ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 3/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1999
  • ಅನುರೂಪ ಮಾಹಿತಿ
  • ನಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1999
ಇನ್ನಷ್ಟು
ಎಚ್ಚರ!—1999
g99 3/8 ಪು. 30

ನಮ್ಮ ವಾಚಕರಿಂದ

ಸ್ನೇಹಿತರಿಂದ ನಿಗ್ರಹಿಸಲ್ಪಡುವುದು “ಯುವ ಜನರು ಪ್ರಶ್ನಿಸುವುದು . . . ನನ್ನ ಸ್ನೇಹಿತೆಯಿಂದ ನಿಗ್ರಹಿಸಲ್ಪಡುವುದನ್ನು ನಾನು ಹೇಗೆ ದೂರಮಾಡಬಲ್ಲೆ?” (ಮೇ 8, 1998) ಎಂಬ ಲೇಖನವನ್ನು ನಾನು ಎಷ್ಟೊಂದು ಗಣ್ಯಮಾಡಿದೆನೆಂಬುದನ್ನು ಹೇಳಲು ಇಚ್ಛಿಸುತ್ತೇನೆ. ನಾನು ಒಬ್ಬ ವಯಸ್ಕಳಾಗಿದ್ದು, ವಿವಾಹಿತಳಾಗಿದ್ದರೂ, ಈ ಲೇಖನಗಳನ್ನು ಓದುವುದರಲ್ಲಿ ಯಾವಾಗಲೂ ಆನಂದಿಸುತ್ತೇನೆ. ಈ ನಿರ್ದಿಷ್ಟ ಲೇಖನವು, ನಾನು ಮತ್ತು ನನ್ನ ಪತಿಯು ಈಗ ಎದುರಿಸುತ್ತಿರುವಂತಹ ಸನ್ನಿವೇಶಕ್ಕೆ ತುಂಬ ತಕ್ಕದ್ದಾಗಿತ್ತು. ನಾನು ಈ ಲೇಖನವನ್ನು ಕಡಿಮೆ ಅಂದರೆ ಐದು ಬಾರಿ ಓದಿದ್ದೇನೆ. ಯೇಸುವಿಗೂ ಏಕಾಂತದ ಸಮಯದ ಅಗತ್ಯವಿತ್ತು ಎಂಬುದನ್ನು ತಿಳಿದುಕೊಳ್ಳಲು ನನಗೆ ಇದು ಸಹಾಯಮಾಡಿತು.

ಪಿ. ಎ., ಟ್ರಿನಿಡಾಡ್‌

ಯಾವುದಾದರೂ ಚಿಕ್ಕಪುಟ್ಟ ತಪ್ಪಭಿಪ್ರಾಯಗಳಿಂದ, ನಾನು ಮತ್ತು ನನ್ನ ಸ್ನೇಹಿತನು ಕೆಲವೊಮ್ಮೆ ಮಾತಾಡುವುದನ್ನು ನಿಲ್ಲಿಸಿಬಿಡುತ್ತೇವೆ. ಆದರೆ, ಇದು ನನ್ನನ್ನು ಎಷ್ಟೊಂದು ಖಿನ್ನಗೊಳಿಸುತ್ತದೆಯೆಂದರೆ, ನನಗೆ ಏಕಾಗ್ರತೆಯನ್ನು ಕೊಡಲಾಗುವುದಿಲ್ಲ. ಈ ಲೇಖನವನ್ನು ಹಲವಾರು ಬಾರಿ ಓದಿದ ಮೇಲೆ, ನಾನು ನನ್ನ ಸ್ನೇಹಿತನನ್ನು ನಿಗ್ರಹಿಸುತ್ತೇನೆಂದು ಮತ್ತು ಇತರ ವಿಷಯಗಳನ್ನು ಮಾಡುವಂತೆ ನಾನು ಅವನಿಗೆ ಸಮಯವನ್ನು ಕೊಡುತ್ತಿಲ್ಲವೆಂದು ತಿಳಿದುಕೊಂಡೆ. ಇತರರೊಂದಿಗೆ ನನ್ನ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಅನೇಕ ವಿಧಗಳನ್ನು ಈ ಲೇಖನವು ತೋರಿಸಿತಾದುದರಿಂದ, ಇದು ನನಗಾಗಿಯೇ ಬರೆದದ್ದೆಂದು ನನಗೆ ಅನಿಸುತ್ತದೆ.

ಆರ್‌. ಎಸ್‌., ಇಂಡಿಯ

ಹಲ್ಲುಕಚ್ಚುನೇರ್ಪಿಕೆ ನಾನು ಇತ್ತೀಚೆಗೆ ನನ್ನ ದಂತವೈದ್ಯರನ್ನು ಭೇಟಿಮಾಡಿದಾಗ, ಹಲ್ಲುಕಚ್ಚುನೇರ್ಪಿಕೆಯ ಕುರಿತಾದ ಲೇಖನವನ್ನು ಹೊಂದಿದ್ದ ಮೇ 8, 1998ರ ಎಚ್ಚರ! ಪತ್ರಿಕೆಯನ್ನು ಅವರಿಗೆ ಕೊಟ್ಟೆ. ಆ ಲೇಖನವು ಬೋಧಪ್ರದವೂ ಸಂಕ್ಷಿಪ್ತವೂ ಮತ್ತು ಅರ್ಥಮಾಡಿಕೊಳ್ಳಸಾಧ್ಯವಾಗುವಂತೆ ಬರೆಯಲ್ಪಟ್ಟಿತು ಎಂದು ದಂತವೈದ್ಯರು ನಂತರ ಹೇಳಿದರು. ರೋಗಿಗಳು ತಮ್ಮ ಚಿಕಿತ್ಸಾ ಕ್ರಮವನ್ನು ತಿಳಿದುಕೊಳ್ಳುವಂತೆ, ಕೆಲವರಿಗೆ ಆ ಲೇಖನದ ಪ್ರತಿಗಳನ್ನು ಕೊಟ್ಟಿದ್ದೇನೆಂದು ಸಹ ಅವರು ಹೇಳಿದರು.

