ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಏಪ್ರಿಲ್‌ ಪು. 15
  • ನಮ್ಮ ನಾಯಿಗಳಿಗೆ ಬಿಸ್ಕೆಟ್‌ ಸಿಕ್ತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ನಾಯಿಗಳಿಗೆ ಬಿಸ್ಕೆಟ್‌ ಸಿಕ್ತು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಅನುರೂಪ ಮಾಹಿತಿ
  • ವೈಧವ್ಯವು ಇಬ್ಬರು ಸ್ತ್ರೀಯರ ಮೇಲೆ ಯಾವ ಪರಿಣಾಮವನ್ನು ಬೀರಿತು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಸಂಸರ್ಗ ಕೇವಲ ಮಾತುಕತೆಗಿಂತ ಹೆಚ್ಚಿನದ್ದು
    ಕಾವಲಿನಬುರುಜು—1993
  • ಯೆಹೋವ ದೇವರ ನಿಷ್ಠೆ ಹಾಗೂ ಕ್ಷಮಾಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಆರಾಧಕರ ಕೊಯ್ಲು!
    ಕಾವಲಿನಬುರುಜು—1992
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಏಪ್ರಿಲ್‌ ಪು. 15
ಒಬ್ಬ ವ್ಯಕ್ತಿ ತನ್ನ ನಾಯಿಗಳ ಜೊತೆ ವಾಕಿಂಗ್‌ ಹೋಗುತ್ತಿದ್ದಾನೆ, ಆಗ ತಳ್ಳುಬಂಡಿಯ ಹತ್ರ ನಿಂತಿರೋ ಯೆಹೋವನ ಸಾಕ್ಷಿಗಳನ್ನ ಭೇಟಿಮಾಡ್ತಾನೆ.

ನಮ್ಮ ನಾಯಿಗಳಿಗೆ ಬಿಸ್ಕೆಟ್‌ ಸಿಕ್ತು

“ಅದು 2014ರ ವಸಂತಕಾಲ, ನಾನು ನನ್ನ ಎರಡು ನಾಯಿಗಳನ್ನು ವಾಕಿಂಗ್‌ ಕರಕೊಂಡು ಹೋಗಿದ್ದೆ. ಅಲ್ಲಿ ಯೆಹೋವನ ಸಾಕ್ಷಿಗಳು ತಳ್ಳುಬಂಡಿ ಇಟ್ಟುಕೊಂಡು ನಿಂತಿದ್ರು. ಅವರು ನೀಟಾಗಿ ಡ್ರೆಸ್‌ ಮಾಡಿಕೊಂಡು, ಹೋಗೋ ಬರೋರನ್ನೆಲ್ಲ ನಗುನಗುತ್ತಾ ಮಾತಾಡಿಸ್ತಿದ್ರು” ಅಂತ ಯು.ಎಸ್‌.ಎ., ಆರೆಗಾನ್‌ನಲ್ಲಿರೋ ನಿಕ್‌ ಅವರು ಬರೆದರು.

“ಆ ಸಾಕ್ಷಿಗಳು ಜನರ ಹತ್ರ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು ಮತ್ತು ಅವರು ನಾಯಿಗಳನ್ನ ತುಂಬ ಇಷ್ಟ ಪಡುತ್ತಿದ್ದರು. ಒಂದು ದಿನ ತಳ್ಳುಬಂಡಿ ಹತ್ರ ಇದ್ದ ಎಲೆನ್‌ ನಮ್ಮ ನಾಯಿಗಳಿಗೆ ಬಿಸ್ಕೆಟ್‌ ಹಾಕಿದ್ರು. ಅವತ್ತಿಂದ ಆ ಕಡೆ ಹೋದಾಗೆಲ್ಲಾ ನಮ್ಮ ನಾಯಿಗಳು, ನನ್ನನ್ನ ಅವರ ಹತ್ರ ಎಳೆದುಕೊಂಡು ಹೋಗುತ್ತಿದ್ದವು.

“ತುಂಬಾ ತಿಂಗಳುಗಳ ವರೆಗೆ ಹೀಗೇ ನಡಿತಿತ್ತು. ನಾಯಿಗಳಿಗೆ ಬಿಸ್ಕೆಟ್‌ ಸಿಕ್ತಿತ್ತು, ನನಗೆ ಅವರ ಜೊತೆ ಮಾತಾಡೋಕೆ ಇಷ್ಟ ಆಗ್ತಿತ್ತು. ಆದ್ರೂ ನಾನು ಅವರ ಜೊತೆ ಅಷ್ಟಕ್ಕಷ್ಟೆ ಇರ್ತಿದ್ದೆ. ನನಗೆ 70 ವರ್ಷ ಆಗಿತ್ತು. ಯೆಹೋವನ ಸಾಕ್ಷಿಗಳು ಏನು ನಂಬುತ್ತಾರೆ ಅಂತ ಜಾಸ್ತಿ ಗೊತ್ತಿರಲಿಲ್ಲ. ನನಗೆ ಚರ್ಚಿನವರಿಂದ ಬೇಜಾರಾಗಿತ್ತು. ಅದಕ್ಕೆ ಮನೆಯಲ್ಲೇ ಬೈಬಲ್‌ ಓದಿದರೆ ಸಾಕು ಅಂದುಕೊಂಡಿದ್ದೆ.

