ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
ಪ್ರಕಟಣೆ
ಹೊಸ ಭಾಷೆ ಲಭ್ಯ: Mbum
  • ಇಂದು

ಶನಿವಾರ, ಜುಲೈ 26

ನೀವು ದೇವರ ಪ್ರೀತಿಯ ಮಕ್ಕಳಾಗಿ ಇರೋದ್ರಿಂದ ಆತನನ್ನ ಅನುಕರಿಸಿ.—ಎಫೆ. 5:1.

ನಾವು ಯೆಹೋವನನ್ನ ಖುಷಿಪಡಿಸೋಕೆ ಏನು ಮಾಡಬೇಕು? ನಾವು ಆತನನ್ನ ಎಷ್ಟು ಪ್ರೀತಿಸ್ತೀವಿ, ಆತನಿಗೆ ಎಷ್ಟು ಋಣಿಗಳಾಗಿದ್ದೀವಿ ಅಂತ ಜನ್ರಿಗೆ ಹೇಳಬೇಕು. ಯೆಹೋವನಿಗೆ ಹತ್ರ ಆಗೋಕೆ ಮತ್ತು ಆತನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಬೇಕು. (ಯಾಕೋ. 4:8) ಇದೇ ನಮ್ಮ ಮುಖ್ಯ ಗುರಿಯಾಗಿರಬೇಕು. ಯೆಹೋವನಲ್ಲಿರೋ ಪ್ರೀತಿ, ನ್ಯಾಯ, ವಿವೇಕ, ಶಕ್ತಿ ಮತ್ತು ಬೇರೆ ಗುಣಗಳ ಬಗ್ಗೆ ಬೈಬಲಿಂದ ತೋರಿಸಬೇಕು. ಅದಷ್ಟೇ ಅಲ್ಲ, ನಾವು ಇನ್ನೊಂದು ವಿಷ್ಯನೂ ಮಾಡಬೇಕು. ನಾವು ಯೆಹೋವನ ತರ ಇರೋಕೆ ಆದಷ್ಟು ಪ್ರಯತ್ನ ಮಾಡಬೇಕು. ಈ ತರ ಮಾಡೋದ್ರಿಂದ ಬೇರೆಯವ್ರಿಗೂ ನಮಗೂ ಎಷ್ಟು ವ್ಯತ್ಯಾಸ ಇದೆ ಅಂತ ಜನ್ರು ಗಮನಿಸ್ತಾರೆ. (ಮತ್ತಾ. 5:14-16) ನಾವು ಅವ್ರ ಜೊತೆ ಚೆನ್ನಾಗಿ ನಡ್ಕೊಂಡಾಗ್ಲೂ ಯೆಹೋವನನ್ನ ಹೊಗಳೋಕೆ ನಮಗೊಂದು ಅವಕಾಶ ಸಿಗುತ್ತೆ. ಇದ್ರಿಂದ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ತಾರೆ.—1 ತಿಮೊ. 2:3, 4. w24.02 10 ¶7

ದಿನದ ವಚನ ಓದಿ ಚರ್ಚಿಸೋಣ—2025

ಭಾನುವಾರ, ಜುಲೈ 27

ಬೇರೆಯವ್ರನ್ನ ಪ್ರೋತ್ಸಾಹಿಸೋಕೆ . . . ತಿದ್ದೋಕೆ ಆಗುತ್ತೆ.—ತೀತ 1:9.

ಒಬ್ಬ ಯುವ ಸಹೋದರ ಪ್ರೌಢ ಕ್ರೈಸ್ತನಾಗಬೇಕಂದ್ರೆ ಕೆಲವು ಕೌಶಲಗಳನ್ನ ಕಲಿಬೇಕು. ಆಗ ಅವನಿಗೆ ಸಭೆಯಲ್ಲಿ ಕೊಟ್ಟಿರೋ ಕೆಲಸನ ಚೆನ್ನಾಗಿ ಮಾಡೋಕಾಗುತ್ತೆ. ಒಂದು ಕೆಲಸ ಹುಡುಕೊಂಡು ಕುಟುಂಬನ ಚೆನ್ನಾಗಿ ನೋಡ್ಕೊಳ್ಳೋಕೂ ಆಗುತ್ತೆ. ಇದ್ರಿಂದ ಬೇರೆಯವ್ರ ಜೊತೆ ಒಳ್ಳೆ ಸ್ನೇಹ-ಸಂಬಂಧ ಇರುತ್ತೆ. ಉದಾಹರಣೆಗೆ, ಚೆನ್ನಾಗಿ ಓದೋಕೆ, ಬರಿಯೋಕೆ ಕಲಿಬೇಕು. ದೇವರ ವಾಕ್ಯ ಓದಿ ಅದ್ರ ಬಗ್ಗೆ ಯೋಚಿಸುವವನು ಖುಷಿಯಾಗಿರ್ತಾನೆ ಮತ್ತು ಯಶಸ್ಸು ಪಡಿತಾನೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 1:1-3) ಹಾಗಾಗಿ ಒಬ್ಬ ಸಹೋದರ ಪ್ರತಿದಿನ ಬೈಬಲ್‌ ಓದೋದ್ರಿಂದ ಯೆಹೋವ ಹೇಗೆ ಯೋಚಿಸ್ತಾನೆ ಅಂತ ತಿಳ್ಕೊಳ್ಳೋಕಾಗುತ್ತೆ ಮತ್ತು ತನ್ನ ಯೋಚ್ನೆ ಸರಿ ಮಾಡ್ಕೊಂಡು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಾನೆ. (ಜ್ಞಾನೋ. 1:3, 4) ಓದೋಕೆ ಬರಿಯೋಕೆ ಗೊತ್ತಿರೋ ಸಹೋದರರು ಸಭೆಲಿರೋ ಸಹೋದರ ಸಹೋದರಿಯರಿಗೆ ಬೈಬಲಿಂದ ಸಲಹೆ ಮತ್ತು ನಿರ್ದೇಶನ ಕೊಡೋಕೆ ಆಗುತ್ತೆ. ಅಷ್ಟೇ ಅಲ್ಲ ಬೇರೆಯವ್ರ ನಂಬಿಕೆಯನ್ನ ಕಟ್ಟೋ ಹಾಗೆ ಭಾಷಣಗಳನ್ನ ಮತ್ತು ಉತ್ತರವನ್ನ ಕೊಡೋಕೆ ಆಗುತ್ತೆ, ಟಿಪ್ಪಣಿಗಳನ್ನ ಬರೆದುಕೊಳ್ಳೋಕೆ ಆಗುತ್ತೆ. ಇದ್ರಿಂದ ತನ್ನ ನಂಬಿಕೆನೂ ಜಾಸ್ತಿಯಾಗುತ್ತೆ, ಬೇರೆಯವ್ರ ನಂಬಿಕೆಯನ್ನೂ ಜಾಸ್ತಿ ಮಾಡೋಕಾಗುತ್ತೆ. w23.12 26-27 ¶9-11

