ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ—2008
1. (ಎ) ಇಬ್ರಿಯ ಕ್ರೈಸ್ತರಿಗೆ ಪೌಲನು ಕೊಟ್ಟ ಸಲಹೆಯು ಇಂದು ಬಹಳ ತುರ್ತಿನದ್ದಾಗಿದೆ ಏಕೆ? (ಇಬ್ರಿಯ 10:24, 25 ಓದಿ.) (ಬಿ) ಪೌಲನ ಸಲಹೆಯನ್ನು ಅನ್ವಯಿಸಲು ನಮ್ಮೆಲ್ಲರಿಗೆ ಯಾವ ಅವಕಾಶವಿದೆ?
1 ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಿರುವುದರಿಂದ ಸಭೆಯಾಗಿ ಕೂಡಿಕೊಳ್ಳುವುದನ್ನು ಮತ್ತು ಒಬ್ಬರನ್ನೊಬ್ಬರು ಪ್ರೇರೇಪಿಸುವುದನ್ನು “ಮತ್ತಷ್ಟು ಮಾಡಿರಿ” ಎಂದು ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಉತ್ತೇಜಿಸಿದನು. (ಇಬ್ರಿ. 10:24, 25) ಪೌಲನು ತಿಳಿಸಿದ ‘ಆ ದಿನವು’ ಬಹಳ ಹತ್ತಿರದಲ್ಲೇ ಇದೆ ಎನ್ನುವುದಕ್ಕೆ ಪುರಾವೆಯು ಹೆಚ್ಚೆಚ್ಚಾಗುತ್ತಿದೆ! ಆದ್ದರಿಂದಲೇ ನಮ್ಮ ಸಹೋದರ ಸಹೋದರಿಯರೊಂದಿಗೆ ಕೂಡಿಬರುವ ಅವಕಾಶಗಳಿಗಾಗಿ ನಾವು ಮುನ್ನೋಡುತ್ತೇವೆ. ದಿನೇದಿನೇ ಹೆಚ್ಚು ಅಪಾಯಕಾರಿಯಾಗುತ್ತಿರುವ ಈ “ಕಡೇ ದಿವಸಗಳಲ್ಲಿ” ನಮ್ಮನ್ನು ಮಾರ್ಗದರ್ಶಿಸುವ ಆಧ್ಯಾತ್ಮಿಕ ಉಪದೇಶವನ್ನು ಅಲ್ಲಿ ಪಡೆದುಕೊಳ್ಳುತ್ತೇವೆ. (2 ತಿಮೊ. 3:1) 2008ರ ಜಿಲ್ಲಾ ಅಧಿವೇಶನಗಳಲ್ಲಿ ಅಂಥ ಅವಕಾಶ ನಮಗೆ ಸಿಗುವುದು.
2. (ಎ) ಅಧಿವೇಶನದ ಮೂರೂ ದಿನ ಹಾಜರಿರುವುದು ಪ್ರಾಮುಖ್ಯವೇಕೆ?(ಬಿ) ಅಧಿವೇಶನಕ್ಕೆ ಹಾಜರಾಗಲು ಹೇಗೆ ತಯಾರಿ ಮಾಡಲಾರಂಭಿಸಬಹುದು?
