ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಇಂದು

ಶುಕ್ರವಾರ, ಜುಲೈ 25

ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ ನಾನು ನಿಮ್ಮ ಜೊತೆ ಇರ್ತಿನಿ.—ಮತ್ತಾ. 28:20.

ಎರಡನೇ ಮಹಾಯುದ್ಧ ಮುಗಿದಾಗಿಂದ ಇಲ್ಲಿ ತನಕ ಯೆಹೋವನ ಜನ್ರಿಗೆ ಸಾರೋಕೆ ಎಷ್ಟೋ ಅವಕಾಶಗಳು ಸಿಕ್ಕಿವೆ. ಅದಕ್ಕೇ ಅವರು ಈ ಕೆಲಸನ ಎಲ್ಲಾ ಕಡೆ ಖುಷಿಖುಷಿಯಿಂದ ಮಾಡ್ತಾ ಇದ್ದಾರೆ. ಇದ್ರಿಂದ ತುಂಬ ಜನ್ರಿಗೆ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಆಗ್ತಿದೆ. ಇವತ್ತೂ ಕೂಡ ಆಡಳಿತ ಮಂಡಲಿಯ ಸಹೋದರರು ಯೇಸು ತರ ಯೋಚ್ನೆ ಮಾಡಿ ನಮಗೆ ನಿರ್ದೇಶನಗಳನ್ನ ಕೊಡ್ತಾರೆ. ಅದನ್ನ ಸಂಚರಣ ಮೇಲ್ವಿಚಾರಕರು ಮತ್ತು ಹಿರಿಯರು ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ತಿಳಿಸ್ತಾರೆ. ಈ ಅಭಿಷಿಕ್ತ ಹಿರಿಯರು ಯೇಸು ಕ್ರಿಸ್ತನ “ಬಲಗೈಯಲ್ಲಿ” ಇದ್ದಾರೆ. (ಪ್ರಕ. 2:1) ಈ ಹಿರಿಯರಿಂದನೂ ಕೆಲವೊಮ್ಮೆ ತಪ್ಪುಗಳು ಆಗುತ್ತೆ. ಯಾಕಂದ್ರೆ ಇವರೂ ನಮ್ಮ ತರಾನೇ ಅಪರಿಪೂರ್ಣರು. ಹಿಂದಿನ ಕಾಲದಲ್ಲಿದ್ದ ಮೋಶೆ, ಯೆಹೋಶುವ ಮತ್ತು ಅಪೊಸ್ತಲರೂ ಕೆಲವು ತಪ್ಪುಗಳನ್ನ ಮಾಡಿದ್ರು. (ಅರ. 20:12; ಯೆಹೋ. 9:14, 15; ರೋಮ. 3:23) ಹಾಗಿದ್ರೂ ನಾವು ಒಂದು ವಿಷ್ಯ ಮನಸ್ಸಲ್ಲಿ ಇಟ್ಕೊಬೇಕು. ಅದೇನಂದ್ರೆ ನಂಬಿಗಸ್ತನು ವಿವೇಕಿಯಾದ ಆಳನ್ನ ಮತ್ತು ಹಿರಿಯರನ್ನ ಯೇಸು ಕ್ರಿಸ್ತನೇ ಮುಂದೆ ನಿಂತು ನಡೆಸ್ತಿದ್ದಾನೆ ಮತ್ತು ಅವ್ರಿಗೆ ನಿರ್ದೇಶನಗಳನ್ನ ಕೊಡ್ತಿದ್ದಾನೆ. ಹಾಗಾಗಿ ಯೆಹೋವ ನೇಮಿಸಿರೋ ಈ ಸಹೋದರರ ಮೂಲಕ ಬರೋ ನಿರ್ದೇಶನಗಳು ಯಾವಾಗ್ಲೂ ಸರಿಯಾಗೇ ಇರುತ್ತೆ ಅಂತ ಕಣ್ಮುಚ್ಚಿ ನಂಬಬಹುದು. w24.02 23-24 ¶13-14

ದಿನದ ವಚನ ಓದಿ ಚರ್ಚಿಸೋಣ—2025

ಶನಿವಾರ, ಜುಲೈ 26

ನೀವು ದೇವರ ಪ್ರೀತಿಯ ಮಕ್ಕಳಾಗಿ ಇರೋದ್ರಿಂದ ಆತನನ್ನ ಅನುಕರಿಸಿ.—ಎಫೆ. 5:1.

