ಮಾದರಿ ನಿರೂಪಣೆಗಳು
ಮೇ ತಿಂಗಳ ಮೊದಲ ಶನಿವಾರ ಬೈಬಲ್ ಅಧ್ಯಯನ ಆರಂಭಿಸಲು
“ದೇವರಿಗೆ ಪ್ರಾರ್ಥನೆಮಾಡುವುದು ನಿಮಗೆ ಇಷ್ಟವಾ?” ಉತ್ತರಕ್ಕಾಗಿ ಕಾಯಿರಿ. ಆ ವ್ಯಕ್ತಿಗೆ ಆಸಕ್ತಿ ಇದೆಯೆಂದು ನಿಮಗೆ ಅನಿಸಿದರೆ ಮಾತ್ರ ಮಾತು ಮುಂದುವರಿಸಿ. “ಪ್ರಾರ್ಥನೆ ಮೂಲಕ ಹೇಗೆ ದೇವರ ಸ್ನೇಹಿತರಾಗಬಲ್ಲೆವೆಂದು ತಿಳಿಯಲು ನಿಮಗೆ ಮನಸ್ಸಿದೆಯೇ?” ಉತ್ತರಕ್ಕಾಗಿ ಕಾಯಿರಿ. ಏಪ್ರಿಲ್-ಜೂನ್ ಕಾವಲಿನಬುರುಜುವನ್ನು ಅವರ ಕೈಗೆ ಕೊಟ್ಟು ಪುಟ 18ರ 1ನೇ ಪ್ರಶ್ನೆಯ ಕೆಳಗಿರುವ ವಿಷಯಭಾಗ ಓದಿ, ಚರ್ಚಿಸಿ. ಅಲ್ಲಿ ಕೊಡಲಾದ ವಚನಗಳಲ್ಲಿ ಒಂದನ್ನಾದರೂ ಓದಿ. ಪತ್ರಿಕೆಗಳನ್ನು ನೀಡಿರಿ. ಮುಂದಿನ ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.
ಕಾವಲಿನಬುರುಜು ಏಪ್ರಿಲ್-ಜೂನ್
“ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿರಲು ಕಾರಣವೇನೆಂದು ನೆನಸುತ್ತೀರಿ? [ಉತ್ತರಕ್ಕಾಗಿ ಕಾಯಿರಿ.] ಇಂಥ ವಿಪತ್ತುಗಳಿಂದ ತುಂಬಿರುವ ಸಮಯ ಬರಲಿದೆಯೆಂದು ಬೈಬಲ್ ಹಿಂದೆಯೇ ತಿಳಿಸಿತ್ತು. ಆ ಭವಿಷ್ಯವಾಣಿಯನ್ನು ನಿಮಗೆ ಓದಿಹೇಳಲಾ? [ಮನೆಯವರು ಒಪ್ಪಿದರೆ ಮತ್ತಾಯ 24:7, 8 ಓದಿ.] ಈ ಪತ್ರಿಕೆಯಲ್ಲಿ, ಇಂದು ಯಾಕಿಷ್ಟು ನೈಸರ್ಗಿಕ ವಿಪತ್ತುಗಳಾಗುತ್ತಿವೆ? ಅವು ದೇವರು ಕೊಡುತ್ತಿರುವ ಶಿಕ್ಷೆಯೇ? ಆತನು ಇಂಥ ವಿಪತ್ತುಗಳಿಗೆಲ್ಲ ಬೇಗನೆ ಕೊನೆ ತರುವನೆಂದು ನಂಬಲು ಯಾವ ಕಾರಣಗಳಿವೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ.”
ಎಚ್ಚರ! ಏಪ್ರಿಲ್-ಜೂನ್
“ನಕಾರಾತ್ಮಕ ಭಾವನೆಗಳು ಅನೇಕರ ಸಂತೋಷವನ್ನು ಕಸಿದುಕೊಂಡಿವೆ. ಇದರಿಂದಾಗಿ ಕೆಲವರು ತಮ್ಮ ಜೀವವನ್ನೇ ತೆಗೆಯುತ್ತಾರೆ. ಆತ್ಮಹತ್ಯೆಯ ಯೋಚನೆಗಳಿರುವವರಿಗೆ ನಾವು ಹೇಗೆ ನೆರವಾಗಬಲ್ಲೆವು? [ಉತ್ತರಕ್ಕಾಗಿ ಕಾಯಿರಿ.] ಜೀವ ಏಕೆ ಅಮೂಲ್ಯವೆಂದು ವಿವರಿಸುವ ಒಂದು ವಚನವನ್ನು ನಿಮಗೆ ತೋರಿಸಲಾ? [ಮನೆಯವರಿಗೆ ಆಸಕ್ತಿಯಿದ್ದರೆ ಯಾಕೋಬ 1:17 ಓದಿ.] ಸೃಷ್ಟಿಕರ್ತನು ಕೊಟ್ಟಿರುವ ವರದಾನಗಳಲ್ಲಿ ಜೀವವೂ ಒಂದು. ಬದುಕುವುದೇ ಬೇಡ ಅಂತ ಅನಿಸುವವರಿಗೆ ಹೇಗೆ ಸಹಾಯಮಾಡಬಲ್ಲೆವೆಂದು ಈ ಲೇಖನ ತೋರಿಸುತ್ತದೆ.” ಪುಟ 14ರ ಲೇಖನ ತೋರಿಸಿ.