ನಮ್ಮ ಕ್ರೈಸ್ತ ಜೀವನ
ನೀವು ನಿಮ್ಮನ್ನೇ ಕ್ಷಮಿಸಿದ್ದೀರಾ?
ನೀವು ಈ ಹಿಂದೆ ಮಾಡಿದ ತಪ್ಪನ್ನು ಯೆಹೋವನು ಕ್ಷಮಿಸಿರಬಹುದು. ಆದರೆ ಕೆಲವೊಮ್ಮೆ ನಿಮಗೆ ನಿಮ್ಮನ್ನೇ ಕ್ಷಮಿಸಲು ಕಷ್ಟ ಆಗಬಹುದು. ಈ ವಿಷಯದ ಬಗ್ಗೆ 2016ರ “ಯೆಹೋವನಿಗೆ ನಿಷ್ಠೆಯಿಂದಿರಿ” ಎಂಬ ಅಧಿವೇಶನದಲ್ಲಿ ಒಂದು ಭಾಷಣ ಮತ್ತು ವಿಡಿಯೋವನ್ನು ನೋಡಿದ್ದೆವು. ಈ ವಿಡಿಯೋವನ್ನು ಮತ್ತೆ ನೋಡಲು JW ಲೈಬ್ರರಿ ಆ್ಯಪನ್ನು ಉಪಯೋಗಿಸಿ, ನಂತರ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
ಸೋನಿಯಾಳಿಗೆ ಬಹಿಷ್ಕಾರವಾಗಿ ಎಷ್ಟು ವರ್ಷವಾಗಿತ್ತು?
ಹಿರಿಯರು ಸೋನಿಯಾಳಿಗೆ ಯಾವ ವಚನ ತೋರಿಸಿದರು? ಅದರಿಂದ ಅವಳಿಗೆ ಹೇಗೆ ಸಹಾಯವಾಯಿತು?
ಅವಳನ್ನು ಪುನಃಸ್ಥಾಪಿಸಿದಾಗ ಸಭೆಯವರು ಅವಳೊಂದಿಗೆ ಹೇಗೆ ನಡೆದುಕೊಂಡರು?
ಸೋನಿಯಾಳ ಮನಸ್ಸಿನಲ್ಲಿ ಸದಾ ಯಾವ ಭಾವನೆ ಕೊರೆಯುತಿತ್ತು? ಅವಳ ತಂದೆ ಅವಳಿಗೆ ಹೇಗೆ ಸಹಾಯಮಾಡಿದರು?