2 ಮೂರೂ ದಿನ ತಪ್ಪದೇ ಹಾಜರಾಗಿ: ಮೂರೂ ದಿನ ಹಾಜರಿರುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ‘ಸಭೆಯಾಗಿ ಕೂಡಿಕೊಳ್ಳುವದನ್ನು ಬಿಟ್ಟುಬಿಡದಿರುವ’ ಮೂಲಕ ಅಮೂಲ್ಯವಾದ ಆಧ್ಯಾತ್ಮಿಕ ಆಹಾರ ನಮಗೆ ತಪ್ಪಿಹೋಗದು. (ಇಬ್ರಿ. 10:25) ಇದಕ್ಕಾಗಿ ಸಾಕಷ್ಟು ಮುಂಚಿತವಾಗಿ ತಯಾರಿ ಮಾಡಿರಿ. ಅವಶ್ಯವಿರುವ ಏರ್ಪಾಡುಗಳನ್ನು ಮಾಡಸಾಧ್ಯವಾಗುವಂತೆ ನಿಮ್ಮ ಕೆಲಸದ ಮಾಲೀಕರಿಗೆ ಮುಂಚಿತವಾಗಿಯೇ ತಿಳಿಸಿರಿ. ಅಧಿವೇಶನದ ಸಮಯದಲ್ಲಿ ನಿಮ್ಮ ಮಕ್ಕಳಿಗೆ ರಜೆಯಿಲ್ಲದಿರುವಲ್ಲಿ ನಿಮ್ಮ ಯೋಜನೆಗಳ ಬಗ್ಗೆ ಶಿಕ್ಷಕರಿಗೆ ತಿಳಿಸಿರಿ. ಅಧಿವೇಶನವು ನಿಮ್ಮ ಆರಾಧನೆಯ ಅವಿಭಾಜ್ಯ ಅಂಗವಾಗಿದೆ ಎನ್ನುವುದನ್ನು ಅವರಿಗೆ ಹೇಳಿರಿ. ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವಾಗ ಖಂಡಿತವಾಗಿ ನಿಮ್ಮ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದ ಇರುವುದು.—ಮತ್ತಾ. 6:33.
3. ಯಾವ ವಿಧಗಳಲ್ಲಿ ನಾವು ಇತರರಿಗಾಗಿ ಹಿತಚಿಂತನೆ ತೋರಿಸಬಹುದು?
3 ಹಾಜರಾಗುವಂತೆ ಇತರರಿಗೆ ಸಹಾಯಮಾಡಿರಿ: ಪೌಲನು ಸಹೋದರರಿಗೆ, ‘ಪರಸ್ಪರ ಹಿತಚಿಂತಕರಾಗಿರುವಂತೆ’ ಕೇಳಿಕೊಂಡನು. (ಇಬ್ರಿ. 10:24) ಅಧಿವೇಶನಕ್ಕೆ ಹಾಜರಾಗಲು, ನಿಮ್ಮ ಸಭಾ ಪುಸ್ತಕ ಅಧ್ಯಯನ ಗುಂಪಿನಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯದ ಅಗತ್ಯವಿದೆಯೋ? ಕೇವಲ ಒಂದು ದಿನವಾದರೂ ಸರಿ, ನಿಮ್ಮ ಬೈಬಲ್ ವಿದ್ಯಾರ್ಥಿಗಳು ನಿಮ್ಮೊಂದಿಗೆ ಅಧಿವೇಶನದಲ್ಲಿ ಆನಂದಿಸುವಂತೆ ನೀವು ಸಹಾಯಮಾಡಬಲ್ಲಿರೋ? ಅವಿಶ್ವಾಸಿ ಕುಟುಂಬ ಸದಸ್ಯರಿಗೆ ಅಧಿವೇಶನದ ಬಗ್ಗೆ ನಿಮ್ಮ ಯೋಜನೆಗಳನ್ನು ತಿಳಿಸುವಾಗ ನಿಮ್ಮೊಂದಿಗೆ ಅಧಿವೇಶನಕ್ಕೆ ಹಾಜರಾಗುವಂತೆ ಆಮಂತ್ರಿಸಿರಿ. ನಿಮ್ಮ ಪ್ರೀತಿಪೂರ್ವಕ ಪ್ರಯತ್ನಗಳು ಅನಿರೀಕ್ಷಿತ ಆಶೀರ್ವಾದಗಳನ್ನು ತರಬಲ್ಲವು.
