ಮಾದರಿ ನಿರೂಪಣೆಗಳು
ಅಕ್ಟೋಬರ್ ತಿಂಗಳ ಮೊದಲ ಶನಿವಾರ ಬೈಬಲ್‌ಅಧ್ಯಯನ ಆರಂಭಿಸಲು
“ಎಲ್ಲರೂ ದೇವರಿಗೆ ಪ್ರಾರ್ಥನೆ ಮಾಡೇ ಮಾಡ್ತಾರೆ. ನಾಸ್ತಿಕರು ಕೂಡ ಕಷ್ಟ ಬಂದಾಗ ಪ್ರಾರ್ಥಿಸಿದ್ದುಂಟು. ಆದರೆ ನೀವೇನು ನೆನಸ್ತೀರಾ, ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳ್ತಾನಾ? [ಉತ್ತರಕ್ಕಾಗಿ ಕಾಯಿರಿ.] ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕಾದರೆ ನಾವು ಏನು ಮಾಡೋ ಅಗತ್ಯ ಇದೆ ಅಂತ ಬೈಬಲ್ ಹೇಳೋ ವಿಷಯಗಳನ್ನು ನಿಮಗೆ ತಿಳಿಯೋಕೆ ಇಷ್ಟ ಇದ್ಯಾ?” ಮನೆಯವರಿಗೆ ಆಸಕ್ತಿಯಿದ್ದರೆ ಅಕ್ಟೋಬರ್ ಡಿಸೆಂಬರ್ ಕಾವಲಿನಬುರುಜುವಿನ ಕೊನೇ ಪುಟವನ್ನು ತೋರಿಸಿ ಅಲ್ಲಿರುವ 2ನೇ ಪ್ರಶ್ನೆಯ ಕೆಳಗಿರುವ ವಿಷಯಭಾಗ ಓದಿ, ಚರ್ಚಿಸಿ. ಒಂದು ವಚನವನ್ನಾದರೂ ಓದಿ. ಪತ್ರಿಕೆಗಳನ್ನು ನೀಡಿ. ಇನ್ನೊಂದು ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಈ ವಠಾರದಲ್ಲಿ ಇರೋ ಅನೇಕರನ್ನು ಭೇಟಿಮಾಡಿ ದೇವರು ಯಾಕೆ ಇಷ್ಟೊಂದು ಕಷ್ಟಗಳನ್ನು ಹಾಗೇ ಬಿಟ್ಟಿದ್ದಾನೆ ಅಂತ ಚರ್ಚಿಸುತ್ತಾ ಇದ್ದೀವಿ. ನಿಮಗೆ ಯಾವತ್ತಾದರೂ ಈ ಪ್ರಶ್ನೆ ಬಂದಿದ್ಯಾ? [ಉತ್ತರಕ್ಕಾಗಿ ಕಾಯಿರಿ.] ಕಷ್ಟ ಕಣ್ಣೀರು ಇದ್ಯಾವುದರ ಸುಳಿವೇ ಇಲ್ಲದ ಹಾಗೇ ಮಾಡ್ತೀನಿ ಅಂತ ದೇವರು ಮಾತುಕೊಟ್ಟಿದ್ದಾನೆ. ಅದನ್ನೇ ಓದಿಹೇಳಲಾ? [ಮನೆಯವರಿಗೆ ಆಸಕ್ತಿಯಿದ್ದರೆ ಪ್ರಕಟನೆ 21:4 ಓದಿ.] ಈ ಪತ್ರಿಕೆ, ಕಷ್ಟಗಳ ಹಿಂದಿರುವ ಐದು ಕಾರಣಗಳನ್ನು ತಿಳಿಸುತ್ತೆ. ಅಷ್ಟೇ ಅಲ್ಲ ಇದನ್ನೆಲ್ಲ ದೇವರು ಹೇಗೆ ಪರಿಹರಿಸುತ್ತಾನೆ ಅಂತ ಕೂಡ ತಿಳಿಸುತ್ತೆ.”