ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ- ಮಾರ್ಚ್ 22ರಿಂದ
ಕ್ರಿಸ್ತನ ಮರಣದ ಸ್ಮರಣೆಗೆ ಜನರನ್ನು ಆಮಂತ್ರಿಸುವ ಅಭಿಯಾನ ಈ ವರ್ಷ ಮಾರ್ಚ್ 22, ಶನಿವಾರದಂದು ಆರಂಭವಾಗಲಿದೆ. ಪ್ರತಿಯೊಬ್ಬರು ಇದರಲ್ಲಿ ಪೂರ್ಣವಾಗಿ ಭಾಗವಹಿಸಬೇಕೆಂದು ಉತ್ತೇಜಿಸುತ್ತೇವೆ. ವಾರಾಂತ್ಯಗಳಲ್ಲಿ ಇತ್ತೀಚಿಗಿನ ಪತ್ರಿಕೆಗಳನ್ನು ಸಹ ಕೊಡಬಹುದು. ಆದರೆ ಸೂಕ್ತವಾದ ಸಂದರ್ಭವಿದ್ದಲ್ಲಿ ಮಾತ್ರ. ಏಪ್ರಿಲ್ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸುವುದಕ್ಕಿಂತ ಆಮಂತ್ರಣ ಪತ್ರಗಳನ್ನು ಹಂಚುವುದಕ್ಕೆ ಹೆಚ್ಚು ಗಮನ ಕೊಡೋಣ. ಆದರೆ, ವಿಶೇಷ ಆಸಕ್ತಿ ತೋರಿಸುವವರನ್ನು ನಾವು ಕಂಡುಕೊಳ್ಳುವಲ್ಲಿ, ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಬಹುದು. ಸಾರ್ವಜನಿಕ ಸಾಕ್ಷಿಕಾರ್ಯದ ಮೂಲಕ ಆಮಂತ್ರಣ ಪತ್ರವನ್ನು ಹಂಚಿದರೆ ಸಭೆಯ ಸೇವಾಕ್ಷೇತ್ರದಲ್ಲಿ ಹೆಚ್ಚು ಜನರನ್ನು ತಲುಪಲು ಸಭೆಗೆ ನೆರವಾಗುವುದೇ, ಎಂದು ಸೇವಾ ಮೇಲ್ವಿಚಾರಕನು ನಿರ್ಧರಿಸಬಹುದು. ನೀವು ಆಮಂತ್ರಿಸಬೇಕೆಂದಿರುವ ಸಂಬಂಧಿಕರ, ಸಹೋದ್ಯೋಗಿಗಳ, ಸಹಪಾಠಿಗಳ, ಪುನರ್ಭೇಟಿಗಳ ಮತ್ತು ಇತರ ಪರಿಚಯಸ್ಥರ ಹೆಸರುಗಳನ್ನು ಪಟ್ಟಿಮಾಡಿ ಮತ್ತು ಅಭಿಯಾನ ಆರಂಭವಾಗುತ್ತಿದ್ದಂತೆ ಆಮಂತ್ರಣ ಪತ್ರವನ್ನು ಅವರಿಗೆ ಕೊಡಿ. ಪ್ರೀತಿಯ ಎರಡು ಅತ್ಯುತ್ಕೃಷ್ಟ ಅಭಿವ್ಯಕ್ತಿಗಳನ್ನು ನಾವು ಸ್ಮರಿಸುವಾಗ ಅನೇಕ ಜನರು ನಮ್ಮ ಜೊತೆಗೂಡುವಂತೆ ನಿರೀಕ್ಷಿಸೋಣ.—ಯೋಹಾ. 3:16; 15:13.