ನೀವು ಶಾಲೆಗೆ ಹೋಗಲು ತಯಾರಾಗಿದ್ದೀರೋ?
1. ಮಕ್ಕಳೇ, ಶಾಲೆ ಆರಂಭವಾಗುವಾಗ ನಿಮಗೆ ಯಾವ ಅವಕಾಶ ಸಿಗುತ್ತದೆ?
1 ಮಕ್ಕಳೇ, ನೀವು ಈ ವರ್ಷ ಹೊಸದಾಗಿ ಶಾಲೆಗೆ ಸೇರಲಿದ್ದೀರೋ? ಅಥವಾ ಈಗಾಗಲೇ ಕೆಲವು ವರ್ಷದಿಂದ ಶಾಲೆಗೆ ಹೋಗುತ್ತಿದ್ದೀರೋ? ಹೇಗಿದ್ದರೂ ಪ್ರತಿ ವರ್ಷ ಶಾಲೆಯಲ್ಲಿ ಹೊಸ ಹೊಸ ಸವಾಲುಗಳೂ ಒತ್ತಡಗಳೂ ಬಂದೇ ಬರುತ್ತವೆ. ಜೊತೆಗೆ “ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿ” ಹೊಸ ಹೊಸ ಅವಕಾಶಗಳು ಕೂಡ ನಿಮಗಿರುತ್ತವೆ. (ಯೋಹಾ. 18:37) ಸಾಕ್ಷಿಕೊಡಲು ನೀವು ಚೆನ್ನಾಗಿ ತಯಾರಿ ಮಾಡಿದ್ದೀರಾ? ಸಿದ್ಧರಾಗಿದ್ದೀರಾ?
2. ಶಾಲೆಗೆ ಹೋಗಲು ನೀವು ಹೇಗೆ ತಯಾರಾಗಿದ್ದೀರಿ?
2 ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಯೆಹೋವನಿಂದ, ಹೆತ್ತವರಿಂದ, ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನಿಂದ ನಿಮಗೆ ಈಗಾಗಲೇ ಸಾಕಷ್ಟು ತರಬೇತಿ ಸಿಕ್ಕಿದೆ. (ಜ್ಞಾನೋ. 1:8; 6:20; 23:23-25; ಎಫೆ. 6:1-4; 2 ತಿಮೊ. 3:16, 17) ಅಲ್ಲದೆ, ನಿಮ್ಮ ಶಾಲೆಯಲ್ಲಿ ಯಾವೆಲ್ಲ ಸವಾಲುಗಳು ಎದುರಾಗಲಿವೆ ಎಂದು ನಿಮಗೆ ಗೊತ್ತಾಗಿದೆ. ಶಾಲಾ ವಾತಾವರಣವನ್ನು ಮನಸ್ಸಿನಲ್ಲಿಟ್ಟು ದೇವರ ನಿಯಮಗಳ ಕುರಿತು ನಿಮಗೆ ಸಿಕ್ಕಿರುವ ತರಬೇತಿಗೆ ಹೊಂದಿಕೆಯಲ್ಲಿ ಸಾಕ್ಷಿಕೊಡಲು ತಯಾರಾಗಿ. (ಜ್ಞಾನೋ. 22:3) ಎಚ್ಚರ! ಪತ್ರಿಕೆಯಲ್ಲಿ ಕ್ರಮವಾಗಿ ಬರುವ ಯುವ ಜನರು ಪ್ರಶ್ನಿಸುವುದು ಲೇಖನಗಳಲ್ಲಿ ಮತ್ತು “ಯುವ ಜನರ ಪ್ರಶ್ನೆಗಳು” ಪುಸ್ತಕದ ಎರಡು ಸಂಪುಟಗಳಲ್ಲಿರುವ ನಿರ್ದೇಶನಗಳನ್ನೂ ಸಹಾಯಕಾರಿ ಬೈಬಲ್ ಸಲಹೆಗಳನ್ನೂ ಜಾಗ್ರತೆಯಿಂದ ಓದಿರಿ.
3. ಸಾಕ್ಷಿನೀಡಲು ನಿಮಗೆ ಯಾವ ಅವಕಾಶಗಳು ಸಿಗುವವು?
