ಮಾದರಿ ನಿರೂಪಣೆಗಳು
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಕಷ್ಟ-ತೊಂದರೆಗಳ ಸಮಯದಲ್ಲಿ ಬೇಡಿಕೊಂಡಾಗ ದೇವರು ಸಹಾಯ ಮಾಡ್ತಾನೆ ಅಂತ ಅನೇಕರು ನಂಬ್ತಾರೆ. ಇನ್ನು ಕೆಲವರು ‘ದೇವರಿದ್ದಿದ್ರೆ, ನಮ್ಮ ಪ್ರಾರ್ಥನೆಗಳನ್ನೆಲ್ಲ ಆತ ಕೇಳಿದ್ದಿದ್ರೆ ಇಷ್ಟು ಕಷ್ಟಗಳು ಇರ್ತಿರಲಿಲ್ಲ’ ಎನ್ನುತ್ತಾರೆ. ನಿಮ್ಮ ಅಭಿಪ್ರಾಯವೇನು? ದೇವರು ಪ್ರಾರ್ಥನೆಗಳನ್ನು ಕೇಳ್ತಾನಾ? [ಉತ್ತರಕ್ಕಾಗಿ ಕಾಯಿರಿ.] ಪ್ರಾರ್ಥನೆಗಳನ್ನು ಕೇಳುವವನಿದ್ದಾನೆ ಅಂತ ನಮ್ಮಲ್ಲಿ ವಿಶ್ವಾಸ ತುಂಬಿಸೋ ಒಂದು ಬೈಬಲ್ ವಾಕ್ಯವನ್ನು ತೋರಿಸಬಹುದಾ? [ಮನೆಯವರಿಗೆ ಆಸಕ್ತಿಯಿದ್ದರೆ ಕೀರ್ತನೆ 65:2 ಓದಿ.] ಈ ವಾಕ್ಯದಲ್ಲಿರೋ ಮಾತನ್ನು ಅನೇಕರು ಒಪ್ಪುತ್ತಾರೆ. ಈ ಪತ್ರಿಕೆ, ‘ಪ್ರಾರ್ಥನೆಯನ್ನ ಕೇಳೋ ದೇವರು ಲೋಕದಲ್ಲಿ ಕಷ್ಟಗಳನ್ನು ಯಾಕೆ ಹಾಗೇ ಬಿಟ್ಟಿದ್ದಾನೆ?’ ಅನ್ನೋ ಪ್ರಶ್ನೆಗೆ ಉತ್ತರ ಕೊಡುತ್ತೆ.”