ತಂದೆ, ಮಗನ ಹುರುಪನ್ನು ಅನುಕರಿಸಿ, ಸ್ಮರಣೆಯನ್ನು ಯಶಸ್ವಿಗೊಳಿಸಿ
1. ಸ್ಮರಣೆಯ ಸಮಯಾವಧಿಯಲ್ಲಿ ಯೆಹೋವನ ಸಾಕ್ಷಿಗಳು ಯಾವ ಪ್ರಯತ್ನ ಮಾಡುತ್ತಿದ್ದಾರೆ?
1 ತನ್ನ ಉದ್ದೇಶವನ್ನು ನೆರವೇರಿಸಲು ಯೆಹೋವನು ಹುರುಪಿನಿಂದ ಕೆಲಸ ಮಾಡುತ್ತಿದ್ದಾನೆ. ಆತನ ರಾಜ್ಯವು ಸಾಧಿಸಲಿರುವ ವಿಷಯಗಳನ್ನು ತಿಳಿಸುತ್ತಾ ಯೆಶಾಯ 9:7 “ಸೇನಾಧೀಶ್ವರನಾದ ಯೆಹೋವನ ಆಗ್ರಹವು [“ಹುರುಪು”, NW] ಇದನ್ನು ನೆರವೇರಿಸುವದು” ಎಂದು ಹೇಳುತ್ತದೆ. ಯೇಸು ಕೂಡ ಭೂಮಿಯಲ್ಲಿದ್ದಾಗ ಸತ್ಯಾರಾಧನೆಯ ಕಡೆಗೆ ಇಂಥದ್ದೇ ಹುರುಪನ್ನು ತೋರಿಸಿದ್ದನು. (ಯೋಹಾ. 2:13-17; 4:34) ಲಕ್ಷಾಂತರ ಯೆಹೋವನ ಸೇವಕರು ಪ್ರತಿ ವರ್ಷ ಸ್ಮರಣೆಯ ಸಮಯಾವಧಿಯಲ್ಲಿ ತಮ್ಮ ಸೇವೆಯನ್ನು ಹೆಚ್ಚಿಸುವ ಮೂಲಕ ಯೆಹೋವನ ಮತ್ತು ಯೇಸುವಿನ ಹುರುಪನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ನೀವೂ ಪ್ರಯತ್ನಿಸುತ್ತೀರಾ?
2. ಮಾರ್ಚ್ 7ರಿಂದ ಏನು ಮಾಡುವಂತೆ ಹುರುಪು ನಮ್ಮನ್ನು ಪ್ರೇರೇಪಿಸುತ್ತದೆ?
2 ಕ್ರಿಸ್ತನ ಸ್ಮರಣೆಯ ಅಭಿಯಾನ: ಈ ಬಾರಿ ಮಾರ್ಚ್ 7ರ ಶನಿವಾರದಿಂದ ಕ್ರಿಸ್ತನ ಸ್ಮರಣೆಯ ಅಭಿಯಾನ ನಡೆಯಲಿದೆ. ಆ ಸಮಯದಲ್ಲಿ ಹುರುಪಿನಿಂದ ಸೇವೆಯಲ್ಲಿ ಭಾಗವಹಿಸಲು ಈಗಲೇ ಯೋಜಿಸಿ. ತಮಗೆ ಕೊಡಲಾಗಿರುವ ಕ್ಷೇತ್ರಗಳನ್ನು ಆವರಿಸಲು ಸಭೆಯಲ್ಲಿರುವ ಪ್ರತಿಯೊಬ್ಬರೂ ಹುರುಪುನಿಂದ ಕೆಲಸ ಮಾಡುವಾಗ ಸಭೆಯಲ್ಲಿ ಉತ್ಸಾಹ ತುಂಬಿ ತುಳುಕುವುದು. ಕರಪತ್ರದ ಒಂದು ಮುದ್ರಿತ ಪ್ರತಿಯನ್ನು ಕೊಟ್ಟು ಅಥವಾ jw.orgಯಲ್ಲಿರುವ ಆಮಂತ್ರಣ ಪತ್ರವನ್ನು ತೋರಿಸಿ, ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು, ಪುನರ್ಭೇಟಿಗಳನ್ನು, ಸಹೋದ್ಯೋಗಿಗಳನ್ನು, ಸಂಬಂಧಿಕರನ್ನು ಮತ್ತು ಸಹಪಾಠಿಗಳನ್ನು ಆಮಂತ್ರಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿ.
3. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಾವು ಸೇವೆಯನ್ನು ಹೇಗೆ ಹೆಚ್ಚಿಸಬಹುದು?
3 ಆಕ್ಸಿಲಿಯರಿ ಪಯನೀಯರ್ ಸೇವೆ: ಸೇವೆಯನ್ನು ಹೆಚ್ಚಿಸಲು ಸಹ ಹುರುಪು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ 30 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಅವಕಾಶವಿದೆ. ಹಾಗಾಗಿ ಆ ತಿಂಗಳಲ್ಲಿ ಅನೇಕರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಕುಟುಂಬ ಆರಾಧನೆಯಲ್ಲಿ ಅಥವಾ ವೈಯಕ್ತಿಕ ಅಧ್ಯಯನ ಮಾಡುವಾಗ ಇದರ ಬಗ್ಗೆ ಪ್ರಾರ್ಥಿಸಿ, ಯೋಜನೆ ಮಾಡಿ. (ಜ್ಞಾನೋ. 15:22) ನೀವು ಅಭಿಯಾನದಲ್ಲಿ ಭಾಗವಹಿಸಲು ತೋರಿಸುವ ಹುರುಪು ಇತರರನ್ನೂ ಪ್ರಚೋದಿಸುತ್ತದೆ. ಹೆಚ್ಚು ಸೇವೆ ಮಾಡಲು ಹೊಂದಾಣಿಕೆಗಳನ್ನು ಮಾಡಿಕೊಳ್ಳುವಲ್ಲಿ ಯೇಸುವಿನಲ್ಲಿದ್ದ ಹುರುಪನ್ನು ನೀವೂ ಅನುಕರಿಸುವಿರಿ.—ಮಾರ್ಕ 6:31-34.
4. ಯೆಹೋವನ ಮತ್ತು ಯೇಸುವಿನ ಹುರುಪನ್ನು ಅನುಕರಿಸುವುದಾದರೆ ಯಾವ ಪ್ರಯೋಜನಗಳಿವೆ?
4 ಕ್ರಿಸ್ತನ ಸ್ಮರಣೆಯ ಈ ಸಮಯಾವಧಿಯಲ್ಲಿ ನಾವೆಲ್ಲರೂ ಯೆಹೋವನ ಮತ್ತು ಯೇಸುವಿನ ಹುರುಪನ್ನು ಅನುಕರಿಸೋಣ. ಹೀಗೆ ಮಾಡುವುದಾದರೆ ನಮಗೆ ಅನೇಕ ಪ್ರಯೋಜನಗಳಿವೆ. ಒಂದು, ನಮ್ಮ ಕ್ಷೇತ್ರದಲ್ಲಿನ ಹೆಚ್ಚಿನ ಜನರಿಗೆ ಸಾಕ್ಷಿ ಸಿಗುತ್ತದೆ. ಎರಡು, ಯೆಹೋವನನ್ನು ಆರಾಧಿಸುವುದರಿಂದ ಮತ್ತು ಇತರರಿಗೆ ಕೊಡುವುದರಿಂದ ಸಿಗುವ ಸಂತೋಷ, ಸಂತೃಪ್ತಿ ನಮ್ಮದಾಗುತ್ತದೆ. (ಅ. ಕಾ. 20:35) ಎಲ್ಲದಕ್ಕಿಂತ ಮುಖ್ಯವಾಗಿ ಯೆಹೋವನನ್ನು ಮತ್ತು ಯೇಸುವನ್ನು ನಾವು ಸಂತೋಷಪಡಿಸುತ್ತೇವೆ.