ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಏಪ್ರಿಲ್‌ ಪು. 2
  • ಅವರನ್ನು ಸಂತೋಷದಿಂದ ಸ್ವಾಗತಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅವರನ್ನು ಸಂತೋಷದಿಂದ ಸ್ವಾಗತಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಪ್ರಭಾವಯುತ ಸಾಕ್ಷಿ ನೀಡೋಣ
    2011 ನಮ್ಮ ರಾಜ್ಯದ ಸೇವೆ
  • ಆಸಕ್ತಿಯನ್ನು ತೋರಿಸಿದವರೆಲ್ಲರಿಗೆ ಸಹಾಯ ಮಾಡುವುದು
    1993 ನಮ್ಮ ರಾಜ್ಯದ ಸೇವೆ
  • ಅತಿಥಿಗಳನ್ನು ಸ್ವಾಗತಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಆದರದಿಂದ ಸ್ವಾಗತಿಸಿ!
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಏಪ್ರಿಲ್‌ ಪು. 2

ನಮ್ಮ ಕ್ರೈಸ್ತ ಜೀವನ

ಅವರನ್ನು ಸಂತೋಷದಿಂದ ಸ್ವಾಗತಿಸಿ

ಯಾರನ್ನು? ಕೂಟಗಳಿಗೆ ಬರುವ ಎಲ್ಲರನ್ನು. ಅವರು ನಿಮ್ಮ ಹಳೇ ಸ್ನೇಹಿತರೇ ಆಗಿರಲಿ, ಹೊಸದಾಗಿ ಕೂಟಗಳಿಗೆ ಬಂದಿರುವವರೇ ಆಗಿರಲಿ ಎಲ್ಲರನ್ನೂ ಸ್ವಾಗತಿಸಬೇಕು. (ರೋಮ 15:7; ಇಬ್ರಿ 13:2) ಅವರು ಬೇರೆ ದೇಶದ ಸಾಕ್ಷಿಯಾಗಿರಲಿ ಅಥವಾ ವರ್ಷಗಳ ನಂತರ ಬಂದ ನಿಷ್ಕ್ರಿಯರಾಗಿರಲಿ ನಾವು ಸಂತೋಷದಿಂದ ಸ್ವಾಗತಿಸಬೇಕು. ನಾವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಬಯಸುತ್ತಿದ್ದೆವು? ಬೇರೆಯವರು ನಮ್ಮನ್ನು ಸಂತೋಷದಿಂದ ಸ್ವಾಗತಿಸಬೇಕು ಅಂತ ತಾನೇ? (ಮತ್ತಾ 7:12) ಅದಕ್ಕೇ, ನಾವು ಸಭಾಗೃಹದಲ್ಲಿ ಸುಮ್ಮನೆ ಕೂತುಕೊಳ್ಳದೆ ಕೂಟದ ಮೊದಲು ಮತ್ತು ನಂತರ ಎಲ್ಲರ ಹತ್ತಿರ ಹೋಗಿ ಮಾತಾಡಬೇಕು. ಈ ರೀತಿ ಮಾಡುವಾಗ ಸಂತೋಷ, ಪ್ರೀತಿಯ ವಾತಾವರಣ ಇರುತ್ತದೆ ಮತ್ತು ಯೆಹೋವನಿಗೆ ಮಹಿಮೆ ಬರುತ್ತದೆ. (ಮತ್ತಾ 5:16) ಹಾಜರಾದ ಪ್ರತಿಯೊಬ್ಬರ ಜೊತೆ ಮಾತಾಡಲು ಸಾಧ್ಯವಿಲ್ಲ ನಿಜ. ಆದರೆ ನಮ್ಮಿಂದಾದ ಪ್ರಯತ್ನ ಮಾಡಿದರೆ ಎಲ್ಲರಿಗೂ ಖುಷಿಯಾಗುತ್ತದೆ.a

ನಾವು ಈ ಪ್ರೀತಿಯನ್ನು ಸ್ಮರಣೆಯ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲ, ಯಾವಾಗಲೂ ತೋರಿಸಬೇಕು. ಹೊಸಬರಿಗೆ ನಾವು ಕ್ರೈಸ್ತ ಪ್ರೀತಿ ತೋರಿಸುವಾಗ ಅದನ್ನು ನೋಡಿ ಅವರು ಯೆಹೋವನನ್ನು ಸುತ್ತಿಸಬಹುದು ಮತ್ತು ಆರಾಧಿಸಲು ಮುಂದೆ ಬರಬಹುದು.—ಯೋಹಾ 13:35.

a ಬಹಿಷ್ಕಾರವಾದ ಅಥವಾ ಬೇಕುಬೇಕೆಂದೇ ಸಭೆಯನ್ನು ಬಿಟ್ಟುಹೋದ ವ್ಯಕ್ತಿ ಕ್ರೈಸ್ತ ಕೂಟಗಳಿಗೆ ಹಾಜರಾದಾಗ ಈ ಸಲಹೆ ಅನ್ವಯಿಸುವುದಿಲ್ಲ.—1ಕೊರಿಂ 5:11; 2ಯೋಹಾ 10.

ಸಹೋದರನೊಬ್ಬ ರಾಜ್ಯಸಭಾಗೃಹಕ್ಕೆ ಬಂದ ಹೊಸಬರನ್ನು ವಂದಿಸುತ್ತಿದ್ದಾನೆ

ಹೊಸಬರಿಗೆ ಸಹಾಯ ಮಾಡಲು ಪ್ರಾಯೋಗಿಕ ಸಲಹೆಗಳು

  • ನಿಮ್ಮನ್ನು ಪರಿಚಯಿಸಿಕೊಳ್ಳಿ ಮತ್ತು ಅವರ ಹೆಸರನ್ನು ಕೇಳಿ

  • ನಿಮ್ಮ ಜೊತೆ ಕೂರಿಸಿಕೊಳ್ಳಿ

  • ಅವರಿಗೆ ಬೈಬಲ್‌ ಮತ್ತು ಗೀತೆ ಪುಸ್ತಕ ತೋರಿಸಿ

  • ಕೂಟದ ನಂತರ, ಅವರಿಗೆ ಪ್ರಶ್ನೆಯಿರುವಲ್ಲಿ ಅದನ್ನು ಉತ್ತರಿಸಲು ಸಮಯ ಮಾಡಿಕೊಳ್ಳಿ

  • ಪರಿಸ್ಥಿತಿ ನೋಡಿಕೊಂಡು ಬೈಬಲ್‌ ಅಧ್ಯಯನದ ಬಗ್ಗೆ ಹೇಳಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