4. ಜಿಲ್ಲಾ ಅಧಿವೇಶನಗಳ ತಾರೀಕು ಮತ್ತು ಸ್ಥಳದ ಕುರಿತು ಮಾಹಿತಿಯನ್ನು ನಾವು ಹೇಗೆ ಪಡೆದುಕೊಳ್ಳಬಹುದು?
4 ಮಾಹಿತಿ ಪಡೆಯುವುದು: ಅಧಿವೇಶನಗಳು ಯಾವಾಗ ಮತ್ತು ಎಲ್ಲಿ ನಡೆಯುತ್ತವೆ ಎಂದು ಕೇಳುತ್ತಾ ಪ್ರತಿ ವರ್ಷ ಅನೇಕರು ಬ್ರಾಂಚ್ ಆಫೀಸಿಗೆ ಫೋನ್ ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರು ಈಗಾಗಲೇ ಆ ಕುರಿತ ಮಾಹಿತಿಯನ್ನು ಪಡೆದುಕೊಂಡ ಸಹೋದರ ಸಹೋದರಿಯರಾಗಿರುತ್ತಾರೆ. ಬ್ರಾಂಚ್ ಆಫೀಸಿಗೆ ಕರೆಮಾಡುವ ಮೊದಲು ನಮ್ಮ ರಾಜ್ಯದ ಸೇವೆಯಲ್ಲಿರುವ ಪಟ್ಟಿಯನ್ನು ನೋಡುವಂತೆ ಸಲಹೆ ನೀಡುತ್ತೇವೆ.
5. ನಮ್ಮ ಸಭೆಗೆ ನೇಮಿತವಾಗಿರದ ಅಧಿವೇಶನದ ವಸತಿಸೌಕರ್ಯದ ಕುರಿತು ಮಾಹಿತಿ ಬೇಕಾಗಿರುವಲ್ಲಿ ನಾವೇನು ಮಾಡಬೇಕು?
5 ನಿಮ್ಮ ಸಭೆಗೆ ನೇಮಿಸಲ್ಪಟ್ಟಿರದ ಅಧಿವೇಶನವೊಂದಕ್ಕೆ ನೀವು ಹಾಜರಾಗಲಿರುವಲ್ಲಿ ಅಧಿವೇಶನ ಮುಖ್ಯಕಾರ್ಯಾಲಯದ ವಿಳಾಸಕ್ಕೆ ಪತ್ರ ಬರೆದು ವಸತಿಸೌಕರ್ಯದ ಕುರಿತು ಮಾಹಿತಿ ಪಡೆಯಬಹುದು. ಅಧಿವೇಶನ ಮುಖ್ಯಕಾರ್ಯಾಲಯಗಳ ವಿಳಾಸಗಳನ್ನು ನಮ್ಮ ರಾಜ್ಯದ ಸೇವೆಯ ಮುಂಬರುವ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಪತ್ರ ಬರೆಯುವಾಗ ಸ್ವ-ವಿಳಾಸವಿರುವ ಮತ್ತು ಸ್ಟ್ಯಾಂಪ್ ಅಂಟಿಸಿರುವ ಲಕೋಟೆಯನ್ನು ಖಂಡಿತ ಸೇರಿಸಿರಿ.
6. ಸ್ಪೆಷಲ್ ನೀಡ್ಸ್ ರೂಮ್ ರಿಕ್ವೆಸ್ಟ್ ಫಾರ್ಮ್ನ ಬಗ್ಗೆ ಯಾವ ಮರುಜ್ಞಾಪನಗಳು ಕೊಡಲ್ಪಟ್ಟಿವೆ?
