ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
“ದುಷ್ಕೃತ್ಯವು ನಮ್ಮ ಸುತ್ತಲೂ ಅಧಿಕಗೊಳ್ಳುತ್ತಿರುವಂತೆ ತೋರುತ್ತಿದೆ, ಮತ್ತು ಇದು ನಮ್ಮ ಜೀವಿತಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತಿದೆ. ಏಕೆ ಎಂಬುದು ನಿಮಗೆ ಗೊತ್ತಿದೆಯೋ? [2 ತಿಮೊಥೆಯ 3:1, 3ನ್ನು ಓದಿ.] ಲೋಕದಾದ್ಯಂತ ನಡೆಯುತ್ತಿರುವ ದುಷ್ಕೃತ್ಯದ ಪ್ರಮಾಣಗಳು, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದಕ್ಕೆ ಪುರಾವೆಯನ್ನು ನೀಡುತ್ತವೆ. ಒಂದುವೇಳೆ ಪೊಲೀಸರು ಇರದಿದ್ದಲ್ಲಿ ಪರಿಸ್ಥಿತಿಗಳು ಇನ್ನೂ ಎಷ್ಟು ಹದಗೆಟ್ಟಿರುತ್ತಿದ್ದವು! ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಲೋಕದಾದ್ಯಂತ ಪೊಲೀಸರು ಎದುರಿಸುವಂಥ ಪಂಥಾಹ್ವಾನಗಳ ಕುರಿತು ಚರ್ಚಿಸುತ್ತದೆ.”
ಕಾವಲಿನಬುರುಜು ಡಿಸೆಂ.15
“ವರ್ಷದ ಈ ಸಮಯದಲ್ಲಿ ಅನೇಕರು ಯೇಸುವಿನ ಜನನದ ಕುರಿತು ಆಲೋಚಿಸುತ್ತಾರೆ. ಅವನ ಜನನದ ಕುರಿತಾದ ಬೈಬಲ್ ವೃತ್ತಾಂತದಿಂದ ನಾವು ಕಲಿಯಸಾಧ್ಯವಿರುವ ಅಮೂಲ್ಯ ಪಾಠಗಳಿವೆ ಎಂಬುದು ನಿಮಗೆ ಗೊತ್ತಿತ್ತೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ 5ನೆಯ ಪುಟವನ್ನು ತೋರಿಸಿರಿ ಮತ್ತು 2 ತಿಮೊಥೆಯ 3:16ನ್ನು ಓದಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ಈ ಪಾಠಗಳಲ್ಲಿ ಕೆಲವನ್ನು ಪರಿಗಣಿಸುತ್ತದೆ.”
ಎಚ್ಚರ! ಅಕ್ಟೋ.-ಡಿಸೆಂ.
“ಅನೇಕರು ಅಶ್ಲೀಲ ಸಾಹಿತ್ಯವನ್ನು ಹಾನಿರಹಿತವಾದ ಕಾಲಕ್ಷೇಪವಾಗಿ ಅಥವಾ ವಿನೋದವಾಗಿ ಪರಿಗಣಿಸುತ್ತಾರೆ. ಇದು ವ್ಯಕ್ತಿಗಳನ್ನು, ಕುಟುಂಬಗಳನ್ನು ಮತ್ತು ಒಟ್ಟಿನಲ್ಲಿ ಸಮಾಜವನ್ನೇ ಹಾಳುಮಾಡುತ್ತದೆ ಎಂದು ಇತರರು ನೆನಸುತ್ತಾರೆ. ಎಚ್ಚರ! ಪತ್ರಿಕೆಯ ಈ ಸಂಚಿಕೆಯು [19ನೆಯ ಪುಟವನ್ನು ತೋರಿಸಿರಿ] ಅಶ್ಲೀಲ ಸಾಹಿತ್ಯವನ್ನು, ಆ ವಿಷಯಕ್ಕೆ ಸಂಬಂಧಿಸಿದ ಬೈಬಲ್ ಮೂಲತತ್ತ್ವಗಳ ಬೆಳಕಿನಲ್ಲಿ ಪರೀಕ್ಷಿಸುತ್ತದೆ.” ಒಂದು ಉದಾಹರಣೆಯೋಪಾದಿ, ಎಫೆಸ 4:17-19ನ್ನು ಓದಿರಿ.
ಕಾವಲಿನಬುರುಜು ಜನ.1
“ಜನರು ಒಬ್ಬ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಳ್ಳುವಾಗ ಅಥವಾ ಅಸ್ವಸ್ಥತೆಯಿಂದ ನರಳುತ್ತಿರುವಾಗ, ‘ದೇವರು ಹೀಗಾಗುವಂತೆ ಏಕೆ ಅನುಮತಿಸುತ್ತಾನೆ?’ ಎಂದು ಅವರು ಅನೇಕವೇಳೆ ಯೋಚನೆಗೀಡಾಗುತ್ತಾರೆ. ನೀವು ಸಹ ಇದೇ ಪ್ರಶ್ನೆಯನ್ನು ಕೇಳಿದ್ದಿರಬಹುದು. ಯಾರು ಕಷ್ಟಾನುಭವಿಸುತ್ತಾರೋ ಅವರಿಗೆ ದೇವರು ಸಹಾನುಭೂತಿಯನ್ನು ತೋರಿಸುತ್ತಾನೆ ಎಂದು ಬೈಬಲು ತೋರಿಸುತ್ತದೆ. [ಯೆಶಾಯ 63:9ನ್ನು ಓದಿ.] ದೇವರು ಕಷ್ಟಸಂಕಟವನ್ನು ಕೊನೆಗೊಳಿಸುವನು ಎಂಬ ವಿಷಯದಲ್ಲಿ ನಾವೇಕೆ ಖಾತ್ರಿಯಿಂದಿರಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”