“ಕೋಮಲವಾದ ಕನಿಕರ” ಉಳ್ಳವರಾಗಿರಿ
1. ಇಂದು ಜನರಿಗೆ ಯಾವುದರ ತೀವ್ರ ಅಗತ್ಯವಿದೆ?
1 ಇತಿಹಾಸದಲ್ಲಿ ಹಿಂದೆಂದೂ ಇಷ್ಟು ಹೆಚ್ಚು ಜನರಿಗೆ ಕನಿಕರದ ತೀವ್ರ ಅಗತ್ಯವಿರಲಿಲ್ಲ. ಲೋಕದ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಅಸಂತೋಷ, ಖಿನ್ನತೆ, ನಿರೀಕ್ಷಾಹೀನ ಭಾವನೆಗಳು ಹೆಚ್ಚಾಗುತ್ತಿವೆ. ಲಕ್ಷಾಂತರ ಮಂದಿಗೆ ನೆರವಿನ ಅಗತ್ಯವಿದೆ. ಕ್ರೈಸ್ತರಾಗಿರುವ ನಾವು ನಮ್ಮ ನೆರೆಯವರಿಗೆ ಯಥಾರ್ಥ ಕಾಳಜಿಯನ್ನು ತೋರಿಸಬಹುದು. (ಮತ್ತಾ. 22:39; ಗಲಾ. 6:10) ಅಂಥ ಕಾಳಜಿಯನ್ನು ಹೇಗೆ ತೋರಿಸಬಲ್ಲೆವು?
2. ಕನಿಕರವನ್ನು ತೋರಿಸಸಾಧ್ಯವಿರುವ ಅತ್ಯುತ್ತಮ ವಿಧ ಯಾವುದು?
2 ಕನಿಕರದ ಕೆಲಸ: ಬಾಳುವ, ನಿಜ ಸಾಂತ್ವನದ ಮೂಲನು ದೇವರು ಮಾತ್ರವೇ. (2 ಕೊರಿಂ. 1:3, 4) “ಕೋಮಲವಾದ ಕನಿಕರ” ಉಳ್ಳವರಾಗಿರುವ ಮೂಲಕ ನಾವು ಆತನನ್ನು ಅನುಕರಿಸುವಂತೆ ಯೆಹೋವನು ನಮ್ಮನ್ನು ಉತ್ತೇಜಿಸುತ್ತಾನೆ. ಅಲ್ಲದೆ, ನಮ್ಮ ನೆರೆಯವರನ್ನು ಸಂದರ್ಶಿಸಿ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸುವಂತೆ ಆಜ್ಞೆಕೊಟ್ಟಿದ್ದಾನೆ. (1 ಪೇತ್ರ 3:8) ಈ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು “ಮನಮುರಿದವರನ್ನು” ಸಂತೈಸುವ ಅತ್ಯುತ್ತಮ ವಿಧವಾಗಿದೆ. ಏಕೆಂದರೆ ಕಷ್ಟಾನುಭವಿಸುತ್ತಿರುವ ಮಾನವಕುಲದ ಏಕೈಕ ನಿಜ ನಿರೀಕ್ಷೆ ದೇವರ ರಾಜ್ಯವಾಗಿದೆ. (ಯೆಶಾ. 61:1) ತನ್ನ ಜನರ ಮೇಲಿನ ಕನಿಕರದಿಂದಾಗಿ ಬೇಗನೆ ಯೆಹೋವನು ದುಷ್ಟತನವನ್ನೆಲ್ಲ ತೆಗೆದುಹಾಕಿ ನೀತಿಯ ನೂತನ ಲೋಕವನ್ನು ಸ್ಥಾಪಿಸಲಿದ್ದಾನೆ.—2 ಪೇತ್ರ 3:13.
3. ಜನರ ಬಗ್ಗೆ ಯೇಸುವಿಗಿದ್ದ ಮನೋಭಾವವನ್ನು ನಾವು ಹೇಗೆ ತೋರಿಸಬಲ್ಲೆವು?
3 ಜನರ ಬಗ್ಗೆ ಯೇಸುವಿಗಿದ್ದ ಮನೋಭಾವ ನಿಮಗಿರಲಿ: ಜನರ ದೊಡ್ಡ ಸಮೂಹಕ್ಕೆ ಸಾರುವಾಗಲೂ ಯೇಸು ಅವರನ್ನು ಬರೇ ಒಂದು ಗುಂಪಾಗಿ ಪರಿಗಣಿಸಲಿಲ್ಲ. ಬದಲಾಗಿ ಆಧ್ಯಾತ್ಮಿಕ ಅಗತ್ಯಗಳಿರುವ ವ್ಯಕ್ತಿಗಳಾಗಿ ಪರಿಗಣಿಸಿದನು. ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಅವರನ್ನು ನೋಡಿ ಯೇಸುವಿನ ಮನಸ್ಸು ಕರಗಿತು. ಅದರಿಂದಾಗಿ ತಾಳ್ಮೆಯಿಂದ ಅವರಿಗೆ ಬೋಧಿಸಲು ಪ್ರಚೋದಿಸಲ್ಪಟ್ಟನು. (ಮಾರ್ಕ 6:34) ಜನರ ಬಗ್ಗೆ ಯೇಸು ತೋರಿಸಿದ ಮನೋಭಾವ ನಮ್ಮಲ್ಲಿದ್ದರೆ ಪ್ರತಿಯೊಬ್ಬರಿಗೂ ವ್ಯಕ್ತಿಗತವಾಗಿ ಯಥಾರ್ಥ ಕನಿಕರ ತೋರಿಸಲು ಅದು ನಮ್ಮನ್ನು ಪ್ರೇರಿಸುವುದು. ಇದು ನಮ್ಮ ಧ್ವನಿ ಮತ್ತು ಮುಖಭಾವದಲ್ಲಿ ವ್ಯಕ್ತವಾಗುವುದು. ಸಾರುವ ಕೆಲಸವೇ ನಮ್ಮ ಆದ್ಯತೆಯಾಗಿರುವುದು. ನಾವು ನಮ್ಮ ಮಾತುಗಳನ್ನು ಪ್ರತಿಯೊಬ್ಬನ ವೈಯಕ್ತಿಕ ಅಗತ್ಯಗಳಿಗನುಸಾರ ಹೊಂದಿಸಿಕೊಳ್ಳುವೆವು.—1 ಕೊರಿಂ. 9:19-23.
4. ನಾವೇಕೆ ಕನಿಕರ ಉಳ್ಳವರಾಗಿರಬೇಕು?
4 ಎಲ್ಲ ಜನಾಂಗಗಳ ಜನರು ಬಹುಸಂಖ್ಯೆಯಲ್ಲಿ ರಾಜ್ಯ ಸಂದೇಶಕ್ಕೂ ಅವರಲ್ಲಿ ತೋರಿಸಲಾಗುತ್ತಿರುವ ವೈಯಕ್ತಿಕ ಆಸಕ್ತಿಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಾವು ಕನಿಕರ ಉಳ್ಳವರಾಗಿರುವಲ್ಲಿ ಸಹಾನುಭೂತಿಯ ದೇವರಾದ ಯೆಹೋವನನ್ನು ಗೌರವಿಸುವೆವು ಹಾಗೂ ಸಂತೋಷಪಡಿಸುವೆವು.—ಕೊಲೊ. 3:12.