ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಡಿಸೆಂ. 1
“ದ್ವೇಷ, ಜಗಳ ತುಂಬಿರುವ ಈ ಜಗತ್ತಿನಲ್ಲಿ ಸಮಾಧಾನದಿಂದಿರಲು ನಮಗೆ ಯಾವುದು ಸಹಾಯಮಾಡುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಮತ್ತಾಯ 22:39ನ್ನು ಓದಿ. ಪುಟ 26ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು ನಮ್ಮ ನೆರೆಯವರು ಯಾರು ಮತ್ತು ನಮ್ಮ ನೆರೆಯವರಿಗೆ ಪ್ರೀತಿ ತೋರಿಸುವುದರ ಅರ್ಥವೇನು ಎಂಬುದನ್ನು ವಿವರಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ನಾವು ಸೃಷ್ಟಿಸಲ್ಪಟ್ಟಿದ್ದೇವೆ ಎಂದು ಅನೇಕರು ಭಾವಿಸುತ್ತಾರೆ. ಇನ್ನೂ ಕೆಲವರು ನಾವು ವಿಕಾಸದಿಂದ ಬಂದಿದ್ದೇವೆಂದು ನೆನಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನೋಡಿ, ಇಲ್ಲಿರುವ ಸಲಹೆಯು ನಾವು ಸರಿಯಾದ ತೀರ್ಮಾನಕ್ಕೆ ಬರಲು ಸಹಾಯಮಾಡುತ್ತದೆ. [ಯೋಬ 12:7, 8ನ್ನು ಓದಿ.] ಪ್ರಕೃತಿಯಲ್ಲಿ ತೋರಿಬರುವ ವಿವೇಕ ಹಾಗೂ ವಿನ್ಯಾಸದಿಂದ ನಾವೇನನ್ನು ಕಲಿಯಸಾಧ್ಯವಿದೆ ಎಂಬುದನ್ನು ಎಚ್ಚರ! ಪತ್ರಿಕೆಯ ಈ ವಿಶೇಷ ಸಂಚಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಜನ. 1
“ಒಬ್ಬ ವ್ಯಕ್ತಿಗಿರುವ ಧನಸಂಪತ್ತಿನಿಂದ ಅವನ ಯಶಸ್ಸನ್ನು ಅಳೆಯಸಾಧ್ಯವೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ 1 ತಿಮೊಥೆಯ 6:9, 10ನ್ನು ಓದಿ.] ಹಣವಿರುವುದು ತಪ್ಪೆಂದು ಬೈಬಲ್ ತಿಳಿಸುವುದಿಲ್ಲವಾದರೂ, ನಿಜ ಯಶಸ್ಸು ಧನಸಂಪತ್ತಿನ ಮೇಲೆ ಹೊಂದಿಕೊಂಡಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. ಈ ಪತ್ರಿಕೆಯು ಅದನ್ನು ವಿವರಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ದೇವರು ಪ್ರೀತಿ, ನ್ಯಾಯ, ಶಕ್ತಿಯುಳ್ಳವನಾಗಿರುವಲ್ಲಿ ಇಷ್ಟೊಂದು ಕಷ್ಟಸಂಕಟಗಳು ಏಕಿವೆ ಎಂದು ನೀವು ಯೋಚಿಸಿದ್ದುಂಟೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಷ್ಟಸಂಕಟಗಳಿಗಿರುವ ಕಾರಣದ ಬಗ್ಗೆ ಈ ಶಾಸ್ತ್ರವಚನ ಏನು ಹೇಳುತ್ತದೆಂಬುದನ್ನು ಗಮನಿಸಿ. [1 ಯೋಹಾನ 5:19ನ್ನು ಓದಿ.] ಈ ಪತ್ರಿಕೆಯು ಇಂದಿರುವ ಕಷ್ಟಸಂಕಟಗಳನ್ನು ನಿರ್ಮೂಲಮಾಡಲು ದೇವರು ಏನು ಮಾಡಲಿದ್ದಾನೆ ಎಂಬುದನ್ನು ಬೈಬಲಿನಿಂದ ವಿವರಿಸುತ್ತದೆ.”