6 ವಿಶೇಷ ಅಗತ್ಯಗಳು: ಒಬ್ಬ ಪ್ರಚಾರಕನು ವಸತಿಸೌಕರ್ಯ ಪಡೆದುಕೊಳ್ಳಲು ಸಹಾಯ ಕೋರುವಲ್ಲಿ, ಸಭಾ ಸೇವಾ ಕಮಿಟಿಯು ಆ ಪ್ರಚಾರಕನು ಸ್ಪೆಷಲ್ ನೀಡ್ಸ್ ರೂಮ್ ರಿಕ್ವೆಸ್ಟ್ ಫಾರ್ಮನ್ನು ಕಳುಹಿಸಲು ಅರ್ಹನೋ ಎಂಬುದನ್ನು ನಿರ್ಧರಿಸಬೇಕು. ಸಭಾ ಕಾರ್ಯದರ್ಶಿಯು ಈ ಫಾರ್ಮನ್ನು ಅಧಿವೇಶನದ ರೂಮಿಂಗ್ ಇಲಾಖೆಗೆ ಕಳುಹಿಸುವ ಮುಂಚೆ ಅದರಲ್ಲಿರುವ ನಿರ್ದೇಶನಗಳು ಮತ್ತು ಎಲ್ಲ ಹಿರಿಯರ ಮಂಡಲಿಗಳಿಗೆ ಸಂಬೋಧಿಸಲ್ಪಟ್ಟ 2008 ಫೆಬ್ರವರಿ 14ರ ತಾರೀಕಿನ ಪತ್ರದಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶನೆಗಳನ್ನು ಪರಿಶೀಲಿಸಬೇಕು.
7. ವಸತಿಸೌಕರ್ಯಗಳಿಗಾಗಿ ಮಾಡಲಾಗಿರುವ ಏರ್ಪಾಡುಗಳೊಂದಿಗೆ ನಾವು ಹೇಗೆ ಸಹಕರಿಸಬಹುದು? (“ರೂಮಿಂಗ್ ನಿರ್ದೇಶನಗಳು” ಎಂಬ ಚೌಕ ನೋಡಿ.)
7 ರೂಮ್ ಕಾದಿರಿಸುವುದು: ಲಭ್ಯವಿರುವ ಹೋಟೆಲುಗಳ ಶಿಫಾರಸು ಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ ಅನ್ನು ಅಧಿವೇಶನ ನಡೆಯುವುದಕ್ಕೆ ಸಾಕಷ್ಟು ಮುಂಚೆಯೇ ಸಭೆಯ ಮಾಹಿತಿ ಫಲಕದಲ್ಲಿ ಹಾಕಲಾಗುವುದು. ರೂಮ್ ಕಾದಿರಿಸುವ ಮೊದಲು “ರೂಮಿಂಗ್ ನಿರ್ದೇಶನಗಳು” ಮತ್ತು “ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ” ಇವುಗಳನ್ನು ಪರೀಕ್ಷಿಸಿ. ಲಿಸ್ಟ್ನಲ್ಲಿ ಕೊಡಲಾಗಿರುವ ದರಕ್ಕಿಂತ ಹೆಚ್ಚಿನ ದರ ಹೋಟೆಲ್ಗಳಲ್ಲಿ ಕೇಳಲಾಗುವುದಾದರೆ ಅದಕ್ಕೆ ಒಪ್ಪಿಕೊಳ್ಳುವುದು ಅಥವಾ ಲಿಸ್ಟ್ನಲ್ಲಿ ಕೊಡಲಾಗಿರದ ಹೋಟೆಲ್ಗಳಿಗೆ ಕರೆಮಾಡುವುದಕ್ಕೆ ಬದಲಾಗಿ, ನಿಮ್ಮ ಸಭೆಯು ಅಧಿವೇಶನದ ಪರಿಷ್ಕೃತ ಲಿಸ್ಟನ್ನು ಪಡೆದುಕೊಳ್ಳುವ ವರೆಗೂ ದಯವಿಟ್ಟು ಕಾಯಿರಿ.
