ಮಾದರಿ ನಿರೂಪಣೆಗಳು
ಅಕ್ಟೋಬರ್‌ನ ಮೊದಲ ಶನಿವಾರ ಬೈಬಲ್ ಅಧ್ಯಯನ ಆರಂಭಿಸಲು
“ಹೆಚ್ಚಿನ ಜನ ಒಂದಲ್ಲ ಒಂದು ಸಲವಾದರೂ ಪ್ರಾರ್ಥನೆ ಮಾಡುತ್ತಾರೆ. ನಮ್ಮ ಪ್ರಾರ್ಥನೆಗಳ ಬಗ್ಗೆ ದೇವರಿಗೆ ಹೇಗನಿಸಬಹುದು? ನಮ್ಮ ಪ್ರಾರ್ಥನೆಗಳಿಗೆ ಬೆಲೆ ಕೊಡುತ್ತಾನಾ ಇಲ್ಲವಾ? ನಿಮಗೇನು ಅನಿಸುತ್ತದೆ?” ಪ್ರತಿಕ್ರಿಯೆಗಾಗಿ ಕಾಯಿರಿ. “ಇದರ ಬಗ್ಗೆ ಆಸಕ್ತಿಕರವಾದ ಒಂದು ವಿಷಯವನ್ನು ನಿಮಗೆ ತಿಳಿಸಲಾ?” ಮನೆಯವನು ಒಪ್ಪಿದರೆ, ಅಕ್ಟೋಬರ್-ಡಿಸೆಂಬರ್ ತಿಂಗಳ ಕಾವಲಿನಬುರುಜು ಪತ್ರಿಕೆಯ ಕೊನೆ ಪುಟದಲ್ಲಿರುವ ಮೊದಲ ಪ್ರಶ್ನೆಯನ್ನು ಮತ್ತು ಕೊಡಲಾದ ವಚನಗಳಲ್ಲಿ ಕಡಿಮೆ ಪಕ್ಷ ಒಂದನ್ನಾದರೂ ಚರ್ಚಿಸಿ. ಪತ್ರಿಕೆ ಕೊಟ್ಟು ಮುಂದಿನ ಪ್ರಶ್ನೆ ಚರ್ಚಿಸಲು ತಳಪಾಯ ಹಾಕಿ.
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಒಳ್ಳೆಯವರಿಗೇ ಯಾಕೆ ಕಷ್ಟಗಳು ಬರುತ್ತವೆ? ಅಂತ ತುಂಬ ಜನ ಕೇಳುತ್ತಾರೆ. ನಿಮಗೇನು ಅನಿಸುತ್ತದೆ? ಇದಕ್ಕೆಲ್ಲಾ ಯಾರು ಕಾರಣ ಇರಬಹುದು? [ಉತ್ತರಕ್ಕಾಗಿ ಕಾಯಿರಿ.] ಇದರ ಬಗ್ಗೆ ಒಂದು ಹಳೆ ಗ್ರಂಥ ಏನು ಹೇಳುತ್ತೆ ಅಂತ ತೋರಿಸಲಾ? [ಮನೆಯವನು ಅನುಮತಿಸಿದರೆ ಯಾಕೋಬ 1:13ನ್ನು ಓದಿ.] ಕೆಟ್ಟತನ, ಕಷ್ಟಗಳು ಯಾಕಿವೆ ಮತ್ತು ಇದನ್ನು ತೆಗೆದುಹಾಕಲು ದೇವರು ಏನು ಮಾಡುತ್ತಾನೆ ಅಂತ ಈ ಪತ್ರಿಕೆ ಹೇಳುತ್ತೆ.”