ದಿನದ ವಚನ ಓದಿ ಚರ್ಚಿಸೋಣ—2025

ಸೋಮವಾರ, ಜುಲೈ 28

ದೇವರು ನಿಮಗೆ ಬೆಂಬಲ ಕೊಡ್ತಿದ್ದಾನೆ. ಲೋಕವನ್ನ ಬೆಂಬಲಿಸೋ ಸೈತಾನನಿಗಿಂತ ದೇವರಿಗೆ ತುಂಬ ಶಕ್ತಿ ಇದೆ.—1 ಯೋಹಾ. 4:4.

ನಿಮಗೆ ಭಯ ಆದಾಗೆಲ್ಲಾ ಯೆಹೋವ ಮುಂದೆ ಏನೆಲ್ಲ ಮಾಡ್ತಾನೆ, ಸೈತಾನ ಇಲ್ಲದೇ ಇರುವಾಗ ನಿಮ್ಮ ಜೀವನ ಹೇಗಿರುತ್ತೆ ಅಂತ ಯೋಚಿಸಿ. 2014ರ ಪ್ರಾದೇಶಿಕ ಅಧಿವೇಶನದಲ್ಲಿ ಒಂದು ಅಭಿನಯ ಇತ್ತು. ಅದ್ರಲ್ಲಿ ಒಬ್ಬ ಅಪ್ಪ ತನ್ನ ಕುಟುಂಬದ ಜೊತೆ 2 ತಿಮೊತಿ 3:1-5ರಲ್ಲಿ ಪರದೈಸ್‌ ಬಗ್ಗೆ ಹೇಳಿದಿದ್ರೆ ಹೇಗಿರ್ತಿತ್ತು ಅಂತ ಚರ್ಚೆ ಮಾಡಿದ್ರು. “ಹೊಸ ಲೋಕದಲ್ಲಿ ಪರಿಸ್ಥಿತಿ ತುಂಬ ಚೆನ್ನಾಗಿರುತ್ತೆ. ಎಲ್ರೂ ಖುಷಿಯಾಗಿ ಇರ್ತಾರೆ. ಯಾಕಂದ್ರೆ ಅಲ್ಲಿ ಜನ್ರು ಬೇರೆಯವ್ರ ಬಗ್ಗೆ ಯೋಚಿಸೋರು, ಯೆಹೋವನನ್ನ ಇಷ್ಟ ಪಡೋರು, ತಮ್ಮ ಇತಿಮಿತಿಯನ್ನ ಅರ್ಥಮಾಡ್ಕೊಂಡಿರೋರು, ದೀನತೆ ಇರೋರು, ಯೆಹೋವನನ್ನ ಹೊಗಳೋರು, ಅಪ್ಪಅಮ್ಮನ ಮಾತು ಕೇಳೋರು, ಕೃತಜ್ಞತೆ ಇರೋರು, ನಂಬಿಕೆ ಉಳಿಸ್ಕೊಳ್ಳೋರು, ಕುಟುಂಬದವ್ರನ್ನ ಪ್ರೀತಿಸೋರು, ಒಪ್ಕೊಳ್ಳೋಕೆ ರೆಡಿ ಇರೋರು, ಬೇರೆಯವ್ರ ಬಗ್ಗೆ ಒಳ್ಳೇದನ್ನೇ ಮಾತಾಡೋರು, ಸ್ವನಿಯಂತ್ರಣ ಇರೋರು, ಮೃದು ಸ್ವಭಾವದವರು, ಒಳ್ಳೇತನವನ್ನ ಪ್ರೀತಿಸೋರು, ಬಿಟ್ಟುಕೊಡೋರು, ತಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡೋರು, ಆಸೆಗಳನ್ನ ತೀರಿಸ್ಕೊಳ್ಳದೆ ದೇವರನ್ನ ಇಷ್ಟ ಪಡೋರು, ದೇವರ ಮೇಲೆ ಭಕ್ತಿ ಇರೋರು ಇರ್ತಾರೆ. ಯಾವಾಗ್ಲೂ ಇಂಥವ್ರ ಜೊತೆನೇ ಇರು.” ಈ ತರ ನೀವೂ ನಿಮ್ಮ ಕುಟುಂಬದವ್ರ ಜೊತೆ ಯಾವತ್ತಾದ್ರೂ ಮಾತಾಡಿದ್ದೀರಾ? w24.01 6 ¶13-14

ದಿನದ ವಚನ ಓದಿ ಚರ್ಚಿಸೋಣ—2025
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