“ಇವರು ಮಾತ್ರ ಅಲ್ಲ ನಮ್ಮ ಸಿಟಿಯಲ್ಲಿ ಬೇರೆಬೇರೆ ಕಡೆ ಯೆಹೋವನ ಸಾಕ್ಷಿಗಳು ತಳ್ಳುಬಂಡಿ ಹತ್ರ ನಿಂತಿರೋದನ್ನ ನಾನು ನೋಡಿದ್ದೀನಿ. ಅವರೂ ಜನರ ಹತ್ರ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ರು ಮತ್ತು ಜನರು ಕೇಳೋ ಪ್ರಶ್ನೆಗಳಿಗೆ ಯಾವಾಗಲೂ ಬೈಬಲಿನಿಂದಾನೇ ಉತ್ತರ ಕೊಡುತ್ತಿದ್ದರು. ಇದರಿಂದ ನನಗೆ ಸಾಕ್ಷಿಗಳ ಮೇಲೆ ನಂಬಿಕೆ ಬಂತು.

“ಒಂದಿನ ಎಲೆನ್‌ “ಪ್ರಾಣಿಗಳು ದೇವರು ಕೊಟ್ಟಿರೋ ಗಿಫ್ಟ್‌ ಅಲ್ವಾ?” ಅಂತ ಕೇಳಿದರು. ಅದಕ್ಕೆ ನಾನು “ಹೌದು” ಅಂತ ಹೇಳಿದೆ. ಆಮೇಲೆ ಅವರು ನನಗೆ ಯೆಶಾಯ 11:6-9 ನ್ನ ಓದಿ ತೋರಿಸಿದರು. ಆಗ ನನಗೆ ಬೈಬಲ್‌ ಬಗ್ಗೆ ಇನ್ನೂ ಜಾಸ್ತಿ ಕಲಿಬೇಕು ಅಂತ ಅನಿಸ್ತು. ಆದ್ರೆ ಅವತ್ತು ಅವರ ಹತ್ರ ಯಾವ ಪತ್ರಿಕೆಗಳನ್ನೂ ತೆಗೆದುಕೊಳ್ಳಲಿಲ್ಲ.

“ಹೀಗೆ ದಿನಗಳು ಹೋಗ್ತಾ-ಹೋಗ್ತಾ ನಾನು, ಎಲೆನ್‌ ಮತ್ತು ಅವರ ಗಂಡ ಬ್ರೆಂಟ್‌ ಜೊತೆ ಆಗಾಗ ಮಾತಾಡುತ್ತಿದ್ದೆ. ತುಂಬ ಖುಷಿ ಆಗುತ್ತಿತ್ತು. ಸತ್ಯ ಕ್ರೈಸ್ತರು ಹೇಗಿರಬೇಕು ಅನ್ನೋದು ಬೈಬಲಲ್ಲಿರೋ ಮತ್ತಾಯ ಪುಸ್ತಕದಿಂದ ಅಪೊಸ್ತಲರ ಕಾರ್ಯ ಪುಸ್ತಕದ ತನಕ ಓದಿದ್ರೆ ಗೊತ್ತಾಗುತ್ತೆ, ಅದನ್ನು ಓದಿ ನೋಡಿ ಅಂತ ಹೇಳಿದ್ರು. ನಾನು ಓದಿದೆ. ಸ್ವಲ್ಪ ದಿನಗಳಾದ ಮೇಲೆ 2016ರ ಬೇಸಿಗೆ ಕಾಲದಲ್ಲಿ ನಾನು, ಬ್ರೆಂಟ್‌ ಮತ್ತೆ ಎಲೆನ್‌ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದೆ.

“ಬೈಬಲ್‌ ಕಲಿಯೋಕೆ ಮತ್ತು ಕೂಟಗಳಿಗೆ ಹೋಗೋಕೆ ನಾನು ಕಾಯ್ತಾ ಇರುತ್ತಿದ್ದೆ. ಬೈಬಲ್‌ ಬಗ್ಗೆ ತಿಳಿದುಕೊಳ್ಳೋಕೆ ನನಗೆ ತುಂಬಾ ಖುಷಿಯಾಗ್ತಿತ್ತು. ಈ ಅವಕಾಶ ಕೊಟ್ಟಿದ್ದಕ್ಕೆ ಯೆಹೋವನಿಗೆ ತುಂಬಾ ಥ್ಯಾಂಕ್ಸ್‌ ಹೇಳ್ತೀನಿ. ಒಂದು ವರ್ಷ ಆದಮೇಲೆ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ಈಗ ನನಗೆ 79 ವರ್ಷ, ನಾನೀಗ ಸತ್ಯ ಧರ್ಮದಲ್ಲಿ ಇದ್ದೀನಿ ಅನ್ನೋದ್ರಲ್ಲಿ ಯಾವ ಸಂಶಯನೂ ಇಲ್ಲ. ಯೆಹೋವ ನನ್ನನ್ನು ಅವರ ಕುಟುಂಬಕ್ಕೆ ಸೇರಿಸಿಕೊಂಡಿರೋದು ನನಗೆ ಸಿಕ್ಕಿರೋ ಒಂದು ದೊಡ್ಡ ಆಶೀರ್ವಾದ!”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