8. (ಎ) ಅಧಿವೇಶನಕ್ಕೆ ಹಾಜರಾಗುವಾಗ ಯೆಹೋವನನ್ನು ನಾವು ಯಾವ ವಿಧಗಳಲ್ಲಿ ಮಹಿಮೆಪಡಿಸಬಹುದು? (ಬಿ) ನಮ್ಮ ಸಹೋದರರ ಉತ್ತಮ ನಡತೆಯ ಕಾರಣ, ಯೆಹೋವನ ಜನರ ಬಗ್ಗೆ ಯಾವ ಒಳ್ಳೇ ಹೇಳಿಕೆಗಳನ್ನು ಮಾಡಲಾಗಿದೆ?
8 ಸತ್ಕ್ರಿಯೆಗಳು: ಆರಾಧನೆಗೆ ಒಟ್ಟುಗೂಡುವಂತೆ ಯೆಹೋವನು ಕೊಟ್ಟ ಆಜ್ಞೆಗೆ ವಿಧೇಯತೆ ತೋರಿಸುವುದರಿಂದ ನಮಗೆ “ವೃದ್ಧಿ” ಅಥವಾ ಪ್ರಯೋಜನ ಆಗುತ್ತದೆ. ಹೆಚ್ಚು ಮುಖ್ಯವಾಗಿ ಯೆಹೋವನ ಹೆಸರನ್ನು ಮಹಿಮೆಪಡಿಸಲು ಇದು ಅವಕಾಶಗಳನ್ನು ಒದಗಿಸುತ್ತದೆ. (ಯೆಶಾ. 48:17) ಜಿಲ್ಲಾ ಅಧಿವೇಶನಗಳಲ್ಲಿ ಅನೇಕರಿಗೆ ನಮ್ಮ ‘ಸತ್ಕ್ರಿಯೆಗಳು ಪ್ರಸಿದ್ಧವಾಗುತ್ತವೆ’ ಮತ್ತು ಕೆಲವರು ಆ ಬಗ್ಗೆ ತಮ್ಮ ಅನಿಸಿಕೆಗಳನ್ನೂ ವ್ಯಕ್ತಪಡಿಸಿದ್ದಾರೆ. (1 ತಿಮೊ. 5:25) ಹಲವಾರು ವರ್ಷಗಳಿಂದ ನಮ್ಮ ಅಧಿವೇಶನಗಳು ನಡೆಯುತ್ತಿದ್ದ ಒಂದು ನಗರದಲ್ಲಿನ ಸಭಾಂಗಣದ ಮ್ಯಾನೇಜರರೊಬ್ಬರು ಹೇಳಿದ್ದು: “ಪ್ರತಿನಿಧಿಗಳು ಶಾಂತರೂ ಸಂಯಮಭರಿತ ಜನರೂ ಆಗಿದ್ದಾರೆ ಅಲ್ಲದೇ ಸಭಾಂಗಣ ಹಾಗೂ ಅದರ ಆವರಣವನ್ನು ನೀಟಾಗಿಯೂ ಸ್ವಚ್ಛವಾಗಿಯೂ ಇಟ್ಟಿದ್ದಾರೆ.” ಇನ್ನೊಂದು ನಗರದಲ್ಲಿ ನಮ್ಮ ಅಧಿವೇಶನದ ಪ್ರತಿನಿಧಿಗಳ ಉತ್ತಮ ನಡತೆಯನ್ನು ಗಮನಿಸಿ ಸಭಾಂಗಣದ ನಿರ್ವಾಹಕ ಮಂಡಳಿಯು ಸಭಾಂಗಣದ ಬಾಡಿಗೆಯಲ್ಲಿ 25% ರಿಯಾಯತಿ ನೀಡಿತು. ಹೋಟೆಲ್ ಮ್ಯಾನೇಜರ್ರೊಬ್ಬರು, ಮನರಂಜಕರು ಮತ್ತು ಇತರ ಗುಂಪುಗಳವರಿಂದ ಉಂಟಾದ ತೊಂದರೆಗಳನ್ನು ತಿಳಿಸಿದ ನಂತರ ಹೋಟೆಲ್ನಲ್ಲಿ ತಂಗಿರುವಾಗ ನಮ್ಮ ಸಹೋದರರು ತೋರಿಸಿದ ಸಹಕಾರ ಮನೋಭಾವ ಮತ್ತು ತಾಳ್ಮೆಯನ್ನು ಪ್ರಶಂಸಿಸಿದರು. ಅವರು ಹೇಳಿದ್ದು: “ನಮ್ಮ ಎಲ್ಲಾ ಅತಿಥಿಗಳು ಯೆಹೋವನ ಸಾಕ್ಷಿಗಳಂತೆಯೇ ಇರಬೇಕೆಂದು ಹಾರೈಸುತ್ತೇವೆ!” ಇಂತಹ ಮತ್ತು ತದ್ರೀತಿಯ ಇನ್ನೂ ಅನೇಕ ಹೇಳಿಕೆಗಳಿಗೆ ಕಾರಣವಾದ ನಮ್ಮ ಸಹೋದರರ ನಡವಳಿಕೆಯು ನಮ್ಮ ದೇವರಾದ ಯೆಹೋವನಿಗೆ ನಿಸ್ಸಂದೇಹವಾಗಿ ಸಂತೋಷ ತಂದಿರಬೇಕು!
