ಮಾದರಿ ನಿರೂಪಣೆಗಳು
ಕಾವಲಿನಬುರುಜು ಏಪ್ರಿಲ್-ಜೂನ್
“ನಾವೆಲ್ಲರೂ ಸಂತೃಪ್ತ ಭಾವನೆಯನ್ನು ಪಡೆಯಲಿಚ್ಛಿಸುತ್ತೇವೆ. ಆದರೆ ಸಂತೃಪ್ತರಾಗಿರಲು ಹಣ ಇರಲೇ ಬೇಕಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇರುವುದರಲ್ಲೇ ತೃಪ್ತರಾಗಿರುವ ಬಗ್ಗೆ ದೇವಭಕ್ತನೊಬ್ಬ ಹೇಳಿದ ಮಾತನ್ನು ನಿಮಗೆ ತೋರಿಸಲೋ? [ಮನೆಯವನಿಗೆ ಆಸಕ್ತಿಯಿದ್ದರೆ ಫಿಲಿಪ್ಪಿ 4:11, 12 ಓದಿ.] ಈ ಪತ್ರಿಕೆ ಸಂತೃಪ್ತಿಯ ಐದು ಸೂತ್ರಗಳನ್ನು ತಿಳಿಸುತ್ತದೆ.”
ಎಚ್ಚರ! ಏಪ್ರಿಲ್-ಜೂನ್
“‘ದೇವರಿದ್ದಾನೆ ಎಂದಾದರೆ ಅವನು ಸೈತಾನನನ್ನು ಯಾಕೆ ನಾಶ ಮಾಡುವುದಿಲ್ಲ?’ ಎಂದು ಅನೇಕರು ಕೇಳಿದ್ದಾರೆ. ಇದರ ಬಗ್ಗೆ ನೀವೆಂದಾದರೂ ಯೋಚಿಸಿದ್ದೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇದಕ್ಕೆ ಉತ್ತರ ಈ ಪತ್ರಿಕೆಯ 30 ಮತ್ತು 31ನೇ ಪುಟಗಳಲ್ಲಿರುವ ಲೇಖನದಲ್ಲಿದೆ. ಸೈತಾನನು ನಾಶವಾದ ಬಳಿಕ ಈ ಲೋಕ ಹೇಗಿರುವುದೆಂದೂ ಅದು ತಿಳಿಸುತ್ತದೆ.” ಮನೆಯವನು ಚರ್ಚೆ ಮುಂದುವರಿಸಲು ಇಷ್ಟಪಡುವಲ್ಲಿ ಪ್ರಕಟನೆ 21:3, 4 ಓದಲು ಅನುಮತಿ ಕೇಳಿ ಓದಿ.