ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಡಿಸೆಂ.15
“ವರ್ಷದ ಈ ಸಮಯದಲ್ಲಿ, ಲೋಕದ ಸುತ್ತಲೂ ಇರುವ ಜನರು ಯೇಸುವಿನ ಜನನವನ್ನು ವಿವಿಧ ರೀತಿಗಳಲ್ಲಿ ಸ್ಮರಿಸುತ್ತಾರೆ. ಬೈಬಲ್ ಪ್ರವಾದನೆಯು ಯೇಸುವಿನ ಜನನವನ್ನು ಶಾಶ್ವತ ಸಮಾಧಾನದೊಂದಿಗೆ ಸಂಬಂಧಿಸಿ ಮಾತಾಡುತ್ತದೆ ಎಂಬುದು ನಿಮಗೆ ತಿಳಿದಿತ್ತೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯೆಶಾಯ 9:6, 7ನ್ನು ಓದಿ.] ಆ ಸಮಾಧಾನವು ಹೇಗೆ ಸಾಧಿಸಲ್ಪಡುವುದು ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ನಾವು ಪೂರ್ವಗ್ರಹದಿಂದ ವಿಮುಕ್ತರಾಗಿದ್ದೇವೆ ಎಂದು ನಮ್ಮಲ್ಲಿ ಅನೇಕರಿಗೆ ಅನಿಸುತ್ತದೆ, ಆದರೆ ಯಾರಾದರೂ ನಿಜವಾಗಿಯೂ ನಿಷ್ಪಕ್ಷಪಾತಿಗಳಾಗಿದ್ದಾರೆ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪುಟ 11ರಲ್ಲಿರುವ ಚೌಕಕ್ಕೆ ತಿರುಗಿಸಿರಿ. ಚೌಕದಿಂದ ಕೆಲವು ಅಂಶಗಳನ್ನು ಎತ್ತಿತೋರಿಸಿದ ಬಳಿಕ, ಅದೇ ಪುಟದಲ್ಲಿರುವ ಎರಡನೇ ಪ್ಯಾರಗ್ರಾಫ್ಗೆ ಗಮನವನ್ನು ಸೆಳೆಯಿರಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಪೂರ್ವಗ್ರಹದ ಕಾರಣಗಳನ್ನು ಮತ್ತು ಅವನ್ನು ನಾವು ಹೇಗೆ ಜಯಿಸಬಹುದು ಎಂಬುದನ್ನು ಚರ್ಚಿಸುತ್ತದೆ.”
ಕಾವಲಿನಬುರುಜು ಜನ.1
“ಜನರು ತಮ್ಮ ನೆರೆಯವರನ್ನು ಪ್ರೀತಿಸಬೇಕೆಂದು ಅನೇಕ ಧರ್ಮಗಳು ಬೋಧಿಸುತ್ತವೆ. [ಮತ್ತಾಯ 22:39ನ್ನು ಓದಿ.] ಹಾಗಾದರೆ, ಇಂದು ಲೋಕದಲ್ಲಿ ನಡೆಯುತ್ತಿರುವ ಅನೇಕ ಯುದ್ಧಗಳು ಮತ್ತು ಘರ್ಷಣಗಳಲ್ಲಿ ಧರ್ಮವು ಒಳಗೂಡಿರುವುದು ಏಕೆ ಎಂದು ನಿಮಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಧರ್ಮವು ಮಾನವಕುಲವನ್ನು ಐಕ್ಯಗೊಳಿಸಸಾಧ್ಯವೋ? ಎಂಬ ಪ್ರಶ್ನೆಯನ್ನು ನಿಕಟವಾಗಿ ಪರಿಗಣಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಚಿಕ್ಕ ಪ್ರಾಯದಿಂದಲೇ ಮಕ್ಕಳಿಗೆ ತರಬೇತಿಯನ್ನು ನೀಡುವುದರ ಪ್ರಮುಖತೆಯನ್ನು ಅನೇಕರು ಮನಗಾಣುತ್ತಾರೆ. ಇಂದು ಸಹ ಇದು ಅಗತ್ಯವಾಗಿದೆ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ ಜ್ಞಾನೋಕ್ತಿ 22:6ನ್ನು ಓದಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ತಮ್ಮ ಮಕ್ಕಳು ಪ್ರಾಮಾಣಿಕ ಮತ್ತು ಯಶಸ್ವಿದಾಯಕ ವಯಸ್ಕರಾಗಿ ಬೆಳೆಯುವಂತೆ ಅವರಿಗೆ ಸಹಾಯಮಾಡುವುದರಲ್ಲಿ ಹೆತ್ತವರು ಮಾಡಸಾಧ್ಯವಿರುವ ನಿರ್ದಿಷ್ಟ ವಿಷಯಗಳನ್ನು ಚರ್ಚಿಸುತ್ತದೆ.”