ಸಾಕ್ಷಿಕೊಡಲು ಹಿಂಜರಿಯಬೇಡಿ
1. ಯಾವುದಕ್ಕೆ ಧೈರ್ಯ ಅಗತ್ಯ? ಏಕೆ?
1 ಶಾಲೆಯಲ್ಲಿ ಸಾಕ್ಷಿಕೊಟ್ಟರೆ ಎಲ್ಲರೂ ನಿಮ್ಮನ್ನು ಅಪಹಾಸ್ಯ ಮಾಡುವರೆಂದು ಹೆದರಿ ಎಂದಾದರೂ ಹಿಂಜರಿದಿದ್ದೀರೊ? ಸಾಕ್ಷಿಕೊಡಲು ಖಂಡಿತವಾಗಿ ಧೈರ್ಯ ಬೇಕು. ನೀವು ನಾಚಿಕೆ ಸ್ವಭಾವದವರಾಗಿದ್ದರಂತೂ ಅದು ತುಂಬ ಅಗತ್ಯ. ಸಾಕ್ಷಿಕೊಡಲು ಯಾವುದು ಸಹಾಯಕಾರಿ?
2. ಶಾಲೆಯಲ್ಲಿ ಸಾಕ್ಷಿಕೊಡುವ ವಿಷಯದಲ್ಲಿ ಹೇಗೆ ವಿವೇಚನೆ ಬಳಸಬಹುದು?
2 ವಿವೇಚನೆ ಬಳಸಿ: ಶಾಲೆಯನ್ನು ನಿಮ್ಮ ವೈಯಕ್ತಿಕ ಟೆರಿಟೊರಿಯೆಂದು ಎಣಿಸಬಹುದು ನಿಜ. ಆದರೆ, ಮನೆಮನೆಯ ಶುಶ್ರೂಷೆಯಲ್ಲಿ ಮಾಡುವಂತೆ ಶಾಲೆಯಲ್ಲಿ ಪ್ರತಿಯೊಬ್ಬರ ಜೊತೆ ನೀವು ಆಧ್ಯಾತ್ಮಿಕ ವಿಷಯಗಳ ಸಂಭಾಷಣೆ ಆರಂಭಿಸಬೇಕೆಂದೇನಿಲ್ಲ. ಯಾವಾಗ ಮಾತಾಡಬೇಕೆಂದು ನಿರ್ಣಯಿಸಲು ವಿವೇಚನೆ ಬಳಸಿ. (ಪ್ರಸಂ. 3:1, 7) ಕ್ಲಾಸ್‌ನಲ್ಲಿ ನಡೆಯುವ ಚರ್ಚೆಯಲ್ಲಿ ಇಲ್ಲವೆ ಕೊಡಲಾಗಿರುವ ಒಂದು ಪ್ರಾಜೆಕ್ಟ್‌ನಲ್ಲಿ ಅಥವಾ ನೀವು ನಿರ್ದಿಷ್ಟ ಚಟುವಟಿಕೆಗಳಲ್ಲಿ ಏಕೆ ಪಾಲ್ಗೊಳ್ಳುವುದಿಲ್ಲ ಎಂದು ನಿಮ್ಮ ಸಹಪಾಠಿ ಕೇಳುವಾಗ ನಿಮ್ಮ ನಂಬಿಕೆಗಳ ಬಗ್ಗೆ ತಿಳಿಸಲು ನಿಮಗೆ ಅವಕಾಶ ಸಿಗಬಹುದು. ಕೆಲವು ಮಕ್ಕಳು ಶಾಲಾ ವರ್ಷದ ಆರಂಭದಲ್ಲೇ ಟೀಚರರಿಗೆ ತಾವು ಯೆಹೋವನ ಸಾಕ್ಷಿಗಳೆಂದು ಹೇಳಿದ್ದಾರೆ. ನಮ್ಮ ನಂಬಿಕೆಗಳನ್ನು ವಿವರಿಸುವಂಥ ಸಾಹಿತ್ಯವನ್ನೂ ಅವರಿಗೆ ಕೊಟ್ಟಿದ್ದಾರೆ. ಇನ್ನಿತರರು ಸಹಪಾಠಿಗಳು ಪ್ರಶ್ನೆಗಳನ್ನು ಕೇಳಲಿ ಎಂಬ ಉದ್ದೇಶದಿಂದ ತಮ್ಮ ಡೆಸ್ಕ್ ಮೇಲೆ ಸಾಹಿತ್ಯವನ್ನು ಬಿಟ್ಟುಹೋಗಿದ್ದಾರೆ.