ಟಿ. ಪಿ., ಇಂಗ್ಲೆಂಡ್‌

ವರುಷ 2000 ಜೂನ್‌ 8, 1998ರ ಎಚ್ಚರ! ಪತ್ರಿಕೆಯಲ್ಲಿರುವ “ಬೈಬಲಿನ ದೃಷ್ಟಿಕೋನ: ವರುಷ 2000 ಎಷ್ಟು ಗಮನಾರ್ಹವಾಗಿದೆ?” ಎಂಬ ಲೇಖನವು ಸ್ವಾಗತಾರ್ಹವಾಗಿತ್ತು. ಊಹೆ ಮಾಡುವ ಪ್ರವೃತ್ತಿಯನ್ನು ನಿರುತ್ತೇಜಿಸುವ ನಿಮ್ಮ ನೇರನುಡಿಯನ್ನು ನಾನು ಗಣ್ಯಮಾಡುತ್ತೇನೆ. ನಿಮ್ಮ ಪ್ರಾಮಾಣಿಕತೆಯು, ಯೆಹೋವನ ದಿನದ ಸಮಯದ ಕುರಿತಾದ ಗತಕಾಲದ ಹೇಳಿಕೆಗಳನ್ನು ತುಂಬ ಚೆನ್ನಾಗಿ ವಿವರಿಸುತ್ತದೆ.

ಎಸ್‌. ಡಬ್ಲ್ಯೂ., ಅಮೆರಿಕ

ಕೆಂಬೋಡಿಯದಲ್ಲಿನ ಸಾವುಬದುಕು “ಕೆಂಬೋಡಿಯದಲ್ಲಿನ ಸಾವುಬದುಕಿನಿಂದ ನನ್ನ ದೀರ್ಘ ಪ್ರಯಾಣ” (ಜೂನ್‌ 8, 1998) ಎಂಬ ಲೇಖನಕ್ಕಾಗಿ ತುಂಬ ಉಪಕಾರ. ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದು ಮತ್ತು ಒಬ್ಬ ಸೈನಿಕನೋಪಾದಿ ಪಾರಾಗಿ ಉಳಿಯಲು ಇತರರನ್ನು ಕೊಂದ ವಾತನಾ ಮೀಅಸ್‌ನಂತೆ, ಅನೇಕರು ದುಃಖಕರ ನೆನಪುಗಳ ಮಧ್ಯೆಯೂ ಯೆಹೋವನನ್ನು ಸೇವಿಸುತ್ತಿರುವುದನ್ನು ನೋಡುವುದು ಅದ್ಭುತಕರವಾದ ಸಂಗತಿಯಾಗಿದೆ. ಅವನು ಮೂರು ತಿಂಗಳುಗಳ ಕಾಲ ಗುಂಡಿಯೊಂದರಲ್ಲಿ ಅವಿತುಕೊಂಡಿದ್ದನೆಂಬುದನ್ನು ಓದಿ ನಾನು ಆಶ್ಚರ್ಯಪಟ್ಟೆ. ಶೀಘ್ರವೇ ಅವನು ತನ್ನ ಜೀವಿತದಲ್ಲಿಯೇ ಅತ್ಯಂತ ಮಹಾ ಸುಯೋಗವನ್ನು—ಯೆಹೋವನನ್ನು ತಿಳಿದುಕೊಳ್ಳುವುದು—ಪಡೆದುಕೊಳ್ಳುವೆನೆಂಬುದನ್ನು ಅರಿತಿರಲಿಲ್ಲ.

ಸಿ. ಎಮ್‌. ಎಸ್‌. ಎಲ್‌., ಬ್ರೆಸಿಲ್‌

ನೀವು ಹೊರತೋರಿಕೆಗಳಿಂದ ಯೋಗ್ಯತೆಯನ್ನು ನಿರ್ಣಯಿಸುತ್ತೀರೋ? ಹೊರತೋರಿಕೆಗಳು ಮೋಸಗೊಳಿಸಬಲ್ಲವು. ಇದು ನಾಸ್ರಿದ್ದಿನ್‌ ಹಾಜ್‌ನ ಜಾನಪದ ಕಥೆಯಲ್ಲಿ ಚೆನ್ನಾಗಿ ಚಿತ್ರಿಸಲ್ಪಟ್ಟಿತು. (ಜುಲೈ 8, 1998) ಕೇವಲ ಅವರ ಹೊರತೋರಿಕೆಯ ಆಧಾರದ ಮೇಲೆ ಇತರರನ್ನು ಒಳ್ಳೆಯವರು ಇಲ್ಲವೇ ಕೆಟ್ಟವರೆಂದು ನಿರ್ಣಯಿಸಬಾರದೆಂದು ಮತ್ತು ಯೆಹೋವನು ನಮ್ಮ ಹೊರತೋರಿಕೆಯನ್ನಲ್ಲ, ಹೃದಯದ ಸ್ಥಿತಿಯನ್ನು ನೋಡುತ್ತಾನೆಂಬುದನ್ನು ಮರುಜ್ಞಾಪಿಸಿದ್ದಕ್ಕಾಗಿ ಉಪಕಾರ.

ಎ. ಓ. ಎಫ್‌. ಏ., ಬ್ರೆಸಿಲ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