ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು— ಸೇವಾಕ್ಷೇತ್ರದಲ್ಲಿರುವ ಪ್ರತಿಯೊಬ್ಬರನ್ನೂ ಸಂಪರ್ಕಿಸಿ
ಏಕೆ ಪ್ರಾಮುಖ್ಯ: ಜನಾಂಗಗಳ ವಿವಿಧ ಭಾಷೆಗಳವರು ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ತೋರಿಸುವರೆಂದು ಜೆಕರ್ಯನು ಪ್ರವಾದಿಸಿದನು. (ಜೆಕ 8:23) ಆದರೆ ಅವರಿಗೆ ಯಾರು ಕಲಿಸುವರು? (ರೋಮ 10:13-15) ನಮ್ಮ ಸೇವಾಕ್ಷೇತ್ರದಲ್ಲಿರುವ ಪ್ರತಿಯೊಬ್ಬರಿಗೆ ಸುವಾರ್ತೆಯನ್ನು ಸಾರುವ ಸುಯೋಗ ಮತ್ತು ಜವಾಬ್ದಾರಿ ನಮ್ಮದು.—ಸಂಘಟಿತರು ಪುಟ 84, ಪ್ಯಾರ 10-11.
ಹೇಗೆ ಮಾಡುವುದು:
ತಯಾರಿಸಿ. ಬೇರೊಂದು ಭಾಷೆ ಮಾತಾಡುವ ಜನರು ನಿಮಗೆ ಸಿಗುತ್ತಾರಾ? ಹಾಗಿದ್ದರೆ JW ಭಾಷೆ ಆ್ಯಪ್ ಬಳಸಿ ಆ ಭಾಷೆಯಲ್ಲಿ ಒಂದು ಸರಳವಾದ ನಿರೂಪಣೆಯನ್ನು ಕಲಿಯಬಹುದು ಅಥವಾ jw.org ವೆಬ್ಸೈಟಿನಿಂದ ಆ ವ್ಯಕ್ತಿ ಸ್ವಂತ ಭಾಷೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯುವುದು ಹೇಗೆಂದು ನಿಮ್ಮ ಮೊಬೈಲಿನಿಂದ ತೋರಿಸಬಹುದು
ಗಮನಿಸುತ್ತಾ ಇರಿ. ನೀವು ಮನೆಯಿಂದ ಮನೆ ಸೇವೆ ಮಾಡುತ್ತಿದ್ದರೂ, ದಾರಿಯಲ್ಲಿ ಹೋಗುತ್ತಿರುವವರಿಗೆ ಮತ್ತು ಕಾರುಗಳಲ್ಲಿ ಕೂತು ಕಾಯುತ್ತಿರುವವರಿಗೆ ಸಾಕ್ಷಿಕೊಡಿ. ಇಂಥ ಅವಕಾಶಗಳು ಕೈಜಾರಿಹೋಗಲು ಬಿಡಬೇಡಿ. ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿರುವಲ್ಲಿ, ನಿಮ್ಮ ಗಮನವೆಲ್ಲ ಸಾಕ್ಷಿಕೊಡುವುದರ ಮೇಲೆಯೇ ಇರಲಿ
ಶ್ರಮ ಹಾಕಿ. ಮೊದಲ ಬಾರಿ ಹೋದಾಗ ಮನೆಯಲ್ಲಿ ಯಾರೂ ಸಿಗದಿದ್ದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾ ಇರಿ. ಪ್ರತಿ ಮನೆಯಲ್ಲೂ ಒಬ್ಬರನ್ನಾದರೂ ಸಂಪರ್ಕಿಸಲು ಬೇರೆ ಬೇರೆ ದಿನ, ಬೇರೆ ಬೇರೆ ಸಮಯದಲ್ಲಿ ಹೋಗಿ. ಕೆಲವು ಮನೆಯವರನ್ನು ಪತ್ರ, ಫೋನ್ ಅಥವಾ ಬೀದಿ ಸಾಕ್ಷಿಕಾರ್ಯದ ಮೂಲಕ ಸಂಪರ್ಕಿಸಬೇಕಾಗಬಹುದು
ಮತ್ತೆ ಭೇಟಿಯಾಗಿ. ಯಾರಾದರೂ ಆಸಕ್ತಿ ತೋರಿಸಿದರೆ ಪುನಃ ಭೇಟಿಯಾಗಲು ತಡಮಾಡಬೇಡಿ. ಆ ವ್ಯಕ್ತಿಯ ಭಾಷೆ ಬೇರೆಯಾಗಿದ್ದರೆ, ಅವರಿಗೆ ಹೆಚ್ಚಿನ ಸಹಾಯ ಮಾಡಲು ಅವರ ಭಾಷೆಯನ್ನಾಡುವ ಅರ್ಹ ಪ್ರಚಾರಕನನ್ನು ಕಂಡುಹಿಡಿಯಲು ಪ್ರಯತ್ನಿಸಿ. ಅವನ ಭಾಷೆಯನ್ನಾಡುವ ಪ್ರಚಾರಕರು ಅವನನ್ನು ಸಂಪರ್ಕಿಸುವ ತನಕ ನೀವು ಆ ವ್ಯಕ್ತಿಯನ್ನು ಭೇಟಿಮಾಡುತ್ತಾ ಇರಬೇಕು.—ಸಂಘಟಿತರು ಪುಟ 94, ಪ್ಯಾರ 39-40
‘ಭೂಮಿಯ ಕಟ್ಟಕಡೆಯ’ ಪ್ರದೇಶದಲ್ಲಿ ಸಾರುವುದು ವಿಡಿಯೋ ನೋಡಿ, ನಂತರ ಮುಂದಿನ ಪ್ರಶ್ನೆಗಳನ್ನು ಚರ್ಚಿಸಿ:
ತುಂಬ ದೂರದ ಕ್ಷೇತ್ರದಲ್ಲಿರುವ ಜನರನ್ನು ಸಂಪರ್ಕಿಸಲು ಸಹೋದರ ಸಹೋದರಿಯರು ಯಾವೆಲ್ಲ ತಯಾರಿ ಮಾಡಿದರು? (1ಕೊರಿಂ 9:22, 23)
ಅವರು ಯಾವ ತಡೆಗಳನ್ನು ಜಯಿಸಬೇಕಾಯಿತು?
ಅವರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು?
ನಿಮ್ಮ ಸೇವಾಕ್ಷೇತ್ರದಲ್ಲಿರುವ ಹೆಚ್ಚಿನ ಜನರನ್ನು ಸಂಪರ್ಕಿಸಲು ನೀವು ಯಾವ ಪ್ರಯತ್ನಗಳನ್ನು ಮಾಡಬಹುದು?