3. ಶಾಲೆಯಲ್ಲಿ ಸಾಕ್ಷಿಕೊಡಲು ಹೇಗೆ ತಯಾರಾಗಬಲ್ಲಿರಿ?
3 ತಯಾರಾಗಿರಿ: ನೀವು ತಯಾರಾಗಿದ್ದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. (1 ಪೇತ್ರ 3:15) ಆದ್ದರಿಂದ ಇತರರು ಯಾವ ಪ್ರಶ್ನೆಗಳನ್ನು ಕೇಳಬಹುದೆಂದೂ ಅದಕ್ಕೆ ಹೇಗೆ ಉತ್ತರ ಕೊಡಬಹುದೆಂದೂ ಮುಂದಾಗಿ ಯೋಚಿಸಿಡಿ. (ಜ್ಞಾನೋ. 15:28) ಸಾಧ್ಯವಿದ್ದರೆ ಶಾಲೆಯಲ್ಲಿ ನಿಮ್ಮ ಬಳಿ ನಿಮ್ಮ ಬೈಬಲ್ ಮತ್ತು ರೀಸನಿಂಗ್ ಪುಸ್ತಕ, ಯುವ ಜನರ ಪ್ರಶ್ನೆಗಳು ಪುಸ್ತಕ, ಸೃಷ್ಟಿಯ ಕುರಿತ ಸಾಹಿತ್ಯ ಮುಂತಾದವನ್ನು ಇಡಿ. ಆಗ ನಿಮಗೆ ಅಗತ್ಯಬಿದ್ದಂತೆ ಅವುಗಳನ್ನು ಬಳಸಬಹುದು. ನಿಮ್ಮ ಕುಟುಂಬ ಆರಾಧನೆಯ ಸಮಯದಲ್ಲಿ ಇದಕ್ಕೆ ಸಂಬಂಧಪಟ್ಟ ಪ್ರ್ಯಾಕ್ಟಿಸ್ ಸೆಷನ್‌ಗಳನ್ನು ನಡೆಸುವಂತೆ ನಿಮ್ಮ ಹೆತ್ತವರಿಗೆ ಹೇಳಿ.
4. ಶಾಲೆಯಲ್ಲಿ ಸಾಕ್ಷಿಕೊಡುವುದನ್ನು ನೀವೇಕೆ ಮುಂದುವರಿಸಬೇಕು?
4 ಸಕಾರಾತ್ಮಕವಾಗಿರ್ರಿ: ನೀವು ಸತ್ಯದ ಕುರಿತು ತಿಳಿಸಿದಾಗಲೆಲ್ಲ ನಿಮ್ಮ ಸಹಪಾಠಿಗಳು ಅಪಹಾಸ್ಯ ಮಾಡುವರೆಂದು ಊಹಿಸಬೇಡಿ. ಕೆಲವರು ನಿಮ್ಮ ಧೈರ್ಯವನ್ನು ಮೆಚ್ಚಿ ನಿಮಗೆ ಕಿವಿಗೊಡಲೂಬಹುದು. ಯಾರೂ ಒಳ್ಳೇ ಪ್ರತಿಕ್ರಿಯೆ ತೋರಿಸದಿದ್ದರೆ ನಿರಾಶರಾಗಬೇಡಿ. ನೀವು ಪ್ರಯತ್ನವಾದರೂ ಮಾಡಿದ್ದೀರೆಂದು ಯೆಹೋವನು ಸಂತೋಷಪಡುವನು. (ಇಬ್ರಿ. 13:15, 16) “ಪೂರ್ಣ ಧೈರ್ಯದಿಂದ ಮಾತಾಡುತ್ತಾ ಇರಲು” ಸಹಾಯ ಮಾಡುವಂತೆ ಆತನಿಗೆ ಪ್ರಾರ್ಥಿಸುತ್ತಾ ಇರಿ. (ಅ.ಕಾ. 4:30; 2 ತಿಮೊ. 1:7, 8) ಯಾರಾದರೂ ನಿಜವಾಗಿ ಕಿವಿಗೊಟ್ಟಾಗ ನಿಮಗೆಷ್ಟು ಸಂತೋಷ ಆಗುವುದೆಂದು ಸ್ವಲ್ಪ ಊಹಿಸಿ. ಆ ವ್ಯಕ್ತಿ ಯೆಹೋವನನ್ನು ಸೇವಿಸುವ ನಿಮ್ಮ ಜೊತೆ ವಿಶ್ವಾಸಿಯೂ ಆಗಬಹುದು!