ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ—2009
1. (ಎ) ಜಿಲ್ಲಾ ಅಧಿವೇಶನದ ಎಲ್ಲಾ ಮೂರು ದಿನಗಳ ಕಾರ್ಯಕ್ರಮಕ್ಕೆ ಹಾಜರಿರುವುದರಿಂದ ನಾವು ಯಾವ ಆಶೀರ್ವಾದಗಳನ್ನು ಪಡೆಯುವೆವು? (ಬಿ) ಯಾವ ಯೋಜನೆಗಳನ್ನು ನಾವು ಈಗಲೇ ಮಾಡಬೇಕು?
1 ಇಸವಿ 2009ರ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಿ ‘ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರೂ’ ಯೆಹೋವನನ್ನು ಸ್ತುತಿಸುವವರೂ ಆದ ಇತರರೊಂದಿಗೆ ಕೂಡಿಬರಲಿಕ್ಕಾಗಿ ನಾವೆಲ್ಲರೂ ಕಾತರದಿಂದ ಮುನ್ನೋಡುತ್ತಿದ್ದೇವೆ. (ಮತ್ತಾ. 5:3, NW) ಯೆಹೋವನ ದಿನವು ತ್ವರೆಯಾಗಿ ಬರುತ್ತಿರುವುದರಿಂದ, ಹೃದಯೋಲ್ಲಾಸಗೊಳಿಸುವ ಕ್ರೈಸ್ತ ಸಹವಾಸದಿಂದಲೂ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಲು ಬೇಕಾಗಿರುವ ಆಧ್ಯಾತ್ಮಿಕ ಉತ್ತೇಜನದಿಂದಲೂ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಅಧಿವೇಶನದ ಎಲ್ಲಾ ಮೂರು ದಿನಗಳ ಕಾರ್ಯಕ್ರಮಕ್ಕೆ ಹಾಜರಾಗುವಂತೆ ನಾವು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇವೆ. (ಚೆಫ. 1:14) ಅಧಿವೇಶನವು ನಿಮ್ಮ ಆರಾಧನೆಯ ಒಂದು ಪ್ರಾಮುಖ್ಯ ಭಾಗ ಎಂಬುದನ್ನು ನಿಮ್ಮ ಶಿಕ್ಷಕರಿಗೆ ಮತ್ತು ಧಣಿಗಳಿಗೆ ತಿಳಿಯಪಡಿಸಿರಿ. ಧೈರ್ಯದಿಂದ ಮುಂಚಿತವಾಗಿಯೇ ಯೋಜನೆಗಳನ್ನು ಮಾಡಿರಿ ಮತ್ತು ಯೆಹೋವನ ಆಶೀರ್ವಾದಕ್ಕಾಗಿ ಕೇಳಿಕೊಳ್ಳಿ; ಯೆಹೋವನು ಖಂಡಿತ ನಿಮ್ಮನ್ನು ಬೆಂಬಲಿಸುತ್ತಾನೆ.—ಯೆಶಾ. 50:10.
2. (ಎ) ಅಂತಾರಾಷ್ಟ್ರೀಯ ಅಧಿವೇಶನಗಳಿಗೆ ಯಾರು ಮಾತ್ರ ಹಾಜರಾಗಬಹುದು? (ಬಿ) ದೊಡ್ಡ ಅಧಿವೇಶನಗಳನ್ನು ಯಾವಾಗ ಮತ್ತು ಎಲ್ಲಿ ಏರ್ಪಡಿಸಲಾಗಿದೆ?
