ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
“ಒತ್ತಡವು ಹೆಚ್ಚಾಗುತ್ತಿರುವುದರಿಂದ ವೈವಾಹಿಕ ಸಂಬಂಧಗಳು ಬಿಗಡಾಯಿಸುತ್ತಿವೆ. ತಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಪತಿಪತ್ನಿಗೆ ಯಾವುದು ಸಹಾಯಮಾಡುವುದು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ದಾಂಪತ್ಯದಲ್ಲಿ ಸಂತೋಷಕ್ಕೆ ನೆರವು ನೀಡಬಲ್ಲ ಒಂದು ಮೂಲಸೂತ್ರವನ್ನು ಪ್ರಾಚೀನ ಗ್ರಂಥದಿಂದ ನಿಮಗೆ ಓದಿತೋರಿಸಬಹುದೋ? [ಆಸಕ್ತಿತೋರಿಸಿದರೆ ಎಫೆಸ 5:33 ಓದಿ.] ಈ ಲೇಖನವು ಮದುವೆಯ ಬದ್ಧತೆಗಳನ್ನು ಉಳಿಸಿಕೊಳ್ಳಲು ದಂಪತಿಗಳಿಗೆ ನೆರವಾಗುವ ವಿವಿಧ ಮೂಲಸೂತ್ರಗಳನ್ನು ಚರ್ಚಿಸುತ್ತದೆ.” ಪುಟ 12ರಲ್ಲಿ ಆರಂಭಿಸುವ ಲೇಖನವನ್ನು ಎತ್ತಿಹೇಳಿ.
ಎಚ್ಚರ! ಜನವರಿ-ಮಾರ್ಚ್
“ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸುಗಳಿಸಬೇಕೆಂದು ಇಷ್ಟಪಡುತ್ತಾರೆ, ಆದ್ದರಿಂದ ಅದರ ಕುರಿತು ಎಲ್ಲರೂ ಬಹಳಷ್ಟು ಮಾತಾಡುತ್ತಾರೆ. ಆದರೆ ಯಶಸ್ಸಿನ ಅರ್ಥವೇನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಿಜ ಯಶಸ್ಸಿಗೆ ನಡೆಸುವ ಬೈಬಲ್ ಆಧಾರಿತ ಹೆಜ್ಜೆಗಳನ್ನು ನಾನು ತೋರಿಸಬಹುದೋ? [ಒಪ್ಪುವುದಾದರೆ ಕೀರ್ತನೆ 1:1-3 ಓದಿ.] ಈ ಲೇಖನವು ಯಶಸ್ಸಿಗೆ ಆರು ಕೀಲಿಕೈಗಳನ್ನು ಚರ್ಚಿಸುತ್ತದೆ.” ಪುಟ 6ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.
ಕಾವಲಿನಬುರುಜು ಏಪ್ರಿಲ್-ಜೂನ್
“ಅನೇಕರು ಸತ್ತವರಿಗೆ ಭಯಪಡುತ್ತಾರೆ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಸತ್ತವರ ಸ್ಥಿತಿಯ ಬಗ್ಗೆ ನಮ್ಮ ಜೀವದಾತನು ನಮಗೆ ಏನು ಹೇಳುತ್ತಾನೆಂದು ನಿಮಗೆ ತೋರಿಸಬಹುದೋ? [ಮನೆಯವನು ಒಪ್ಪಿ ಕಿವಿಗೊಡಲು ಮನಸ್ಸುಳ್ಳವನಾದರೆ ಆದಿಕಾಂಡ 3:19 ಓದಿ.] ಈ ಲೇಖನವು ಸತ್ತವರಿಗೆ ನಾವು ಏಕೆ ಭಯಪಡಬೇಕಾಗಿಲ್ಲ ಎಂಬುದಕ್ಕಿರುವ ಇನ್ನಿತರ ಕಾರಣಗಳನ್ನು ಚರ್ಚಿಸುತ್ತದೆ.” ಪುಟ 12ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.
ಎಚ್ಚರ! ಏಪ್ರಿಲ್-ಜೂನ್
“ಸಮಸ್ಯೆಗಳು ಎದುರಾಗುವಾಗ ಇದು ದೇವರ ಶಿಕ್ಷೆ ಎಂದು ಜನರು ನೆನಸುತ್ತಾರೆ. ನಿಮಗೆ ಎಂದಾದರೂ ಹಾಗೆ ಅನಿಸಿದೆಯೋ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವನು ಆಸಕ್ತನಾಗಿರುವಂತೆ ಕಂಡಲ್ಲಿ ಒಂದು ವಚನ ಓದಬಹುದೋ ಎಂದು ಕೇಳಿ. ನಂತರ ಯಾಕೋಬ 1:13 ಓದಿ] ಈ ಲೇಖನವು ನಮ್ಮ ಸಮಸ್ಯೆಗಳಿಗೆ ಮೂಲ ಕಾರಣವೇನು ಮತ್ತು ನಮ್ಮ ಕಷ್ಟತೊಂದರೆಗಳಿಗೆ ಬೇಗನೆ ಕೊನೆಯಿದೆಯೆಂದು ನಾವೇಕೆ ಭರವಸೆಯಿಂದಿರಬಲ್ಲೆವು ಎಂಬುದನ್ನು ವಿವರಿಸುತ್ತದೆ.” ಪುಟ 17ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.