ಮಾದರಿ ನಿರೂಪಣೆಗಳು
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಎಲ್ಲರೂ ಯಶಸ್ವೀ ಬದುಕನ್ನು ಆಶಿಸ್ತಾರೆ. ಆದ್ರೆ ಅದನ್ನು ಗಳಿಸುವುದು ಹೇಗೆಂದು ನೀವು ನೆನಸ್ತೀರಿ? [ಉತ್ತರಕ್ಕಾಗಿ ಕಾಯಿರಿ.] ಯಶಸ್ವೀ ಬದುಕನ್ನು ಗಳಿಸುವ ಗುಟ್ಟನ್ನು ತೋರಿಸ್ಲಾ? [ಮನೆಯವರು ಒಪ್ಪಿದರೆ ಜ್ಞಾನೋಕ್ತಿ 22:3 ಓದಿ. ಪುಟ 24ರಲ್ಲಿರುವ ಲೇಖನ ತೋರಿಸಿ.] ಯಶಸ್ವೀ ಬದುಕನ್ನು ಗಳಿಸಲು ನಾಲ್ಕು ಹೆಜ್ಜೆಗಳನ್ನು ಈ ಲೇಖನ ವಿವರಿಸುತ್ತದೆ.”
ಎಚ್ಚರ! ಅಕ್ಟೋಬರ್-ಡಿಸೆಂಬರ್
“ನಾವು ಯಾರೊಂದಿಗೆಲ್ಲ ಮಾತಾಡಿದೆವಾ ಅವರಲ್ಲಿ ಹೆಚ್ಚಿನವರು ತಮ್ಮ ಬದುಕಲ್ಲಿ ಒಂದಲ್ಲ ಒಂದು ಅನ್ಯಾಯವನ್ನು ಅನುಭವಿಸಿದ್ದಾರೆ. ಅನ್ಯಾಯವೇ ಇಲ್ಲದ ಸಮಯ ಬರಬಹುದಾ? [ಉತ್ತರಕ್ಕಾಗಿ ಕಾಯಿರಿ.] ಅಂಥ ಸಮಯ ಬರಲಿದೆ ಅಂತ ಹೇಳುವ ಭವಿಷ್ಯವಾಣಿಯನ್ನು ನಾನು ಓದಿದ್ದೇನೆ. ನಿಮಗದನ್ನು ತೋರಿಸ್ಲಾ? [ಮನೆಯವರಿಗೆ ಆಸಕ್ತಿಯಿದ್ದರೆ ಕೀರ್ತನೆ 72:11-14 ಓದಿ.] ಅನ್ಯಾಯವೇ ಇಲ್ಲದಂಥ ಭವಿಷ್ಯತ್ತಿನ ಕುರಿತು ಈ ಪತ್ರಿಕೆ ತಿಳಿಸುತ್ತೆ.”