2 ಭಾರತದಲ್ಲಿ ಯಾವುದೇ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ನಿಯೋಜಿಸಲಾಗಿರುವುದಿಲ್ಲ. ಅಂತಾರಾಷ್ಟ್ರೀಯ ಅಧಿವೇಶನಗಳು ಕೇವಲ ಕೆಲವೇ ದೇಶಗಳಲ್ಲಿ ಜರುಗಲಿರುವುದರಿಂದ ನೇಮಿಸಲ್ಪಟ್ಟವರು ಮಾತ್ರ ಅದಕ್ಕೆ ಹಾಜರಾಗಬೇಕು. ನಾವು ಈ ನಿರ್ದೇಶನವನ್ನು ಅನುಸರಿಸುವುದು ಅತಿಯಾದ ಜನಸಂದಣಿಯನ್ನು ತಪ್ಪಿಸುವುದು. (1 ಕೊರಿಂ. 14:40; ಇಬ್ರಿ. 13:17) ಈ ವರ್ಷ ಭಾರತದಲ್ಲಿ ಜಿಲ್ಲಾ ಅಧಿವೇಶನಗಳು ಹೆಚ್ಚಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿವೆ. ಡಿಸೆಂಬರ್ ತಿಂಗಳಿನಲ್ಲಿ ಎರಡು ದೊಡ್ಡ ಜಿಲ್ಲಾ ಅಧಿವೇಶನಗಳು ತಮಿಳುನಾಡು ಹಾಗೂ ಕೇರಳದಲ್ಲಿ ಜರುಗಲಿದ್ದು, ಬೇರೆ ಬೇರೆ ಸ್ಥಳಗಳಿಂದ ಬರುವ ಸಾಕ್ಷಿಗಳೊಂದಿಗೆ ಸಹವಾಸ ಮಾಡಲು ಅವಕಾಶವನ್ನು ಮಾಡಿಕೊಡುವವು.
3. ನಮ್ಮ ಸಭೆಯಲ್ಲಿರುವ ಕೆಲವರಿಗೆ ನಾವು ಕ್ರೈಸ್ತ ಪ್ರೀತಿಯನ್ನು ಹೇಗೆ ತೋರಿಸಸಾಧ್ಯವಿದೆ?
3 ಹಾಜರಾಗಲು ಇತರರಿಗೆ ನೆರವು: ನಿಮ್ಮ ಸಭೆಯಲ್ಲಿರುವ ಕೆಲವರಿಗೆ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಸಹಾಯದ ಅಗತ್ಯವಿದೆಯೋ? ಅಂಥವರಿಗೆ ನಿಮ್ಮ ಸಹಾಯಹಸ್ತ ನೀಡುವಾಗ ನೀವು “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ” ನೋಡುತ್ತೀರಿ.—ಫಿಲಿ. 2:4.
4, 5. ನಿಮ್ಮ ಸಭೆಗೆ ನೇಮಕವಾಗಿರದ ಇನ್ನೊಂದು ಅಧಿವೇಶನವನ್ನು ನೀವು ಹಾಜರಾಗಬೇಕಾದ ಪರಿಸ್ಥಿತಿ ಬಂದಲ್ಲಿ ನೀವೇನು ಮಾಡಬೇಕು?
4 ಮಾಹಿತಿಯನ್ನು ಪಡೆದುಕೊಳ್ಳುವುದು: ಅಧಿವೇಶನದ ತಾರೀಕು ಮತ್ತು ಸ್ಥಳವನ್ನು ವಿಚಾರಿಸುತ್ತಾ ಬ್ರಾಂಚ್ ಆಫೀಸಿಗೆ ಕರೆಮಾಡುವ ಮೊದಲು ದಯವಿಟ್ಟು ಮಾಹಿತಿಗಾಗಿ ಸಭಾ ಸೆಕ್ರಿಟರಿಯನ್ನು ವಿಚಾರಿಸಿರಿ. ಹೀಗೆ ಮಾಡುವುದರಿಂದ ಬ್ರಾಂಚ್ಗೆ ಅನಾವಶ್ಯಕ ಕರೆಮಾಡುವುದನ್ನು ತಪ್ಪಿಸಬಹುದು.
5 ನಿಮ್ಮ ಸಭೆಗೆ ನೇಮಕವಾಗಿರದ ಒಂದು ಅಧಿವೇಶನಕ್ಕೆ ನೀವು ಹಾಜರಾಗುವುದಾದರೆ ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ಗಾಗಿ ನೀವು ಅಧಿವೇಶನದ ಮುಖ್ಯ ಕಾರ್ಯಾಲಯದ ವಿಳಾಸಕ್ಕೆ ಬರೆದು ವಿನಂತಿಸಿಕೊಳ್ಳಬಹುದು. ಇದರ ಕುರಿತ ಮಾಹಿತಿಯನ್ನು ಜೂನ್ 2009ರ ನಮ್ಮ ರಾಜ್ಯ ಸೇವೆಯಲ್ಲಿ ನೀಡಲಾಗುವುದು. ನಿಮ್ಮ ಪತ್ರಕ್ಕೆ ಉತ್ತರ ಪಡೆಯಲು ದಯವಿಟ್ಟು ಸ್ವ-ವಿಳಾಸವಿರುವ ಮತ್ತು ಸ್ಟ್ಯಾಂಪ್ ಅಂಟಿಸಿರುವ ಲಕೋಟೆಯೊಂದನ್ನು ಪತ್ರದೊಂದಿಗೆ ಕಳುಹಿಸಿರಿ.
