ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ನೀವು ಮತ್ತು ನಿಮ್ಮ ಕುಟುಂಬವು ಉತ್ತಮವಾದ ಆರೋಗ್ಯವನ್ನು ಅನುಭವಿಸುವ ಹಾಗಿದ್ದರೆ ಎಷ್ಟೋ ಒಳ್ಳೇದಿತ್ತೆಂದು ನೀವು ಹಾರೈಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು 11ನೆಯ ಪುಟದಲ್ಲಿರುವ ಲೇಖನವನ್ನು ತೋರಿಸಿರಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂಥ ಆರು ಸರಳ ವಿಧಾನಗಳನ್ನು ಚರ್ಚಿಸುತ್ತದೆ. ‘ತಾನು ಅಸ್ವಸ್ಥನು’ ಎಂದು ಯಾರೊಬ್ಬನೂ ಹೇಳದಿರುವಂಥ ಒಂದು ಸಮಯವು ಬರಲಿದೆ ಎಂದು ನಮ್ಮ ಸೃಷ್ಟಿಕರ್ತನು ವಾಗ್ದಾನಿಸಿದ್ದಾನೆ.” ಯೆಶಾಯ 33:24ನ್ನು ಓದಿರಿ.
ಕಾವಲಿನಬುರುಜು ಡಿಸೆಂ.15
“ವರ್ಷದ ಈ ಸಮಯದಲ್ಲಿ ಅನೇಕ ಜನರು ಯೇಸುವಿನ ಜನನದ ಕುರಿತು ನೆನಸುತ್ತಾರೆ. ಅವನು ಯಾವ ರೀತಿಯ ಕುಟುಂಬದಲ್ಲಿ ಬೆಳೆದನು ಎಂದು ನೀವೆಂದಾದರೂ ಕುತೂಹಲಪಟ್ಟಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಲೂಕ 2:51, 52ನ್ನು ಓದಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಯೇಸುವಿನ ಪಾಲನೆಯ ಕುರಿತಾದ ಬೈಬಲ್ ದಾಖಲೆಯಿಂದ ನಾವು ಕಲಿಯಸಾಧ್ಯವಿರುವ ಪ್ರಾಯೋಗಿಕ ಪಾಠಗಳನ್ನು ಚರ್ಚಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಬೇರೆ ಬೇರೆ ಕುಲಸಂಬಂಧಿತ ಗುಂಪುಗಳ ಕುರಿತು ನಿಮ್ಮ ಅಭಿಪ್ರಾಯವೇನು? ಎಲ್ಲಾ ಕುಲಸಂಬಂಧಿತ ಗುಂಪುಗಳಿಗೆ ಸೇರಿರುವ ವ್ಯಕ್ತಿಗಳು ದೇವರಿಗೆ ಸ್ವೀಕಾರಾರ್ಹರಾಗಿದ್ದಾರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಅ. ಕೃತ್ಯಗಳು 10:34, 35ನ್ನು ಓದಿರಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಈ ಅಂಶವನ್ನು ವಿವರವಾಗಿ ಚರ್ಚಿಸುತ್ತದೆ ಮತ್ತು ಮಾನವಕುಲದ ಕುರಿತಾದ ದೇವರ ದೃಷ್ಟಿಕೋನವನ್ನು ತಿಳಿದುಕೊಳ್ಳುವುದರಿಂದ ನಾವೆಲ್ಲರೂ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುವೆವು ಎಂಬುದನ್ನು ನಮಗೆ ತಿಳಿಸುತ್ತದೆ.”
ಕಾವಲಿನಬುರುಜು ಜನ.1
“ಅನೇಕರು ಭೂಮಿಯ ಮೇಲಿನ ಶಾಂತಿಗಾಗಿ ಹಂಬಲಿಸುತ್ತಾರೆ. ಈ ಮಾತುಗಳು ಎಂದಾದರೂ ಪೂರೈಸಲ್ಪಡುವುದನ್ನು ನಾವು ಕಣ್ಣಾರೆ ಕಾಣುವೆವು ಎಂದು ನೀವು ನೆನಸುತ್ತೀರೋ? [ಕೀರ್ತನೆ 46:9ನ್ನು ಓದಿರಿ. ನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಇದು ಹೇಗೆ ನೆರವೇರಿಸಲ್ಪಡುತ್ತದೆ ಮತ್ತು ಒಂದು ಯುದ್ಧರಹಿತ ಲೋಕದ ಕುರಿತಾದ ದೇವರ ವಾಗ್ದಾನದಲ್ಲಿ ನಾವು ಏಕೆ ಭರವಸೆಯಿಡಸಾಧ್ಯವಿದೆ ಎಂಬುದನ್ನು ಚರ್ಚಿಸುತ್ತದೆ.”