ನೀವೂ ನಿಲ್ಲಿಸಬೇಕಾ?
ಕೆಲವು ಪ್ರಚಾರಕರು ಪದ್ಧತಿಯೆಂಬಂತೆ ಯಾವಾಗಲೂ ಒಂದೇ ಸಮಯಕ್ಕೆ ಕ್ಷೇತ್ರಸೇವೆಯನ್ನು ನಿಲ್ಲಿಸುತ್ತಾರೆ. ಉದಾ: ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ತನಕ ಅಂತ ನಿಗದಿಪಡಿಸಿಕೊಳ್ಳುತ್ತಾರೆ. ಕೆಲವರ ಸನ್ನಿವೇಶವೇ ಹಾಗಿರುತ್ತೆ, ತಮ್ಮ ಕ್ಷೇತ್ರಸೇವೆಯನ್ನು ನಿರ್ದಿಷ್ಟ ಸಮಯಕ್ಕೆ ನಿಲ್ಲಿಸಲೇಬೇಕಾಗುತ್ತೆ. ಆದರೆ ಬೇರೆಯವರು ನಿಲ್ಲಿಸುತ್ತಿದ್ದಾರೆ ಅನ್ನೋ ಕಾರಣಕ್ಕೆ ನೀವೂ ಕ್ಷೇತ್ರಸೇವೆಯನ್ನು ನಿಲ್ಲಿಸುತ್ತೀರಾ? ಇದೇ ಸಮಯಕ್ಕೆ ಸೇವೆಯನ್ನು ನಿಲ್ಲಿಸಬೇಕು ಅನ್ನೋ ರೂಢಿ ಮಾಡಿಕೊಂಡು ಅದೇ ಸಮಯಕ್ಕೆ ನಿಲ್ಲಿಸುತ್ತಿದ್ದೀರಾ? ಮನೆಮನೆ ಸೇವೆ ಮಾಡಿದ ಮೇಲೆ ಇನ್ನು ಸ್ವಲ್ಪ ಸಮಯವನ್ನು ಬೀದಿ ಸಾಕ್ಷಿಕಾರ್ಯದಂಥ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ವ್ಯಯಿಸಲು ನಿಮ್ಮಿಂದ ಆಗುತ್ತಾ? ಮನೆಗೆ ಹೋಗುವ ಮುನ್ನ ಒಂದೆರಡು ಪುನರ್ಭೇಟಿಗಳನ್ನು ಮಾಡಬಹುದಲ್ವಾ? ಮನೆಮನೆ ಸೇವೆಯಲ್ಲಿ ನಿಮಗೆ ಇನ್ನೊಬ್ಬ ಆಸಕ್ತ ವ್ಯಕ್ತಿ ಸಿಕ್ಕಿದರೆ ಅಥವಾ ದಾರಿಹೋಕರಿಗೆ ಇನ್ನೆರಡು ಪತ್ರಿಕೆಗಳನ್ನು ಕೊಡುವ ಸಂದರ್ಭ ಸಿಕ್ಕಿದರೆ ನಿಮ್ಮ ಕೈಯಿಂದಾಗುವ ಒಳಿತಿನ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ! ಯೆಹೋವನಿಗೆ ಹೆಚ್ಚು “ಸ್ತೋತ್ರಯಜ್ಞವನ್ನು” ಸಲ್ಲಿಸುವ ಒಂದು ಸರಳ ಮಾರ್ಗ, ಕೆಲವಾರು ನಿಮಿಷ ಹೆಚ್ಚು ಸೇವೆಮಾಡುವುದು.—ಇಬ್ರಿ. 13:15.