6. ವಿಶೇಷ ಅಗತ್ಯಗಳಿರುವ ಒಬ್ಬ ಪ್ರಚಾರಕನು ವಸತಿ ಸೌಕರ್ಯವನ್ನು ಪಡೆಯಲು ನೆರವನ್ನು ಕೋರುವುದಾದರೆ ಯಾವ ವಿಧಾನವನ್ನು ಪಾಲಿಸಬೇಕು?
6 ವಿಶೇಷ ಅಗತ್ಯಗಳು: ಒಬ್ಬ ಪ್ರಚಾರಕನು ವಸತಿ ಸೌಕರ್ಯವನ್ನು ಪಡೆಯಲು ಸಹಾಯ ಕೋರುವಲ್ಲಿ, ಆ ಪ್ರಚಾರಕನು ಸ್ಪೆಷಲ್ ನೀಡ್ಸ್ ರೂಮ್ ರಿಕ್ವೆಸ್ಟ್ ಫಾರ್ಮನ್ನು ಕಳುಹಿಸಲು ಅರ್ಹನೋ ಎಂಬುದನ್ನು ಸಭಾ ಸೇವಾ ಕಮಿಟಿಯು ನಿರ್ಧರಿಸಬೇಕು. ಈ ಫಾರ್ಮನ್ನು ಸಭಾ ಕಾರ್ಯದರ್ಶಿ ಅಧಿವೇಶನದ ರೂಮಿಂಗ್ ಇಲಾಖೆಗೆ ಕಳುಹಿಸುವ ಮುಂಚಿತವಾಗಿಯೇ, ಸಭಾ ಸೇವಾ ಕಮಿಟಿಯು ಅದರಲ್ಲಿರುವ ನಿರ್ದೇಶನಗಳು ಮತ್ತು ಎಲ್ಲ ಹಿರಿಯರ ಮಂಡಲಿಗಳಿಗೆ ಕಳುಹಿಸಲಾದ 2009 ಫೆಬ್ರವರಿ 14ರ ಪತ್ರದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಪರಿಶೀಲಿಸಬೇಕು.
7. (ಎ) ನಾವು ಹೋಟೆಲ್ ರಿಸರ್ವೇಷನ್ ಅನ್ನು ಹೇಗೆ ಮಾಡಬಹುದು? (ಬಿ) ಹೋಟೆಲಿನ ಆಡಳಿತ ವರ್ಗದವರೊಂದಿಗೆ ಒಳ್ಳೆಯ ಹೆಸರು ಗಳಿಸಲು ಯಾವ ಮರುಜ್ಞಾಪನಗಳು ನಮಗೆ ಸಹಾಯಮಾಡುತ್ತವೆ? (“ರೂಮಿಂಗ್ ನಿರ್ದೇಶನಗಳು” ಎಂಬ ಚೌಕವನ್ನು ನೋಡಿ.)
7 ಹೋಟೆಲ್ ರಿಸರ್ವೇಷನ್: ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ ಸಭೆಗೆ ತಲುಪಿದ ಕೂಡಲೆ ಅದನ್ನು ಮಾಹಿತಿ ಫಲಕದ ಮೇಲೆ ಹಾಕಲಾಗುವುದು. ಹೋಟೆಲ್ ರಿಸರ್ವೇಷನ್ ಮಾಡುವ ಮೊದಲು “ರೂಮಿಂಗ್ ನಿರ್ದೇಶನಗಳು” ಎಂಬ ಚೌಕವನ್ನು ಜಾಗರೂಕತೆಯಿಂದ ಓದಿರಿ. ಹೋಟೆಲ್ ರಿಸರ್ವೇಷನ್ ಮಾಡುವಾಗ:
◼ ಲಾಜಿಂಗ್ ಲಿಸ್ಟ್ನಲ್ಲಿ ಕೊಡಲಾಗಿರುವ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುತ್ತಾ ಸಾಮಾನ್ಯ ಕೆಲಸದ ವೇಳೆಯಲ್ಲಿ ಹೋಟೆಲುಗಳನ್ನು ಸಂಪರ್ಕಿಸಿ.