3 ನಿಮ್ಮ ಶಾಲೆ ನಿಮಗಿರುವ ವಿಶೇಷ ಟೆರಿಟೊರಿ. ಅಲ್ಲಿ ಅನೇಕ ವಿಧಗಳಲ್ಲಿ ಸಾಕ್ಷಿಕೊಡಲು ಅವಕಾಶ ನಿಮಗಿದೆ. ನಿಮ್ಮ ಸಭ್ಯ ಉಡುಪು, ತೋರಿಕೆ, ನಡೆನುಡಿ, ಸಹಪಾಠಿಗಳಿಗೂ ಶಿಕ್ಷಕರಿಗೂ ನೀವು ತೋರಿಸುವ ಗೌರವ, ನಿಮ್ಮ ಒಳ್ಳೇ ಅಂಕಗಳನ್ನು ನೋಡಿ ಹಾಗೂ ನಿಮ್ಮ ಬದುಕಿಗೆ ಭದ್ರ ಬುನಾದಿಯಿರುವುದನ್ನು ಗ್ರಹಿಸಿ ಕೆಲವರು ಆಶ್ಚರ್ಯದಿಂದ ಕಾರಣವೇನೆಂದು ಕೇಳಬಹುದು. (ಮಲಾ. 3:18; ಯೋಹಾ. 15:19) ಆಗ ನಿಮ್ಮ ನಂಬಿಕೆಗಳ ಕುರಿತು ವಿವರಿಸುತ್ತಾ ಸಾಕ್ಷಿಕೊಡಲು ಅವಕಾಶ ಸಿಗುತ್ತದೆ. (1 ತಿಮೊ. 2:9, 10) ರಾಷ್ಟ್ರೀಯತೆಗೆ ಸಂಬಂಧಿಸಿದ ಚಟುವಟಿಕೆ ಮತ್ತು ಹಬ್ಬಗಳ ವಿಷಯದಲ್ಲಿ ಇಡೀ ವರ್ಷ ಸವಾಲುಗಳು ಎದುರಾಗಬಹುದು. ಯಾರಾದರೂ ಈ ಬಗ್ಗೆ ನಿಮ್ಮನ್ನು ಪ್ರಶ್ನಿಸುವಲ್ಲಿ “ನಾನು ಯೆಹೋವನ ಸಾಕ್ಷಿ, ನಮ್ಮ ಧರ್ಮದಲ್ಲಿ ಅದೆಲ್ಲ ಮಾಡುವುದಿಲ್ಲ” ಎಂದಷ್ಟೇ ಹೇಳಿ ಸುಮ್ಮನಾಗುತ್ತೀರೋ? ಅಥವಾ ಆ ಅವಕಾಶವನ್ನು ನಿಮ್ಮ ಪ್ರೀತಿಯ ತಂದೆಯಾದ ಯೆಹೋವನ ಕುರಿತು ಸಾಕ್ಷಿಕೊಡಲು ಬಳಸುತ್ತೀರೋ? ಯೆಹೋವನ ನಿರ್ದೇಶನಕ್ಕೆ ತಕ್ಕಂತೆ ನೀವು ಒಳ್ಳೇ ತಯಾರಿ ಮಾಡುವಲ್ಲಿ ಶಿಕ್ಷಕರಿಗೆ, ಸಹಪಾಠಿಗಳಿಗೆ ಹಾಗೂ ಇತರರಿಗೆ ಉತ್ತಮ ಸಾಕ್ಷಿಕೊಡಲು ಸಿದ್ಧರಿರುವಿರಿ.—1 ಪೇತ್ರ 3:15.
4. ನಿಮ್ಮ ಶಾಲಾ ವರ್ಷ ಯಶಸ್ವಿಯಾಗುವುದೆಂಬ ಭರವಸೆ ನಿಮಗೇಕೆ ಇದೆ?
4 ಶಾಲೆಗೆ ಹೋಗಲು ನಿಮಗೆ ಸ್ವಲ್ಪ ಭಯ ಇರಬಹುದಾದರೂ ನಿಮ್ಮ ಬೆಂಬಲಕ್ಕೆ ಅನೇಕರಿದ್ದಾರೆಂದು ಮರೆಯಬೇಡಿ. ನಿಮ್ಮ ಶಾಲಾ ವರ್ಷ ಯಶಸ್ವಿಯಾಗಬೇಕೆಂಬುದು ಅವರೆಲ್ಲರ ಹಾರೈಕೆ. ಅಲ್ಲದೆ, ಈ ವಿಶೇಷ ಟೆರಿಟೊರಿಯಲ್ಲಿ ಸಾಕ್ಷಿಕೊಡುವ ಅವಕಾಶ ನಿಮಗಿರುವುದರಿಂದ ನಮಗೂ ಸಂತೋಷ. ಆದ್ದರಿಂದ ಧೈರ್ಯದಿಂದಿರಿ, ಶಾಲೆಗೆ ಹೋಗಲು ತಯಾರಾಗಿರಿ!