ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 39-43
ಯೆಹೋವನು ಅವರವರ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವನು
ಬಾಬೆಲಿಗೆ ಶರಣಾಗುವಂತೆ ಯೆಹೋವನು ಹೇಳಿದ ಮಾತಿಗೆ ಚಿದ್ಕೀಯನು ಅವಿಧೇಯನಾದನು
ಚಿದ್ಕೀಯನ ಕಣ್ಣೆದುರಿಗೇ ಅವನ ಮಕ್ಕಳನ್ನು ಕೊಲ್ಲಲಾಯಿತು. ನಂತರ ಅವನ ಕಣ್ಣುಗಳನ್ನು ಕಿತ್ತು, ಬೇಡಿ ಹಾಕಲಾಯಿತು. ಅವನು ಸಾಯುವವರೆಗೂ ಬಾಬೆಲಿನ ಸೆರೆಮನೆಯಲ್ಲೇ ಇದ್ದನು
ಎಬೆದ್ಮೆಲಕನು ಯೆಹೋವನಲ್ಲಿ ಭರವಸೆ ಇಟ್ಟನು ಮತ್ತು ಯೆಹೋವನ ಪ್ರವಾದಿಯಾದ ಯೆರೆಮೀಯನಿಗೆ ದಯೆ ತೋರಿಸಿದನು
ಯೆಹೂದ ನಾಶವಾಗುವಾಗ ಎಬೆದ್ಮೆಲಕನನ್ನು ಸಂರಕ್ಷಿಸುವೆನು ಎಂದು ಯೆಹೋವನು ಮಾತುಕೊಟ್ಟನು
ಯೆರೂಸಲೇಮ್ ನಾಶವಾಗುವವರೆಗೆ ಅನೇಕ ವರ್ಷಗಳ ಕಾಲ ಯೆರೆಮೀಯನು ಧೈರ್ಯದಿಂದ ಸಾರಿದನು
ಬಾಬೆಲಿನವರು ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಯೆಹೋವನು ಯೆರೆಮೀಯನನ್ನು ಸಂರಕ್ಷಿಸಿದನು ಮತ್ತು ಅವನನ್ನು ಬಾಬೆಲಿನವರು ಬಿಡುಗಡೆ ಮಾಡುವಂತೆ ನೋಡಿಕೊಂಡನು