◼ ನೀವು ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುತ್ತಿದ್ದೀರಿ ಎಂದು ಹೋಟೆಲಿನವರಿಗೆ ತಿಳಿಸಿರಿ.
◼ ನೀವು ಯಾವ ತಾರೀಕಿನಂದು ರೂಮನ್ನು ಬಾಡಿಗೆಗೆ ತೆಗೆದುಕೊಳ್ಳುವಿರಿ ಮತ್ತು ಯಾವಾಗ ಖಾಲಿಮಾಡುವಿರಿ ಎಂಬುದನ್ನು ತಿಳಿಸಿ.
◼ ಯಾವುದೇ ರೂಮ್ಗಳು ಲಭ್ಯವಿಲ್ಲದಿರುವಲ್ಲಿ, ಲಿಸ್ಟ್ನಲ್ಲಿರುವ ಮತ್ತೊಂದು ಹೋಟೆಲಿಗೆ ಕರೆಮಾಡಿ.
◼ ನಿಮ್ಮ ರಿಸರ್ವೇಷನನ್ನು ಮಾಡಿ ಮಂಜೂರಾತಿಯ ವಿವರವನ್ನು ಕೇಳಿಕೊಳ್ಳಿ.
◼ ಕ್ರೆಡಿಟ್ ಕಾರ್ಡ್, ಚೆಕ್ ಅಥವಾ ಮನಿ ಆರ್ಡರ್ ಮೂಲಕ ಹತ್ತು ದಿನಗಳೊಳಗಾಗಿ ಮುಂಗಡ ಹಣವನ್ನು ಪಾವತಿಸಿ. ಚೆಕ್ ಅಥವಾ ಮನಿ ಆರ್ಡರ್ ಮೂಲಕ ಮುಂಗಡ ಹಣವನ್ನು ಪಾವತಿಸುವಲ್ಲಿ, ರೂಮ್ ಮಂಜೂರಾತಿಯ ವಿವರಗಳನ್ನು ಚೆಕ್ನ ಹಿಂಭಾಗದಲ್ಲಿ ಅಥವಾ ಮನಿ ಆರ್ಡರ್ ಫಾರ್ಮ್ನ ಕೆಳಭಾಗದಲ್ಲಿ ಬರೆಯಿರಿ. ಎಂದಿಗೂ ನಗದು ಹಣ ಕಳುಹಿಸಬೇಡಿ.
8. ಪ್ರತಿಯೊಬ್ಬರು ನ್ಯಾಯವಾದ ಬೆಲೆಯಲ್ಲಿ ಹೋಟೆಲ್ ರೂಮುಗಳನ್ನು ಪಡೆಯುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು?
