ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮಾರ್ಚ್‌ ಪು. 2
  • ಅತಿಥಿಗಳನ್ನು ಸ್ವಾಗತಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅತಿಥಿಗಳನ್ನು ಸ್ವಾಗತಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಆದರದಿಂದ ಸ್ವಾಗತಿಸಿ!
    2013 ನಮ್ಮ ರಾಜ್ಯದ ಸೇವೆ
  • ಪ್ರಭಾವಯುತ ಸಾಕ್ಷಿ ನೀಡೋಣ
    2011 ನಮ್ಮ ರಾಜ್ಯದ ಸೇವೆ
  • ಜ್ಞಾಪಕಾಚರಣೆಗೆ ಹಾಜರಾದವರಿಗೆ ನಾವು ಹೇಗೆ ಸಹಾಯ ನೀಡಬಹುದು?
    2008 ನಮ್ಮ ರಾಜ್ಯದ ಸೇವೆ
  • ಅವರನ್ನು ಸಂತೋಷದಿಂದ ಸ್ವಾಗತಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮಾರ್ಚ್‌ ಪು. 2

ನಮ್ಮ ಕ್ರೈಸ್ತ ಜೀವನ

ಅತಿಥಿಗಳನ್ನು ಸ್ವಾಗತಿಸಿ

ಮಾರ್ಚ್‌ 23ರಂದು, ಸುಮಾರು 1 ಕೋಟಿ 20 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಜನರು ಸ್ಮರಣೆಯ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಾಜರಾಗುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಭಾಷಣಗಾರ, ವಿಮೋಚನಾ ಮೌಲ್ಯದ ಬಗ್ಗೆ ಮತ್ತು ಅದರಿಂದ ಇಡೀ ಮಾನವಕುಲಕ್ಕೆ ಸಿಗಲಿರುವ ಆಶೀರ್ವಾದಗಳ ಬಗ್ಗೆ ತಿಳಿಸುತ್ತಾನೆ. ಹೀಗೆ ಹಾಜರಾಗುವವರೆಲ್ಲರಿಗೆ ಪ್ರಬಲ ಸಾಕ್ಷಿ ಸಿಗಲಿದೆ! (ಯೆಶಾ 11:6-9; 35:5, 6; 65:21-23; ಯೋಹಾ 3:16) ಆದರೆ, ಈ ವಿಶೇಷ ಸಂದರ್ಭದಲ್ಲಿ ಭಾಷಣಗಾರ ಮಾತ್ರ ಸಾಕ್ಷಿ ಕೊಡುವುದಿಲ್ಲ. ಅತಿಥಿಗಳನ್ನು ಸ್ವಾಗತಿಸುವ ಮೂಲಕ ನಾವೆಲ್ಲರೂ ಅವರಿಗೆ ಸಾಕ್ಷಿ ಕೊಡಬಹುದು. (ರೋಮ 15:7) ನಾವೇನು ಮಾಡಬಹುದು ಅಂತ ಮುಂದೆ ಕೊಡಲಾಗಿದೆ.

ಯೆಹೋವನ ಸಾಕ್ಷಿಯೊಬ್ಬರು ಸ್ಮರಣೆಗೆ ಬಂದ ವ್ಯಕ್ತಿಯನ್ನು ಸ್ವಾಗತಿಸುತ್ತಿದ್ದಾರೆ; ಯೆಹೋವನ ಸಾಕ್ಷಿಯೊಬ್ಬರು ಸ್ಮರಣೆಗೆ ಬಂದವರಿಗೆ ತಮ್ಮ ಬೈಬಲನ್ನು ತೋರಿಸುತ್ತಿದ್ದಾರೆ
  • ನಿಮ್ಮ ಕುರ್ಚಿಯಲ್ಲಿ ಕುಳಿತು ಕಾರ್ಯಕ್ರಮ ಆರಂಭವಾಗುವವರೆಗೆ ಕಾಯುವ ಬದಲು ಅತಿಥಿಗಳನ್ನು ಮತ್ತು ನಿಷ್ಕ್ರಿಯ ಪ್ರಚಾರಕರನ್ನು ಸ್ನೇಹಭಾವದಿಂದ ನಗುತ್ತಾ ಆಮಂತ್ರಿಸಿ

  • ನಿಮ್ಮ ಆಮಂತ್ರಣಕ್ಕೆ ಕಿವಿಗೊಟ್ಟು ಬಂದಿರುವವರಿಗೆ ವಿಶೇಷ ಗಮನ ಕೊಡಬೇಕು ನಿಜ. ಆದರೆ ಅದೇ ಸಮಯದಲ್ಲಿ ಅಭಿಯಾನದಲ್ಲಿ ಆಮಂತ್ರಣ ಪಡೆದು ಬಂದ ಇತರರನ್ನು ಸ್ವಾಗತಿಸುವುದೂ ನಮ್ಮ ಕರ್ತವ್ಯ. ಹೊಸಬರನ್ನು ನಿಮ್ಮ ಜೊತೆ ಕುಳಿತುಕೊಳ್ಳಲು ಹೇಳಿ. ಅವರಿಗೆ ನಿಮ್ಮ ಬೈಬಲ್‌ ಮತ್ತು ಗೀತೆ ಪುಸ್ತಕ ತೋರಿಸಿ

  • ಭಾಷಣದ ನಂತರ, ಹೊಸಬರ ಪ್ರಶ್ನೆಗೆ ಉತ್ತರಿಸಲು ಸಮಯಮಾಡಿಕೊಳ್ಳಿ. ಕಾರ್ಯಕ್ರಮದ ನಂತರ ಬೇರೊಂದು ಸಭೆ ಆ ಸ್ಥಳವನ್ನು ಉಪಯೋಗಿಸಲಿದ್ದರೆ ನಿಮಗೆ ಸಮಯ ಕಡಿಮೆಯಿರಬಹುದು. ಆಗ ಆಸಕ್ತ ವ್ಯಕ್ತಿಯನ್ನು ಒಂದೆರಡು ದಿನಗಳಲ್ಲಿ ಭೇಟಿಯಾಗಲು ಏರ್ಪಾಡು ಮಾಡಿ. ಅವರನ್ನು ಪುನಃ ಸಂಪರ್ಕಿಸಲಿಕ್ಕಾಗಿ, “ಈ ಕಾರ್ಯಕ್ರಮ ನಿಮಗೆ ಹೇಗನಿಸಿತು ಅಂತ ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮನ್ನು ಹೇಗೆ ಭೇಟಿ ಮಾಡಬಹುದು?” ಅಂತ ಕೇಳಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