ನಮ್ಮ ಕ್ರೈಸ್ತ ಜೀವನ
“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”
ಸಿದ್ಧಮನಸ್ಸು ತೋರಿಸುವುದರಲ್ಲಿ ಯೆಶಾಯನು ಉತ್ತಮ ಮಾದರಿ ಇಟ್ಟಿದ್ದಾನೆ. ಅಗತ್ಯವಿದ್ದ ಕೆಲಸ ಮಾಡಲು ಅವನು ತಕ್ಷಣವೇ ಒಪ್ಪಿಕೊಂಡ. ಅದರಲ್ಲೂ ಆ ಕೆಲಸದ ಬಗ್ಗೆ ಪೂರ್ತಿ ಗೊತ್ತಿಲ್ಲದೇ ಇದ್ದರೂ ಅದನ್ನು ಒಪ್ಪಿಕೊಂಡ. ಎಂಥ ನಂಬಿಕೆ! (ಯೆಶಾ 6:8) ರಾಜ್ಯ ಪ್ರಚಾರಕರ ಅಗತ್ಯ ತುಂಬಾ ಇರುವ ಸ್ಥಳಕ್ಕೆ ಹೋಗಲು ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳುತ್ತೀರಾ? (ಕೀರ್ತ 110:3) ಈ ರೀತಿಯ ನಿರ್ಧಾರ ಮಾಡುವಾಗ ‘ಸಾಕಾಗುವಷ್ಟು ಹಣ ನನ್ನಲ್ಲಿದೆಯಾ?’ ಎಂದು ಲೆಕ್ಕ ಹಾಕಬೇಕು. (ಲೂಕ 14:27, 28) ಸಾರುವ ಕೆಲಸಕ್ಕಾಗಿ ತ್ಯಾಗ ಮಾಡಲು ಮನಸ್ಸು ಮಾಡಿ. (ಮತ್ತಾ 8:20; ಮಾರ್ಕ 10:28-30) ಅಗತ್ಯ ಇರುವಲ್ಲಿ ಸೇವೆ ಮಾಡಲು ಮುಂದೆ ಬನ್ನಿ ವಿಡಿಯೋದಲ್ಲಿ ತೋರಿಸಿದಂತೆ ಯೆಹೋವನ ಸೇವೆಯಲ್ಲಿ ನಮಗೆ ಸಿಗುವ ಆಶೀರ್ವಾದಕ್ಕೆ ಹೋಲಿಸುವಾಗ ನಾವು ಮಾಡುವ ತ್ಯಾಗಗಳು ಏನೇನೂ ಅಲ್ಲ.
ವಿಡಿಯೋ ನೋಡಿದ ನಂತರ, ಮುಂದಿನ ಪ್ರಶ್ನೆಗಳನ್ನು ಕೇಳಿ:
ಎಕ್ವಾಡಾರ್‌ನಲ್ಲಿ ಸೇವೆ ಮಾಡಲು ವಿಲಿಯಮ್ಸ್ ಕುಟುಂಬ ಯಾವ ತ್ಯಾಗಗಳನ್ನು ಮಾಡಿತು?
ಎಲ್ಲಿ ಸೇವೆ ಮಾಡಬೇಕು ಎಂದು ನಿರ್ಧರಿಸುವಾಗ ಅವರು ಯಾವ ಅಂಶಗಳ ಬಗ್ಗೆ ಯೋಚಿಸಿದರು?
ಯಾವ ಆಶೀರ್ವಾದಗಳನ್ನು ಪಡೆದುಕೊಂಡರು?
ಅಗತ್ಯವಿರುವ ಕಡೆ ಹೋಗಿ ಸೇವೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಎಲ್ಲಿ ಕಂಡುಕೊಳ್ಳಬಲ್ಲಿರಿ?
ನಿಮ್ಮ ಮುಂದಿನ ಕುಟುಂಬ ಆರಾಧನೆಯಲ್ಲಿ, ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:
ಕುಟುಂಬವಾಗಿ ನಮ್ಮ ಸೇವೆಯನ್ನು ಹೇಗೆ ಹೆಚ್ಚು ಮಾಡಬಹುದು? (ನಮ್ಮ ರಾಜ್ಯ ಸೇವೆ 8/11 ಪು. 4-6)
ಅಗತ್ಯವಿರುವ ಕಡೆ ಹೋಗಿ ಸೇವೆ ಮಾಡಲು ಆಗದಿದ್ದರೆ ನೀವು ಈಗಿರುವ ಸಭೆಯಲ್ಲೇ ಯಾವೆಲ್ಲ ವಿಧಗಳಲ್ಲಿ ಸಹಾಯ ಮಾಡಬಲ್ಲಿರಿ? (ಕಾವಲಿನಬುರುಜು 16.03 ಪು. 23-25)