ಆಕ್ಸಿಲಿಯರಿ ಪಯನೀಯರ್ ಸೇವೆಗೆ ಒಳ್ಳೇ ಅವಕಾಶ
1. ಮಾರ್ಚ್, ಏಪ್ರಿಲ್, ಮೇ ತಿಂಗಳು ನಮ್ಮ ಸೇವೆಯನ್ನು ಹೆಚ್ಚಿಸಲು ತಕ್ಕ ಸಮಯವಾಗಿದೆ ಏಕೆ?
1 ಕ್ರಿಸ್ತನ ಮರಣದ ಸ್ಮರಣೆಯ ದಿನ ಹತ್ತಿರವಾಗುತ್ತಿದೆ. ಸೇವೆಯನ್ನು ಹೆಚ್ಚಿಸಲು ಇದು ತಕ್ಕ ಸಮಯ. ಮಗನನ್ನೇ ವಿಮೋಚನಾ ಮೌಲ್ಯವಾಗಿ ಕೊಟ್ಟ ಯೆಹೋವನ ಪ್ರೀತಿಯ ಬಗ್ಗೆ ಈ ಸಮಯದಲ್ಲಿ ಧ್ಯಾನಿಸುತ್ತೇವೆ. (ಯೋಹಾ. 3:16) ಹೀಗೆ ಧ್ಯಾನಿಸುವಾಗ ನಮ್ಮ ಮನಗಳಲ್ಲಿ ಕೃತಜ್ಞತಾಭಾವ ತುಂಬುತ್ತೆ. ಜನರಿಗೆ ಯೆಹೋವ ದೇವರ ಬಗ್ಗೆ, ಆತ ಮಾನವಕುಲಕ್ಕೆ ಮಾಡುತ್ತಿರುವ ಸಂಗತಿಗಳ ಬಗ್ಗೆ ತಿಳಿಸುವ ಹಂಬಲ ಹೆಚ್ಚುತ್ತೆ. (ಯೆಶಾ. 12:4, 5; ಲೂಕ 6:45) ಅಲ್ಲದೆ ಕ್ರಿಸ್ತನ ಮರಣದ ಸ್ಮರಣೆಗೆ ಪರಿಚಯಸ್ಥರನ್ನು ಹಾಗೂ ನಮ್ಮ ಸೇವಾಕ್ಷೇತ್ರದ ಜನರನ್ನು ಆಮಂತ್ರಿಸುವ ಒಂದು ವಿಶೇಷ ಅಭಿಯಾನ ಸಹ ಇದೆ. ಕಾರ್ಯಕ್ರಮಕ್ಕೆ ಹಾಜರಾಗುವ ವ್ಯಕ್ತಿಗಳನ್ನು ಪುನರ್ಭೇಟಿ ಸಹ ಮಾಡಬಹುದು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಮೂಲಕ ನಿಮ್ಮ ಸೇವೆಯನ್ನು ಹೆಚ್ಚಿಸಬಲ್ಲಿರಾ?
2. ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಮಾರ್ಚ್ ತಿಂಗಳು ಸೂಕ್ತ ಸಮಯವೇಕೆ?
