ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ—ಮಾರ್ಚ್ 1ರಿಂದ
1. ಅಭಿಯಾನ ಯಾವಾಗ ಆರಂಭವಾಗಲಿದೆ? ಈ ಅಭಿಯಾನದ ಅವಧಿಯನ್ನು ಯಾಕೆ ಹೆಚ್ಚಿಸಲಾಗಿದೆ?
1 ಕ್ರಿಸ್ತನ ಮರಣದ ಸ್ಮರಣೆಗೆ ಜನರನ್ನು ಆಮಂತ್ರಿಸುವ ಅಭಿಯಾನ ಮಾರ್ಚ್ 1, ಶುಕ್ರವಾರದಿಂದ ಆರಂಭವಾಗಲಿದೆ. ನಮಗೆಲ್ಲ ಗೊತ್ತಿರೋ ಹಾಗೆ ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮ ನಡೆಯುವುದು ಮಾರ್ಚ್ 26ಕ್ಕೆ. ಹಾಗಾದರೆ ಮಾರ್ಚ್ 1ರಿಂದ 26ರ ತನಕ ಸಮಯ ಇರುತ್ತೆ. ಹೆಚ್ಚು ಜನರಿಗೆ ಆಮಂತ್ರಣ ಪತ್ರಗಳನ್ನು ವಿತರಿಸಲು ಅವಕಾಶ ಸಿಗುತ್ತೆ. ಅದರಲ್ಲೂ ದೊಡ್ಡ ದೊಡ್ಡ ಸೇವಾಕ್ಷೇತ್ರಗಳನ್ನೂ ಆವರಿಸಲು ಸಾಕಷ್ಟು ಸಮಯ ಸಿಗುತ್ತೆ.
2. ಆಮಂತ್ರಣ ಪತ್ರಗಳನ್ನು ಪಡೆದುಕೊಳ್ಳಲು ಮತ್ತು ಸೇವಾಕ್ಷೇತ್ರವನ್ನು ಆವರಿಸಲು ಯಾವ ಏರ್ಪಾಡುಗಳನ್ನು ಮಾಡಲಾಗಿದೆ?
2 ಸಲಹೆಸೂಚನೆಗಳು: ಮನೆಯಲ್ಲಿ ಯಾರೂ ಸಿಗದಿದ್ದಾಗ ಆಮಂತ್ರಣ ಪತ್ರವನ್ನು ಇಟ್ಟು ಬರಬೇಕಾ ಬೇಡ್ವಾ ಎನ್ನುವುದು ಸೇರಿದಂತೆ ಸೇವಾಕ್ಷೇತ್ರವನ್ನು ಹೇಗೆ ಆವರಿಸಬೇಕೆಂಬ ಬಗ್ಗೆ ಹಿರಿಯರು ಸಲಹೆಸೂಚನೆಗಳನ್ನು ನೀಡುವರು. ವಿಳಾಸ, ಸಮಯವನ್ನೆಲ್ಲ ಅಚ್ಚೊತ್ತಿದ ಆಮಂತ್ರಣ ಪತ್ರಗಳನ್ನು ಸಾಹಿತ್ಯ ಅಥವಾ ಪತ್ರಿಕಾ ಕೌಂಟರ್ ಬಳಿ ಇಡಲಾಗಿದೆ ಎನ್ನುವುದನ್ನು ಸೇವಾ ಮೇಲ್ವಿಚಾರಕ ಖಚಿತಪಡಿಸಿಕೊಳ್ಳುವರು. ಎಲ್ಲವನ್ನೂ ಇಡುವ ಬದಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಡಬೇಕು. ನಾವು ಆಮಂತ್ರಣ ಪತ್ರಗಳನ್ನು ತೆಗೆದುಕೊಳ್ಳುವಾಗಲೂ ಒಂದು ವಾರಕ್ಕೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಸೇವಾಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿದ ಮೇಲೆ ಆಮಂತ್ರಣ ಪತ್ರಗಳು ಉಳಿದರೆ ಅವನ್ನು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಬಳಸಬಹುದು.
3. ಆಮಂತ್ರಣ ಪತ್ರ ವಿತರಿಸುವಾಗ ಏನನ್ನು ಮನಸ್ಸಿನಲ್ಲಿಡಬೇಕು?
3 ಹೇಗೆ ಮಾತಾಡಬೇಕು? ನಿರೂಪಣೆ ಚುಟುಕಾಗಿರಲಿ. ಆಗ ಹೆಚ್ಚು ಜನರಿಗೆ ಆಮಂತ್ರಣ ಪತ್ರ ವಿತರಿಸಲು ಸಾಧ್ಯವಾಗುತ್ತೆ. ಪುಟ 6ರ ಮಾದರಿ ನಿರೂಪಣೆಯನ್ನು ನಿಮ್ಮ ಸೇವಾಕ್ಷೇತ್ರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ. ಒಂದುವೇಳೆ ಮನೆಯವರು ಚೆನ್ನಾಗಿ ಮಾತಾಡುತ್ತಿದ್ದರೆ ಮಾತು ಮುಂದುವರಿಸಿ. ಅವರಿಗೆ ಕೆಲವು ಸಂಶಯಗಳಿದ್ದರೆ ಅದಕ್ಕೆ ಉತ್ತರಿಸಿ. ವಾರಾಂತ್ಯದಲ್ಲಿ ವಿತರಿಸುವಾಗ ಪತ್ರಿಕೆಗಳನ್ನು ಕೊಡಬಹುದು. ಮಾರ್ಚ್ 2ರಂದು ಬೈಬಲ್ ಅಧ್ಯಯನ ಆರಂಭಿಸುವುದಕ್ಕಿಂತ ಆಮಂತ್ರಣ ಪತ್ರ ವಿತರಿಸುವುದಕ್ಕೆ ಆದ್ಯತೆ ಕೊಡಬೇಕು.
4. ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಯಾಕೆ?
4 ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮಕ್ಕೆ ಹಲವರು ಹಾಜರಾಗಬೇಕೆನ್ನುವುದು ನಮ್ಮ ಆಶಯ. ಅಲ್ಲಿ ಸಾದರಪಡಿಸಲಾಗುವ ಉಪನ್ಯಾಸದಲ್ಲಿ ಯೇಸುವಿನ ಬಗ್ಗೆ ವಿವರಿಸಲಾಗುತ್ತೆ. (1 ಕೊರಿಂ. 11:26) ಆತನ ಬಲಿದಾನದಿಂದ ನಮಗಾಗುವ ಪ್ರಯೋಜನವನ್ನು ತಿಳಿಸಲಾಗುತ್ತೆ. (ರೋಮ. 6:23) ನಾವು ಆತನನ್ನು ಯಾಕೆ ಸ್ಮರಿಸಬೇಕು ಎನ್ನುವುದಕ್ಕೆ ಕಾರಣಗಳನ್ನು ಕೊಡಲಾಗುತ್ತೆ. (ಯೋಹಾ. 17:3) ಈ ಅಭಿಯಾನದಲ್ಲಿ ಉತ್ಸಾಹ, ಹುರುಪಿನಿಂದ ಪಾಲ್ಗೊಳ್ಳೋಣ!