ಮಾನವ ಹಕ್ಕುಗಳ ಕುರಿತು ಕಲಿಸಲಿಕ್ಕಾಗಿರುವ ಒಂದು ಸಾಧನ
ಹದಿನೇಳು ವರ್ಷ ವಯಸ್ಸಿನ ರುಟ್ ಹೆಮನಥ್ ಹೆಲೆ ಎಂಬ ವಿದ್ಯಾರ್ಥಿಯು ಸ್ಪೆಯ್ನ್ ದೇಶದ ಗ್ರಾನಾಡ ಎಂಬ ಸ್ಥಳದಲ್ಲಿ ವಾಸಿಸುತ್ತಾಳೆ. ಹೆಲೆಯ ಅಧ್ಯಾಪಕಿಯು ಮಾನವ ಹಕ್ಕುಗಳ ಕುರಿತು ಒಂದು ಪ್ರಬಂಧವನ್ನು ಬರೆಯುವಂತೆ ಅವಳಿಗೆ ಹೇಳಿದಳು. ಅವಳು ಪ್ರಬಂಧವನ್ನು ಬರೆದು ಮುಗಿಸಿ ಅನೇಕ ವಾರಗಳು ಕಳೆದಿದ್ದವು. ತರುವಾಯ ಬೆಲ್ಜಿಯಮ್ನ, ಬ್ರಸಲ್ಸ್ನಲ್ಲಿರುವ ಯೂರೋಪಿನ ಪರೀಕ್ಷಾ ಮಂಡಳಿಯವರು ಅವಳ ಪ್ರಬಂಧವನ್ನು ತಿದ್ದುಪಡಿಮಾಡಿ, ಅದು ಆಯ್ಕೆಯಾಗಿದೆಯೆಂದು ತಿಳಿಸಿದರು. ಮತ್ತು ತನ್ನ ದೇಶವಾದ ಸ್ಪೆಯ್ನ್ ಅನ್ನು ಪ್ರತಿನಿಧಿಸಲು ಇನ್ನಿತರ ವಿದ್ಯಾರ್ಥಿಗಳೊಂದಿಗೆ ಅವಳು ಆಯ್ಕೆಯಾಗಿದ್ದಳು. ತರುವಾಯ, ಅವಳು ಎಚ್ಚರ! ಪತ್ರಿಕೆಯ ಸಂಪಾದಕರಿಗೆ ಈ ಮುಂದಿನ ಪತ್ರವನ್ನು ಬರೆದಳು.
“ನನಗೆ ಮಾನವ ಹಕ್ಕುಗಳ ಕುರಿತು ಸದ್ಯದ ಮಾಹಿತಿಯು ಬೇಕಾಗಿತ್ತು. ನವೆಂಬರ್ 22, 1998ರ ‘ಅವೇಕ್!’ ಪತ್ರಿಕೆಯಲ್ಲಿದ್ದ ‘ಎಲ್ಲರಿಗೂ ಮಾನವ ಹಕ್ಕುಗಳು ಎಂದಾದರೂ ದಕ್ಕುವವೋ?’ ಎಂಬ ಸಂಚಿಕೆಯು, ನಾನು ಹುಡುಕುತ್ತಿದ್ದ ಮಾಹಿತಿಯನ್ನೇ ಒದಗಿಸಿತು. ಮಾನವ ಹಕ್ಕುಗಳ ದುರುಪಯೋಗವನ್ನು ದೃಷ್ಟಾಂತಿಸಲು, ‘ಎಚ್ಚರ!’ ಪತ್ರಿಕೆಯ ಇತರ ಸಂಚಿಕೆಗಳಲ್ಲಿದ್ದ ಸ್ತ್ರೀಯರ ಭವಿಷ್ಯತ್ತು ಮತ್ತು ಯೆಹೂದಿ ಹತ್ಯಾಕಾಂಡದ ಕುರಿತ ಲೇಖನಗಳಿಂದಲೂ ಸಹ ಮಾಹಿತಿಯನ್ನು ಸಂಗ್ರಹಿಸಿದೆ. [ಮೇ 8, 1998ರ ‘ಎಚ್ಚರ!’ ಪತ್ರಿಕೆ ಮತ್ತು ಆಗಸ್ಟ್ 8, 1998ರ ‘ಅವೇಕ್!’ ಸಂಚಿಕೆಯನ್ನು ನೋಡಿ] ನಾನು ಸಂಶೋಧನೆ ಮಾಡುತ್ತಿದ್ದಾಗ, ‘ಎಚ್ಚರ!’ ಪತ್ರಿಕೆಯಲ್ಲಿ ಅಡಕವಾಗಿರುವಷ್ಟು ಮಾಹಿತಿಯು, ಇನ್ನಾವುದೇ ಪತ್ರಿಕೆಗಳಲ್ಲೋ ಅಥವಾ ಅದಕ್ಕೆ ಸಂಬಂಧಿಸಿರುವ ಯಾವುದೇ ಉಲ್ಲೇಖಗಳ ಪುಸ್ತಕಗಳಲ್ಲೋ ನನಗೆ ಸಿಗಲಿಲ್ಲ. ಅವುಗಳಲ್ಲಿರುವ ಛಾಯಾಚಿತ್ರಗಳು ಕೂಡ ನನ್ನ ಮನಸ್ಸನ್ನು ಸೂರೆಗೊಂಡವು. ಆದ್ದರಿಂದ ಅವುಗಳಲ್ಲಿ ಕೆಲವನ್ನು ನನ್ನ ಪ್ರಬಂಧದಲ್ಲಿ ಸೇರಿಸಿದೆ.
“ನನ್ನ ಪ್ರಬಂಧವು ಬಹುಮಾನವನ್ನು ಗಳಿಸಿದ್ದರಿಂದ, ಒಂದು ವಾರ ಫಿನ್ಲ್ಯಾಂಡ್ನಲ್ಲಿ ತಂಗುವ ಅವಕಾಶ ನನಗೆ ಸಿಕ್ಕಿತು. ಆ ಸಮಯದಲ್ಲಿ ಮಾನವ ಹಕ್ಕುಗಳ ಕುರಿತು ಇನ್ನೂ ಹೆಚ್ಚು ಮಾತಾಡಲು ನನಗೆ ಸಾಧ್ಯವಾಯಿತು. ಮತ್ತು ಈ ರೀತಿಯ ಬಹುಮುಖ್ಯ ವಿವಾದಗಳನ್ನು ಎತ್ತಿತೋರಿಸುವುದರಲ್ಲಿ ‘ಎಚ್ಚರ!’ ಪತ್ರಿಕೆಯ ಮಹತ್ವವನ್ನು ವಿವರಿಸಿದೆ.
“ಜಗತ್ತಿನ ಘಟನೆಗಳ ಕುರಿತು ನಮಗೆ ಮಾಹಿತಿಯನ್ನು ನೀಡುವುದರಲ್ಲಿ ಯಾವಾಗಲೂ ಮುಂದಿರುವುದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ಈ ಮಾಹಿತಿಯಿಂದ ಲಕ್ಷಾಂತರ ಜನರು ಇನ್ನೂ ಹೆಚ್ಚು ಪ್ರಯೋಜನಪಡೆಯುವಂತಾಗಲು ಯೆಹೋವನು ನಿಮ್ಮನ್ನು ಯಾವಾಗಲೂ ಆಶೀರ್ವದಿಸಲಿ.”
[ಪುಟ 23ರಲ್ಲಿರುವ ಚಿತ್ರ]
ರುಟ್ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವಳಿಗೆ ಸಿಕ್ಕಿದ ಪ್ರಮಾಣ ಪತ್ರ