡಿಸುವೆವು? ಯೆಹೋವನನ್ನು ಘನಪಡಿಸುವುದರಲ್ಲಿ ಕೆಲವರು ಎದುರಿಸುತ್ತಿರುವ ಪಂಥಾಹ್ವಾನಗಳು ಯಾವುವು? ಇಂದು ದೇವರನ್ನು ಘನಪಡಿಸುವವರಿಗೆ ಸಿಗುವ ಆಶೀರ್ವಾದಗಳು ಯಾವುವು? ಈ ಪ್ರಶ್ನೆಗಳಿಗೆ, 2008ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು ತೃಪ್ತಿಕರ ಉತ್ತರಗಳನ್ನು ಒದಗಿಸುತ್ತದೆ. ಅದರ ಮುಖ್ಯವಿಷಯವು “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” ಎಂದಾಗಿದೆ. (1 ಕೊರಿಂ. 10:31) ಮುಂಬರಲಿರುವ ಎರಡು ದಿನಗಳ ಆಧ್ಯಾತ್ಮಿಕ ಉಪದೇಶದ ರಸದೌತಣದಲ್ಲಿ ನಮಗಾಗಿ ಏನೆಲ್ಲಾ ಕಾದಿದೆ ಎಂಬುದನ್ನು ಪರಿಗಣಿಸಿರಿ.
“ದೇವರನ್ನು ಯಾಕೆ ಘನಪಡಿಸಬೇಕು?” ಮತ್ತು “ದೇವರು ಅವಶ್ಯಪಡಿಸುವುದನ್ನು ಪೂರೈಸುವುದರಲ್ಲಿ ಆದರ್ಶಪ್ರಾಯರಾಗಿರ್ರಿ” ಎಂಬ ವಿಷಯಗಳ ಕುರಿತು ಜಿಲ್ಲಾ ಮೇಲ್ವಿಚಾರಕನು ಮಾತಾಡುವನು. ಅವನು ನೀಡಲಿರುವ ಬಹಿರಂಗ ಭಾಷಣ, “ದೇವರನ್ನು ಮಹಿಮೆಪಡಿಸುವ ಜನರು ಯಾರು?” ಎಂದಾಗಿದೆ. “ಲೋಕವ್ಯಾಪಕವಾಗಿ ಐಕ್ಯತೆಯಿಂದ ದೇವರನ್ನು ಘನಪಡಿಸುವುದು” ಎಂಬ ಮುಕ್ತಾಯದ ಭಾಷಣವನ್ನು ಅವನು ನೀಡುವನು. ಅವನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನೂ ನಡೆಸುವನು. ಸರ್ಕಿಟ್ ಮೇಲ್ವಿಚಾರಕನು, “ದೇವರ ಘನತೆಯನ್ನು ಪ್ರತಿಫಲಿಸುವುದರಲ್ಲಿ ಹರ್ಷಿಸಿರಿ,” “ಸರ್ಕಿಟಿನ ಅಗತ್ಯಗಳ ಕಡೆಗೆ ಗಮನಕೊಡುವುದು,” ಮತ್ತು 2 ಪೇತ್ರ 1:12ರ ಮೇಲೆ ಆಧಾರಿತವಾದ “‘ಸತ್ಯದಲ್ಲಿ ಸ್ಥಿರವಾಗಿ’ ಉಳಿಯಿರಿ” ಎಂಬ ಶೀರ್ಷಿಕೆಯುಳ್ಳ ಭಾಷಣಗಳನ್ನು ನೀಡುವನು. ಇದಕ್ಕೆ ಕೂಡಿಸಿ, ಹೇಗೆ “ಪಯನೀಯರ್ ಸೇವೆಯು ದೇವರನ್ನು ಘನಪಡಿಸುತ್ತದೆ” ಎಂಬ ವಿಷಯವನ್ನು ನಾವು ಕಲಿಯುವೆವು. ಎರಡು ವಿಚಾರಪ್ರೇರಕ ಭಾಷಣಮಾಲೆಗಳಲ್ಲಿ ಮೊದಲನೆಯದು “ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ದೇವರನ್ನು ಘನಪಡಿಸುವುದು” ಎಂದಾಗಿದೆ. ಈ ಭಾಷಣಮಾಲೆಯು 1 ಕೊರಿಂಥ 10:31ರಲ್ಲಿರುವ ಪ್ರೇರಿತ ಮಾತುಗಳ ಗಾಢವಾದ ಅರ್ಥವನ್ನು ಪರಿಶೀಲಿಸುವುದು. “ಯೆಹೋವನನ್ನು ಸ್ತುತಿಸಲಿಕ್ಕಾಗಿ ಪವಿತ್ರ ಸೇವೆಯನ್ನು ಸಲ್ಲಿಸುವುದು” ಎಂಬ ಭಾಷಣಮಾಲೆಯು ನಮ್ಮ ಆರಾಧನೆಯ ವಿವಿಧ ವೈಶಿಷ್ಟ್ಯಗಳನ್ನು ಚರ್ಚಿಸುವುದು. ಭಾನುವಾರದಂದು ನಾವು ಕಾವಲಿನಬುರುಜು ಸಾರಾಂಶ ಮತ್ತು ದಿನದ ವಚನದ ಚರ್ಚೆಯಲ್ಲಿಯೂ ಆನಂದಿಸುವೆವು. ಅದರೊಡನೆ ದೀಕ್ಷಾಸ್ನಾನಕ್ಕಾಗಿ ಅವಕಾಶವೂ ಇದೆ.
ಮಾನವಕುಲದ ಬಹುಪಾಲು ಜನರು ದೇವರನ್ನು ಅಂಗೀಕರಿಸಲು ನಿರಾಕರಿಸುತ್ತಾರೆ. ಮಾನವರ ಕಾರ್ಯಯೋಜನೆಗಳಿಂದಾಗಿ ಅನೇಕರು ಎಷ್ಟು ಅಪಕರ್ಷಿತರಾಗಿದ್ದಾರೆಂದರೆ ಯೆಹೋವನ ಮಹೋನ್ನತೆಯ ಕುರಿತು ಅವರು ಆಲೋಚಿಸುವುದಿಲ್ಲ. (ಯೋಹಾ. 5:44) ಆದರೆ “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” ಎಂಬ ವಿಷಯವನ್ನು ಪರಿಗಣಿಸುವುದಕ್ಕೆ ಸಮಯವನ್ನು ವ್ಯಯಿಸುವುದರ ಮೌಲ್ಯತೆಯೇನೆಂಬುದು ನಮಗೆ ಮನವರಿಕೆಯಾಗಿದೆ. ಎಲ್ಲ ನಾಲ್ಕು ಸೆಷನ್ಗಳಿಗೂ ಹಾಜರಾಗಿ ಪ್ರಯೋಜನ ಪಡೆಯಲು ಯೋಜಿಸಿರಿ.