9. ಕಾರ್ಯಕ್ರಮದ ಪ್ರತಿಯೊಂದು ಭಾಗಕ್ಕೆ ನಿಕಟ ಗಮನವನ್ನು ಕೊಡುವ ಮಹತ್ವವನ್ನು ಮತ್ತಾಯ 4:4 ಹೇಗೆ ಎತ್ತಿತೋರಿಸುತ್ತದೆ?
9 ನಮ್ಮ ಜೀವವು ‘ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿಗೆ’ ಕಿವಿಗೊಡುವುದರ ಮೇಲೆ ಅವಲಂಬಿಸಿದೆ ಎಂಬದಾಗಿ ಯೇಸು ಹೇಳಿದನು. (ಮತ್ತಾ. 4:4) ನಮ್ಮ ವಾರ್ಷಿಕ ಅಧಿವೇಶನಗಳಲ್ಲಿ ಯೆಹೋವನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮೂಲಕ ‘ಹೊತ್ತು ಹೊತ್ತಿನ ಆಹಾರವನ್ನು’ ಒದಗಿಸುತ್ತಾನೆ. (ಮತ್ತಾ. 24:45) ಈ ಆಧ್ಯಾತ್ಮಿಕ ಔತಣವನ್ನು ತಯಾರಿಸಿ ಬಡಿಸಲು ಬಹಳಷ್ಟು ಶ್ರಮವಹಿಸಲಾಗುತ್ತದೆ. ಕಾರ್ಯಕ್ರಮದ ಪ್ರತಿಯೊಂದು ಭಾಗಕ್ಕೆ ಹಾಜರಿದ್ದು ನಿಕಟ ಗಮನವನ್ನು ಕೊಡುವ ಮೂಲಕ ಯೆಹೋವನ ಪ್ರೀತಿಪೂರ್ವಕ ಆರೈಕೆಗಾಗಿ ಕೃತಜ್ಞತೆ ತೋರಿಸೋಣ.
[ಪುಟ 3ರಲ್ಲಿರುವಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಿಗ್ಗೆ 9:20 - ಸಾಯಂಕಾಲ 4:55
ಭಾನುವಾರ
ಬೆಳಿಗ್ಗೆ 9:20 - ಸಾಯಂಕಾಲ 4:00
[ಪುಟ 4ರಲ್ಲಿರುವಚೌಕ]
ರೂಮಿಂಗ್ ನಿರ್ದೇಶನಗಳು:
◼ ಏಪ್ರಿಲ್ 7, 2008ರ ವಾರದ ಸೇವಾ ಕೂಟಕ್ಕೆ ಮುಂಚಿತವಾಗಿ ರೂಮ್ಗಳನ್ನು ಕಾದಿರಿಸಲು ಹೋಟೆಲ್ಗಳಿಗೆ ಕರೆಮಾಡಬೇಡಿ.
