ಮಾದರಿ ನಿರೂಪಣೆಗಳು
ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರ ಬೈಬಲ್ ಅಧ್ಯಯನ ಆರಂಭಿಸಲು
“ನಮ್ಮೆಲ್ಲರಿಗೂ ಸ್ನೇಹಿತರು ಬೇಕೇ ಬೇಕು ಅಲ್ವಾ? ಆದರೆ ನೀವು ಯಾವ ಗುಣ ಇರುವವರನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸ್ತೀರಿ? [ಉತ್ತರಕ್ಕಾಗಿ ಕಾಯಿರಿ.] ನಾವ್ಯಾಕೆ ಸ್ನೇಹಿತರನ್ನು ಬಲು ಜಾಗ್ರತೆಯಿಂದ ಆಯ್ಕೆ ಮಾಡ್ಬೇಕು ಅಂತ ಬೈಬಲ್ ತಿಳಿಸ್ತದೆ. ನಾನದನ್ನು ನಿಮಗೆ ತೋರಿಸ್ಲಾ?” ಮನೆಯವರಿಗೆ ಆಸಕ್ತಿ ಇರುವಲ್ಲಿ ಜುಲೈ-ಸೆಪ್ಟೆಂಬರ್ ಕಾವಲಿನಬುರುಜುವನ್ನು ಅವರಿಗೆ ಕೊಟ್ಟು ಪುಟ 18ರಲ್ಲಿರುವ ಮೊದಲ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಓದಿ ಚರ್ಚಿಸಿ. ಮನೆಯವರು ಒಪ್ಪುವುದಾದರೆ ಅಲ್ಲಿರುವ ಒಂದು ವಚನವನ್ನಾದರೂ ಓದಿ. ಪತ್ರಿಕೆಗಳನ್ನು ಅವರಿಗೆ ನೀಡಿ. ಇನ್ನೊಂದು ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಹಿಂದಿನ ಕಾಲದಲ್ಲಿ ಬದುಕಿದ್ದ ಎಷ್ಟೋ ಪ್ರಸಿದ್ಧ ವ್ಯಕ್ತಿಗಳ ಜೀವನದಿಂದ ನಾವು ತುಂಬ ಕಲೀಬಹುದು. ನಿಮಗೇನು ಅನ್ಸುತ್ತೆ? [ಉತ್ತರಕ್ಕಾಗಿ ಕಾಯಿರಿ.] ಬೈಬಲ್ ಸಹ ಒಬ್ಬ ಪ್ರಸಿದ್ಧ ವ್ಯಕ್ತಿ ಬಗ್ಗೆ ತಿಳಿಸುತ್ತೆ. ಅವನನ್ನು ಮಾತ್ರ ‘ದೇವರ ಸ್ನೇಹಿತ’ ಅಂತ ಅದು ಹೇಳುತ್ತೆ. ಅವನು ಯಾರಂತ ನಿಮಗೆ ಬೈಬಲಿನಿಂದಲೇ ತೋರಿಸ್ಲಾ? [ಮನೆಯವರಿಗೆ ಆಸಕ್ತಿಯಿದ್ದು, ಒಪ್ಪಿದರೆ ಯಾಕೋಬ 2:23 ಓದಿ.] ದೇವರು ಅಬ್ರಹಾಮನನ್ನು ತನ್ನ ಸ್ನೇಹಿತ ಅಂತ ಹೇಳಿದ್ದೇಕೆ? ಅಬ್ರಹಾಮನಿಂದ ನಾವೇನು ಕಲೀಬಹುದು? ಈ ಪತ್ರಿಕೆ ತಿಳಿಸುತ್ತೆ.”