ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 44-48
“ಮಹಾಪದವಿಯನ್ನು ನಿರೀಕ್ಷಿಸಬೇಡ”
ಬಾರೂಕನು ಅರಮನೆಯ ವಿದ್ಯಾವಂತ ಅಧಿಕಾರಿಯಾಗಿದ್ದಿರಬಹುದು. ಅವನು ಯೆಹೋವನನನ್ನು ಆರಾಧಿಸುತ್ತಿದ್ದನು ಮತ್ತು ನಂಬಿಗಸ್ತಿಕೆಯಿಂದ ಯೆರೆಮೀಯನಿಗೆ ಸಹಾಯಮಾಡುತ್ತಿದ್ದನು. ಆದರೆ ಒಂದು ಸಂದರ್ಭದಲ್ಲಿ ಅವನು ತನ್ನ ಸಮತೋಲನವನ್ನು ಕಳೆದುಕೊಂಡನು. ಅವನು ‘ಮಹಾಪದವಿಯನ್ನು ನಿರೀಕ್ಷಿಸಿದನು,’ ಪ್ರಾಯಶಃ ಅವನು ಅರಮನೆಯಲ್ಲಿ ಇನ್ನೂ ಉನ್ನತ ಪದವಿಗಾಗಿ ಆಶಿಸಿದ್ದಿರಬಹುದು ಅಥವಾ ಐಶ್ವರ್ಯವಂತನಾಗಲು ಬಯಸಿದ್ದಿರಬಹುದು. ಆದರೆ ಬರಲಿರುವ ಯೆರೂಸಲೇಮಿನ ನಾಶನದಿಂದ ಪಾರಾಗಬೇಕೆಂದರೆ ಅವನು ತನ್ನ ಯೋಚನೆಯನ್ನು ಸರಿಪಡಿಸಿಕೊಳ್ಳಬೇಕಿತ್ತು.