◼ ಸಾಧ್ಯವಾಗುವಲ್ಲಿ ಏಪ್ರಿಲ್ ತಿಂಗಳಿನಲ್ಲೇ ರೂಮ್ಗಳನ್ನು ಕಾದಿರಿಸಿ. ರೂಮ್ಗಳನ್ನು ಕಾದಿರಿಸಲು ನಾವು ಇಂಟರ್ನೆಟ್ ಸೌಕರ್ಯ ಬಳಸುತ್ತಿಲ್ಲವಾದ್ದರಿಂದ ದಯವಿಟ್ಟು ಆ ಮಾಧ್ಯಮ ಬಳಸಬೇಡಿ.
◼ ಶಿಫಾರಸು ಮಾಡಲಾಗಿರುವ ಲಾಡ್ಜಿಂಗ್ ಲಿಸ್ಟ್ನಲ್ಲಿರುವ ಹೋಟೆಲ್ಗಳಲ್ಲೇ ಉಳಿದುಕೊಳ್ಳಿರಿ.
◼ ಲಿಸ್ಟ್ನಲ್ಲಿ ಕೊಡಲಾಗಿರುವ ದರಕ್ಕಿಂತ ಹೆಚ್ಚಿನ ದರ ಕೇಳಲಾಗುವುದಾದರೆ ಅದಕ್ಕೆ ಒಪ್ಪಿಕೊಳ್ಳಬೇಡಿ.
◼ ರೂಮ್ನಲ್ಲಿ ತಂಗುವವರ ಹೆಸರಿನಲ್ಲೇ ಪ್ರತಿಯೊಂದು ರೂಮ್ ಅನ್ನು ಕಾದಿರಿಸಿ.
◼ ರೂಮ್ನಲ್ಲಿ ಅನುಮತಿಸಲಾಗುವ ವಯಸ್ಕರ ಸಂಖ್ಯೆಗಿಂತ ಹೆಚ್ಚಿನವರು ಉಳಿದುಕೊಳ್ಳದೇ ಇರುವ ಮೂಲಕ ಲಿಸ್ಟ್ನಲ್ಲಿ ಸೂಚಿಸಲಾದಂತೆ ನಿಯಮಗಳನ್ನು ಪಾಲಿಸಿರಿ.
◼ ನೀವು ಕಾದಿರಿಸಿದ ರೂಮ್ಗಳನ್ನೇ ಉಪಯೋಗಿಸಿರಿ.—ಮತ್ತಾ. 5:37.
◼ ಲಿಸ್ಟ್ನಲ್ಲಿರದ ಹೋಟೆಲ್ಗಳಿಗೆ ಕರೆಮಾಡಿ ನಮ್ಮ ಅಧಿವೇಶನಕ್ಕಾಗಿ ವಿಶೇಷ ದರದಲ್ಲಿ ರೂಮ್ಗಳಿವೆಯೋ ಎಂದು ಕೇಳಬೇಡಿ.
◼ ಲಿಸ್ಟ್ನಲ್ಲಿ ಕೊಡಲಾಗಿರುವ ಎಲ್ಲ ಹೋಟೆಲುಗಳಿಗೆ ನೀವು ಕರೆಮಾಡಿದ ನಂತರ ರೂಮ್ಗಳು ಸಿಗದೆಹೋದಲ್ಲಿ ಅಥವಾ ಒಂದು ಹೋಟೆಲಿನ ವಿಷಯದಲ್ಲಿ ನಿಮಗೆ ಯಾವುದಾದರೂ ಸಮಸ್ಯೆಯಿರುವಲ್ಲಿ ಇದರ ಕುರಿತು ನಿಮ್ಮ ಸಭಾ ಕಾರ್ಯದರ್ಶಿಗೆ ತಿಳಿಸಿರಿ. ಅವರು ಲಿಸ್ಟ್ನ ಮೇಲ್ಭಾಗದಲ್ಲಿ ಕೊಡಲಾಗಿರುವ ಮಾಹಿತಿಯನ್ನು ಉಪಯೋಗಿಸುತ್ತಾ ಅಧಿವೇಶನದ ರೂಮಿಂಗ್ ಇಲಾಖೆಯನ್ನು ಸಂಪರ್ಕಿಸಬೇಕು.
