ಮಾದರಿ ನಿರೂಪಣೆಗಳು
ಎಚ್ಚರ! ಏಪ್ರಿಲ್-ಜೂನ್
“‘ದೇವರು ಇದ್ದಾನಾ?’ ಎನ್ನುವುದರ ಬಗ್ಗೆ ಜನರಿಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ದೇವರ ಮೇಲೆ ನಂಬಿಕೆಯಿಟ್ಟಿರೆ ನಮ್ಮ ಭವಿಷ್ಯ ಚೆನ್ನಾಗಿರುತ್ತೆ ಅಂತ ಕೆಲವರು ಹೇಳುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? [ಉತ್ತರಕ್ಕಾಗಿ ಕಾಯಿರಿ.] ಭವಿಷ್ಯದ ಬಗ್ಗೆ ಭರವಸೆ ನೀಡುವಂಥ ಒಂದು ಆಶ್ವಾಸನೆಯನ್ನು ದೇವರು ಕೊಟ್ಟಿದ್ದಾನೆ. ಅದನ್ನು ನಿಮಗೆ ತೋರಿಸಬಹುದಾ? [ಮನೆಯವರು ಒಪ್ಪಿದರೆ ಕೀರ್ತನೆ 37:10, 11 ಓದಿ.] ದೇವರು ಇದ್ದಾನೋ ಇಲ್ಲವೋ ಅಂತ ನಾವು ಯಾಕೆ ಪರೀಕ್ಷಿಸಬೇಕು ಎನ್ನುವುದಕ್ಕೆ ಈ ಪತ್ರಿಕೆಯಲ್ಲಿ ನಾಲ್ಕು ಕಾರಣಗಳನ್ನು ಕೊಡಲಾಗಿದೆ.”