ನಾವು ಯೆಹೋವನನ್ನ ಖುಷಿಪಡಿಸೋಕೆ ಏನು ಮಾಡಬೇಕು? ನಾವು ಆತನನ್ನ ಎಷ್ಟು ಪ್ರೀತಿಸ್ತೀವಿ, ಆತನಿಗೆ ಎಷ್ಟು ಋಣಿಗಳಾಗಿದ್ದೀವಿ ಅಂತ ಜನ್ರಿಗೆ ಹೇಳಬೇಕು. ಯೆಹೋವನಿಗೆ ಹತ್ರ ಆಗೋಕೆ ಮತ್ತು ಆತನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಬೇಕು. (ಯಾಕೋ. 4:8) ಇದೇ ನಮ್ಮ ಮುಖ್ಯ ಗುರಿಯಾಗಿರಬೇಕು. ಯೆಹೋವನಲ್ಲಿರೋ ಪ್ರೀತಿ, ನ್ಯಾಯ, ವಿವೇಕ, ಶಕ್ತಿ ಮತ್ತು ಬೇರೆ ಗುಣಗಳ ಬಗ್ಗೆ ಬೈಬಲಿಂದ ತೋರಿಸಬೇಕು. ಅದಷ್ಟೇ ಅಲ್ಲ, ನಾವು ಇನ್ನೊಂದು ವಿಷ್ಯನೂ ಮಾಡಬೇಕು. ನಾವು ಯೆಹೋವನ ತರ ಇರೋಕೆ ಆದಷ್ಟು ಪ್ರಯತ್ನ ಮಾಡಬೇಕು. ಈ ತರ ಮಾಡೋದ್ರಿಂದ ಬೇರೆಯವ್ರಿಗೂ ನಮಗೂ ಎಷ್ಟು ವ್ಯತ್ಯಾಸ ಇದೆ ಅಂತ ಜನ್ರು ಗಮನಿಸ್ತಾರೆ. (ಮತ್ತಾ. 5:14-16) ನಾವು ಅವ್ರ ಜೊತೆ ಚೆನ್ನಾಗಿ ನಡ್ಕೊಂಡಾಗ್ಲೂ ಯೆಹೋವನನ್ನ ಹೊಗಳೋಕೆ ನಮಗೊಂದು ಅವಕಾಶ ಸಿಗುತ್ತೆ. ಇದ್ರಿಂದ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ತಾರೆ.—1 ತಿಮೊ. 2:3, 4. w24.02 10 ¶7

ದಿನದ ವಚನ ಓದಿ ಚರ್ಚಿಸೋಣ—2025

ಭಾನುವಾರ, ಜುಲೈ 27

ಬೇರೆಯವ್ರನ್ನ ಪ್ರೋತ್ಸಾಹಿಸೋಕೆ . . . ತಿದ್ದೋಕೆ ಆಗುತ್ತೆ.—ತೀತ 1:9.

ಒಬ್ಬ ಯುವ ಸಹೋದರ ಪ್ರೌಢ ಕ್ರೈಸ್ತನಾಗಬೇಕಂದ್ರೆ ಕೆಲವು ಕೌಶಲಗಳನ್ನ ಕಲಿಬೇಕು. ಆಗ ಅವನಿಗೆ ಸಭೆಯಲ್ಲಿ ಕೊಟ್ಟಿರೋ ಕೆಲಸನ ಚೆನ್ನಾಗಿ ಮಾಡೋಕಾಗುತ್ತೆ. ಒಂದು ಕೆಲಸ ಹುಡುಕೊಂಡು ಕುಟುಂಬನ ಚೆನ್ನಾಗಿ ನೋಡ್ಕೊಳ್ಳೋಕೂ ಆಗುತ್ತೆ. ಇದ್ರಿಂದ ಬೇರೆಯವ್ರ ಜೊತೆ ಒಳ್ಳೆ ಸ್ನೇಹ-ಸಂಬಂಧ ಇರುತ್ತೆ. ಉದಾಹರಣೆಗೆ, ಚೆನ್ನಾಗಿ ಓದೋಕೆ, ಬರಿಯೋಕೆ ಕಲಿಬೇಕು. ದೇವರ ವಾಕ್ಯ ಓದಿ ಅದ್ರ ಬಗ್ಗೆ ಯೋಚಿಸುವವನು ಖುಷಿಯಾಗಿರ್ತಾನೆ ಮತ್ತು ಯಶಸ್ಸು ಪಡಿತಾನೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 1:1-3) ಹಾಗಾಗಿ ಒಬ್ಬ ಸಹೋದರ ಪ್ರತಿದಿನ ಬೈಬಲ್‌ ಓದೋದ್ರಿಂದ ಯೆಹೋವ ಹೇಗೆ ಯೋಚಿಸ್ತಾನೆ ಅಂತ ತಿಳ್ಕೊಳ್ಳೋಕಾಗುತ್ತೆ ಮತ್ತು ತನ್ನ ಯೋಚ್ನೆ ಸರಿ ಮಾಡ್ಕೊಂಡು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಾನೆ. (ಜ್ಞಾನೋ. 1:3, 4) ಓದೋಕೆ ಬರಿಯೋಕೆ ಗೊತ್ತಿರೋ ಸಹೋದರರು ಸಭೆಲಿರೋ ಸಹೋದರ ಸಹೋದರಿಯರಿಗೆ ಬೈಬಲಿಂದ ಸಲಹೆ ಮತ್ತು ನಿರ್ದೇಶನ ಕೊಡೋಕೆ ಆಗುತ್ತೆ. ಅಷ್ಟೇ ಅಲ್ಲ ಬೇರೆಯವ್ರ ನಂಬಿಕೆಯನ್ನ ಕಟ್ಟೋ ಹಾಗೆ ಭಾಷಣಗಳನ್ನ ಮತ್ತು ಉತ್ತರವನ್ನ ಕೊಡೋಕೆ ಆಗುತ್ತೆ, ಟಿಪ್ಪಣಿಗಳನ್ನ ಬರೆದುಕೊಳ್ಳೋಕೆ ಆಗುತ್ತೆ. ಇದ್ರಿಂದ ತನ್ನ ನಂಬಿಕೆನೂ ಜಾಸ್ತಿಯಾಗುತ್ತೆ, ಬೇರೆಯವ್ರ ನಂಬಿಕೆಯನ್ನೂ ಜಾಸ್ತಿ ಮಾಡೋಕಾಗುತ್ತೆ. w23.12 26-27 ¶9-11

ದಿನದ ವಚನ ಓದಿ ಚರ್ಚಿಸೋಣ—2025
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