8 ಕೆಲವರು ತಮಗಿಷ್ಟವಾದ ಹೋಟೆಲ್ಗಳಲ್ಲಿ ತಂಗಲು ಬಯಸಬಹುದು. ಆದರೆ ಒಂದು ವೇಳೆ, ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ನಲ್ಲಿರದ ಹೋಟೆಲನ್ನು ನಾವು ಉಪಯೋಗಿಸುವುದಾದರೆ ಅಥವಾ ಲಿಸ್ಟ್ನಲ್ಲಿ ಕೊಟ್ಟಿರುವ ಹಣಕ್ಕಿಂತ ಹೆಚ್ಚು ಹಣವನ್ನು ಕೊಡುವುದಾದರೆ ನಾವು ರೂಮಿಂಗ್ ಇಲಾಖೆಯ ಏರ್ಪಾಡನ್ನು ಕಡೆಗಣಿಸಿದಂತಾಗುತ್ತದೆ. ನೀವು ಉಪಯೋಗಿಸುವುದಿಲ್ಲ ಎಂದಾದರೆ ಸುಮ್ಮಸುಮ್ಮನೆ ರೂಮ್ಗಳನ್ನು ಕಾದಿರಿಸಬೇಡಿ. ಅಥವಾ ಇನ್ನೊಂದು ಹೋಟೆಲನ್ನು ಉಪಯೋಗಿಸಲು ಬಯಸಿ ಕೊನೇ ಗಳಿಗೆಯಲ್ಲಿ ಮುಂಚೆ ಕಾದಿರಿಸಿದ ರಿಸರ್ವೇಷನ್ ಅನ್ನು ರದ್ದುಗೊಳಿಸಬೇಡಿ. ಈ ಏರ್ಪಾಡಿನೊಂದಿಗೆ ಸಹಕರಿಸುವ ಮೂಲಕ ಪ್ರತಿಯೊಬ್ಬರು ನ್ಯಾಯವಾದ ಬೆಲೆಯಲ್ಲಿ ಹೋಟೆಲ್ ರೂಮ್ಗಳನ್ನು ಪಡೆಯುವಂತೆ ನೀವು ಸಹಾಯಮಾಡುವಿರಿ.—1 ಕೊರಿಂ. 10:24.
9. ಇಸವಿ 2009ರ ಜಿಲ್ಲಾ ಅಧಿವೇಶನಕ್ಕಾಗಿ ತಯಾರಿಸುವಾಗ ಹಾಗೂ ಅದಕ್ಕೆ ಹಾಜರಾಗುವಾಗ ನಮ್ಮ ಮುಖ್ಯ ಚಿಂತೆ ಏನಾಗಿರಬೇಕು?
9 ದೇವರನ್ನು ಘನಪಡಿಸುವ ಕ್ರಿಯೆಗಳು: ನಾವು ಎಲ್ಲಾ ವಿಷಯಗಳಲ್ಲಿ ಆತ್ಮದ ಫಲವನ್ನು ತೋರಿಸುವಾಗ, ವಿಶೇಷವಾಗಿ ಅಧಿವೇಶನದ ಸ್ಥಳದಲ್ಲಿ ಹೋಟೆಲ್ ಸಿಬ್ಬಂದಿ ಮುಂತಾದವರೊಂದಿಗೆ ವ್ಯವಹರಿಸುವಾಗ ನಾವಾಡುವ ಮಾತು ಮತ್ತು ನಮ್ಮ ವರ್ತನೆಯೆಡೆಗೆ ಗಮನ ಕೊಡುವುದಾದರೆ ಯೆಹೋವನ ಜನರಿಗಿರುವ ಒಳ್ಳೆಯ ಹೆಸರಿಗೆ ನಾವು ಇನ್ನೂ ಹೆಚ್ಚಿನ ಮೆರುಗನ್ನು ಕೂಡಿಸುತ್ತೇವೆ. ಮಾತ್ರವಲ್ಲ ಇತರರನ್ನೂ ಎಡವಿ ಬೀಳಿಸುವುದಿಲ್ಲ. (1 ಕೊರಿಂ. 10:31; 2 ಕೊರಿಂ. 6:3, 4) ಹೀಗೆ, ಮೇಲೆ ತಿಳಿಸಿದಂತೆ 2009ರ ಜಿಲ್ಲಾ ಅಧಿವೇಶನದಲ್ಲಿ ನಿಮ್ಮ ಉಪಸ್ಥಿತಿ ಮತ್ತು ನಡವಳಿಕೆಯು ಯೆಹೋವ ದೇವರನ್ನು ಕೊಂಡಾಡಲಿ.—1 ಪೇತ್ರ 2:12.
[ಪುಟ 3ರಲ್ಲಿರುವಚೌಕ]
ಕಾರ್ಯಕ್ರಮದ ಸಮಯ:
ಶುಕ್ರವಾರ ಮತ್ತು ಶನಿವಾರ
ಬೆಳಗ್ಗೆ 9:20 – ಸಂಜೆ 4:55
ಭಾನುವಾರ
ಬೆಳಗ್ಗೆ 9:20 – ಸಂಜೆ 4:00
[ಪುಟ 4ರಲ್ಲಿರುವಚೌಕ]
ರೂಮಿಂಗ್ ನಿರ್ದೇಶನಗಳು:
◼ ಮಾರ್ಚ್ 2, 2009ರ ವಾರದ ಸೇವಾ ಕೂಟಕ್ಕೆ ಮುಂಚಿತವಾಗಿ ಹೋಟೆಲ್ ರಿಸರ್ವೇಷನ್ಗಳನ್ನು ಮಾಡಬೇಡಿ.