◼ ರಿಸರ್ವೇಷನನ್ನು ರದ್ದುಗೊಳಿಸಲೇಬೇಕಾದ ಪರಿಸ್ಥಿತಿ ಏಳುವಲ್ಲಿ ಆದಷ್ಟು ಬೇಗನೆ ಅದನ್ನು ಹೋಟೆಲ್ಗೆ ತಿಳಿಯಪಡಿಸಿರಿ. ರದ್ದುಗೊಳಿಸಲಾದ ವಿವರಗಳನ್ನು ಪಡೆಯಲು ಮರೆಯದಿರಿ.
ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ:
1. ಲಾಡ್ಜಿಂಗ್ ಲಿಸ್ಟ್ನಲ್ಲಿ ಕೊಡಲಾಗಿರುವ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುತ್ತಾ ಸಾಮಾನ್ಯ ಕೆಲಸದ ವೇಳೆಯಲ್ಲಿ ಹೋಟೆಲುಗಳನ್ನು ಸಂಪರ್ಕಿಸಿರಿ.
2. ನೀವು ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುತ್ತಿದ್ದೀರಿ ಎಂದು ಹೋಟೆಲಿನವರಿಗೆ ತಿಳಿಸಿರಿ.
3. ನೀವು ಯಾವ ತಾರೀಕಿನಂದು ರೂಮನ್ನು ಬಾಡಿಗೆಗೆ ತೆಗೆದುಕೊಳ್ಳುವಿರಿ ಮತ್ತು ಯಾವಾಗ ಖಾಲಿಮಾಡುವಿರಿ ಎಂಬುದನ್ನು ತಿಳಿಸಿ.
4. ಯಾವುದೇ ರೂಮ್ಗಳು ಲಭ್ಯವಿಲ್ಲದಿರುವುದಾದರೆ, ಲಿಸ್ಟ್ನಲ್ಲಿರುವ ಮತ್ತೊಂದು ಹೋಟೆಲಿಗೆ ಕರೆಮಾಡಿ.
5. ನಿಮ್ಮ ರಿಸರ್ವೇಷನನ್ನು ಮಾಡಿ ಮಂಜೂರಾತಿಯ ವಿವರಗಳನ್ನು ಕೇಳಿಕೊಳ್ಳಿ.
6. ಕ್ರೆಡಿಟ್ ಕಾರ್ಡ್, ಚೆಕ್ ಅಥವಾ ಮನಿ ಆರ್ಡರ್ ಮೂಲಕ ಹತ್ತು ದಿನಗಳೊಳಗಾಗಿ ಮುಂಗಡ ಹಣವನ್ನು ಕಳುಹಿಸಿರಿ. ನಗದು ಹಣವನ್ನು ಕಳುಹಿಸಲೇಬೇಡಿ. ಚೆಕ್ ಅಥವಾ ಮನಿ ಆರ್ಡರ್ ಮೂಲಕ ಮುಂಗಡ ಹಣವನ್ನು ಕಳುಹಿಸುವಲ್ಲಿ, ರೂಮ್ ಮಂಜೂರಾತಿಯ ವಿವರಗಳನ್ನು ಚೆಕ್ನ ಹಿಂಭಾಗದಲ್ಲಿ ಅಥವಾ ಮನಿ ಆರ್ಡರ್ ಫಾರ್ಮ್ನ ಕೆಳಭಾಗದಲ್ಲಿ ಬರೆಯಿರಿ.