2 ಮಾರ್ಚ್ ಒಂದು ವಿಶೇಷ ಮಾಸ: ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಮಾರ್ಚ್ ತಿಂಗಳು ಅತ್ಯುತ್ತಮ ಸಮಯ. ಆ ತಿಂಗಳಲ್ಲಿ 30 ಅಥವಾ 50 ತಾಸು ಸೇವೆ ಮಾಡುವ ಆಯ್ಕೆ ಇರುತ್ತೆ. ಆ ತಿಂಗಳಲ್ಲಿ ಸರ್ಕಿಟ್ ಮೇಲ್ವಿಚಾರಕರ ಭೇಟಿ ಇರುವಲ್ಲಿ ರೆಗ್ಯುಲರ್ ಮತ್ತು ವಿಶೇಷ ಪಯನೀಯರರಿಗಾಗಿ ನಡೆಸುವ ಪೂರ್ತಿ ಕೂಟಕ್ಕೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವವರೂ ಹಾಜರಾಗಬಹುದು. ಈ ವರ್ಷ ಆಮಂತ್ರಣ ಪತ್ರವನ್ನು ವಿತರಿಸುವ ಅಭಿಯಾನದ ಅವಧಿಯನ್ನು ಹೆಚ್ಚಿಸಲಾಗಿದೆ. ಮಾರ್ಚ್ 1ರಿಂದ ಕ್ರಿಸ್ತನ ಮರಣದ ಸ್ಮರಣೆಯ ದಿನದ ತನಕ ಅಂದರೆ ಮಾರ್ಚ್ 26ರ ತನಕ ಆಮಂತ್ರಣ ಪತ್ರಗಳನ್ನು ವಿತರಿಸಬಹುದು. ಅಲ್ಲದೆ ಆ ತಿಂಗಳಲ್ಲಿ ಐದು ವಾರಾಂತ್ಯಗಳಿವೆ. ಹೀಗಿರುವಾಗ ಮಾರ್ಚ್ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿ ಅದನ್ನು ಸವಿನೆನಪಿನ ತಿಂಗಳಾಗಿ ಮಾಡಬಹುದಲ್ಲವೇ?
3. ಹೆಚ್ಚು ಸೇವೆಮಾಡಲು ನಾವು ಹೇಗೆ ಯೋಜನೆ ಮಾಡಬಹುದು?
3 ಈಗಲೇ ಯೋಜನೆ ಮಾಡಿ: ನಿಮ್ಮ ಕೆಲಸಕಾರ್ಯಗಳನ್ನೆಲ್ಲ ಈಗಲೇ ಪರಿಶೀಲಿಸಿ ಪಯನೀಯರ್ ಸೇವೆಮಾಡಲು ಯಾವ್ಯಾವ ಹೊಂದಾಣಿಕೆ ಮಾಡಬೇಕಾಗಬಹುದೆಂದು ನೋಡಿ. ನಿಮ್ಮ ಕುಟುಂಬದ ಸಹಕಾರ ಕೂಡ ಅಗತ್ಯ. ಹಾಗಾಗಿ ಕುಟುಂಬ ಆರಾಧನಾ ಸಂಜೆಯಂದು ಯೋಜನೆ ಮಾಡಿ. ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬವಾಗಿ ಏನೇನು ಮಾಡಬೇಕೆಂದು ಚರ್ಚಿಸಿ ಕಾರ್ಯತಖ್ತೆ ಸಿದ್ಧಮಾಡಿಕೊಳ್ಳಿ. (ಜ್ಞಾನೋ. 15:22) ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಸಾಧ್ಯವಾಗದಿದ್ದರೆ ನಿರಾಶರಾಗಬೇಡಿ. ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಸೇವೆ ಮಾಡುವ ದಿನ ಸ್ವಲ್ಪ ಜಾಸ್ತಿ ಹೊತ್ತು ಮಾಡಲು ಪ್ರಯತ್ನಿಸಿ. ಆಗೋದಾದರೆ ವಾರದಲ್ಲಿ ಒಂದು ದಿನ ಜಾಸ್ತಿ ಸೇವೆಮಾಡಿ.
4. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸೇವೆ ಹೆಚ್ಚಿಸುವುದರಿಂದ ಯಾವ ಪ್ರತಿಫಲ ಸಿಗುತ್ತೆ?
4 ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ಸೇವೆ ಮಾಡಿದಾಗ ಯೆಹೋವ ದೇವರ ಸೇವೆಮಾಡಿದ ತೃಪ್ತಿ ಮತ್ತು ಸಾರುವುದರ ಮೂಲಕ ಸಿಗುವ ಸಂತೋಷ ನಮ್ಮದಾಗುತ್ತೆ. (ಯೋಹಾ. 4:34; ಅ. ಕಾ. 20:35) ಎಲ್ಲಕ್ಕಿಂತ ಮಿಗಿಲಾಗಿ ಯೆಹೋವನಿಗೆ ನಮ್ಮ ತ್ಯಾಗಗಳನ್ನು ನೋಡಿ ಸಂತೋಷವಾಗುತ್ತೆ.—ಜ್ಞಾನೋ. 27:11.