◼ ಆ ತಾರೀಕಿನ ನಂತರ ರಿಸರ್ವೇಷನ್ಗಳನ್ನು ಸಾಧ್ಯವಾದಷ್ಟು ಬೇಗನೆ ಮಾಡಲು ಪ್ರಯತ್ನಿಸಿ.
◼ ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ನಲ್ಲಿರುವ ಹೋಟೆಲ್ಗಳಲ್ಲಿ ಮಾತ್ರ ಉಳಿದುಕೊಳ್ಳಿರಿ.
◼ ಲಿಸ್ಟ್ನಲ್ಲಿ ಕೊಡಲಾಗಿರುವ ದರಕ್ಕಿಂತ ಹೆಚ್ಚಿನ ದರ ಕೇಳುವುದಾದರೆ ಒಪ್ಪಿಕೊಳ್ಳಬೇಡಿ.
◼ ರೂಮ್ನಲ್ಲಿ ತಂಗುವವರ ಹೆಸರಿನಲ್ಲೇ ರೂಮನ್ನು ಕಾದಿರಿಸಿ.
◼ ಲಿಸ್ಟ್ನಲ್ಲಿ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಯಸ್ಕರು ರೂಮ್ನಲ್ಲಿ ಉಳಿದುಕೊಳ್ಳದೇ ಇರುವ ಮೂಲಕ ನಿಯಮವನ್ನು ಪಾಲಿಸಿರಿ.
◼ ಒಮ್ಮೆ ರೂಮನ್ನು ಕಾದಿರಿಸಿದ ನಂತರ ಅವುಗಳನ್ನು ರದ್ದುಪಡಿಸದಿರಿ.—ಮತ್ತಾ. 5:37.
◼ ಲಿಸ್ಟ್ನಲ್ಲಿರದ ಹೋಟೆಲ್ಗಳಿಗೆ ಕರೆಮಾಡಿ ನಮ್ಮ ಅಧಿವೇಶನಕ್ಕಾಗಿ ವಿಶೇಷ ದರದಲ್ಲಿ ರೂಮ್ಗಳಿವೆಯೋ ಎಂದು ಕೇಳಬೇಡಿ.
◼ ಲಿಸ್ಟ್ನಲ್ಲಿ ಸೂಚಿಸಲಾಗಿರುವ ಎಲ್ಲಾ ಹೋಟೆಲ್ಗಳಿಗೆ ಕರೆಮಾಡಿಯೂ ರೂಮ್ ಸಿಗದಿರುವಲ್ಲಿ ಅಥವಾ ಯಾವುದಾದರೊಂದು ಹೋಟೆಲ್ನವರೊಂದಿಗೆ ಏನಾದರೂ ಸಮಸ್ಯೆಯೇಳುವಲ್ಲಿ ನಿಮ್ಮ ಸಭೆಯ ಸೆಕ್ರಿಟರಿಗೆ ಅದನ್ನು ತಿಳಿಸಿರಿ. ಅವನು ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ನಲ್ಲಿರುವ ಮಾಹಿತಿಯನ್ನು ಉಪಯೋಗಿಸಿ ರೂಮಿಂಗ್ ಇಲಾಖೆಯನ್ನು ಸಂಪರ್ಕಿಸಬೇಕು.
◼ ರೂಮ್ಗಳನ್ನು ರದ್ದುಪಡಿಸಲೇಬೇಕಾದರೆ ಸಾಧ್ಯವಾದಷ್ಟು ಬೇಗನೆ ಮಾಡಿರಿ. ಮತ್ತು ರದ್ದುಪಡಿಸಿದ ಮಾಹಿತಿಯನ್ನು ಪಡೆದುಕೊಳ್ಳಲು ಮರೆಯದಿರಿ.