ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
ನೀವು ಒಬ್ಬ ಯುವ ವ್ಯಕ್ತಿಯನ್ನು ಭೇಟಿಯಾಗುವಲ್ಲಿ ಹೀಗೆ ಹೇಳಬಹುದು: “ಅನೇಕ ಯುವ ಜನರು ಕೆಲವೊಮ್ಮೆ, ತಾವು ಯಾರಿಗೂ ಬೇಡವಾಗಿದ್ದೇವೆ ಅಥವಾ ತಾವು ಒಬ್ಬಂಟಿಗರು ಎಂದು ಭಾವಿಸುತ್ತಾರೆ. ನಿಮಗೆ ಎಂದಾದರೂ ಹಾಗೆ ಅನಿಸಿದೆಯಾ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಜ್ಞಾನೋಕ್ತಿ 15:13ನ್ನು ಓದಿ.] ಒಂಟಿಗ ಭಾವನೆ ನಿಜವಾಗಿಯೂ ತುಂಬ ಮನನೋಯಿಸುತ್ತದೆ. ಈ ಲೇಖನವು, ನಾವು ಒಂಟಿಗ ಭಾವನೆಗಳನ್ನು ಹೇಗೆ ತೊರೆಯಸಾಧ್ಯವಿದೆ ಎಂಬುದರ ಕುರಿತು ಉತ್ತಮ ಸಲಹೆಗಳನ್ನು ಕೊಡುತ್ತದೆ.” ಪುಟ 12ರಲ್ಲಿರುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಡಿಸೆಂ. 1
ನಾವೆಲ್ಲರೂ ಸಂತೋಷಕರವಾದ ಅರ್ಥಭರಿತ ಜೀವನವನ್ನು ನಡೆಸಲು ಇಷ್ಟಪಡುತ್ತೇವೆ. ಸಂತೋಷಕ್ಕಿರುವ ಕೀಲಿಕೈಯ ಕುರಿತು ಯೇಸು ಇಲ್ಲಿ ಏನು ಹೇಳಿದ್ದಾನೋ ಅದನ್ನು ನೀವು ಒಪ್ಪುತ್ತೀರೋ? [ಮತ್ತಾಯ 5:3ನ್ನು ಓದಿರಿ. ಬಳಿಕ ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಪತ್ರಿಕೆಯು, ದೇವರನ್ನು ಆರಾಧಿಸುವ ನಮ್ಮ ಸಹಜವಾದ ಮತ್ತು ಮೂಲಭೂತ ಆವಶ್ಯಕತೆಯನ್ನು ತಣಿಸುವುದು ನಮ್ಮ ಬದುಕಿಗೆ ಹೇಗೆ ಅರ್ಥವನ್ನು ಕೊಡುತ್ತದೆಂದು ವಿವರಿಸುತ್ತದೆ.”
ಎಚ್ಚರ! ಜನ.-ಮಾರ್ಚ್
“ಇತಿಹಾಸದಾದ್ಯಂತ ಸ್ತ್ರೀ, ಹಿಂಸೆ ಹಾಗೂ ದೌರ್ಜನ್ಯಕ್ಕೆ ಗುರಿಯಾಗಿದ್ದಾಳೆ. ಏಕೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ನೋಡಿಕೊಳ್ಳಬೇಕೆಂಬುದರ ಕುರಿತು ಬೈಬಲ್ ತಿಳಿಸುವ ವಿಷಯವನ್ನು ಗಮನಿಸಿ. [1 ಪೇತ್ರ 3:7ನ್ನು ಓದಿ.] ಈ ಪತ್ರಿಕೆಯು, ಸ್ತ್ರೀಯರ ಕುರಿತು ದೇವರ ಹಾಗೂ ಕ್ರಿಸ್ತನ ನೋಟವೇನು ಎಂಬುದನ್ನು ಬೈಬಲಿನಿಂದ ತೋರಿಸಿಕೊಡುತ್ತದೆ.”
ಕಾವಲಿನಬುರುಜು ಜನ.-ಮಾರ್ಚ್
“ಅನೇಕ ಜನರು ದೇವರ ರಾಜ್ಯವು ಬರಲಿ ಎಂದು ಪ್ರಾರ್ಥಿಸುತ್ತಾರೆ. ಉದಾಹರಣೆಗೆ, ಯೇಸು ತನ್ನ ಹಿಂಬಾಲಕರಿಗೆ ಕಲಿಸಿದ ಈ ಪ್ರಸಿದ್ಧ ಪ್ರಾರ್ಥನೆಯನ್ನು ಗಮನಿಸಿ. [ಮತ್ತಾಯ 6:9, 10ನ್ನು ಓದಿ.] ಈ ರಾಜ್ಯವು ಏನಾಗಿದೆ ಮತ್ತು ಯಾವಾಗ ಬರುತ್ತದೆ ಎಂದು ನೀವೆಂದಾದರೂ ಯೋಚಿಸಿದ್ದೀರಾ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಇದರ ಕುರಿತು ಬೈಬಲ್ ಏನನ್ನುತ್ತದೆ ಎಂದು ಈ ಪತ್ರಿಕೆ ತೋರಿಸುತ್ತದೆ.”